Sunday, 19th August 2018

Recent News

ಟೈಗರ್ ಶ್ರಾಫ್ ವೈರಲ್ ಸ್ಟಂಟ್ ವಿಡಿಯೋ ನೋಡಿ

ಮುಂಬೈ: ಬಾಲಿವುಡ್‍ನಲ್ಲಿ ಸ್ಟಂಟ್ ಹಾಗೂ ಮೈಕಟ್ಟಿನ ಮೂಲಕ ಪ್ರೇಕ್ಷಕರ ಮನಗೆದ್ದಿರುವ ನಟ ಟೈಗರ್ ಶ್ರಾಫ್ ಅವರು ನಾಲ್ಕು ದಿನಗಳ ಹಿಂದೆ ಇನ್‍ ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋ ಈಗ ವೈರಲ್ ಆಗಿದೆ.

ಇತ್ತೀಚೆಗೆ ಬಿಡುಗಡೆಯಾಗಿದ್ದ ಬಾಗಿ 2 ಸಿನಿಮಾದ ಮೂಲಕ ನಾಯಕ ಟೈಗರ್ ಬಾಲಿವುಡ್‍ನಲ್ಲಿ ಸದ್ದು ಮಾಡಿದ್ದಾರೆ. ಯುವ ಹಾಗೂ ಉತ್ಸಾಹಿ ನಟರಾಗಿರುವ ಜಾಕಿ ಶ್ರಾಫ್ ಸಮರ ಕಲೆಗಳಲ್ಲಿ ಪರಿಣಿತಿ ಪಡೆದಿದ್ದು, ಇತ್ತೀಚೆಗೆ ಟೇಕ್ವಾಂಡೋದ ಬ್ಯಾಕ್ ಬೆಲ್ಟ್‍ನಲ್ಲಿ ಐದನೇ ಪದವಿಯನ್ನು ಪೂರೈಸಿದ್ದಾರೆ. ಈ ವೇಳೆ ಪ್ರದರ್ಶಿಸಿದ ತಮ್ಮ ಸಾಹಸದ ವಿಡಿಯೋವೊಂದನ್ನು ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಈ ವಿಡಿಯೋವನ್ನು 30 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

I beleive i can fly….#almosttttttt 😔

A post shared by Tiger Shroff (@tigerjackieshroff) on

ಬಾಗಿ 2 ಸಿನಿಮಾ ಬಾಕ್ಸ್ ಆಫೀಸ್‍ನಲ್ಲಿ ಹಿಟ್ ಆಗಿದ್ದು, 165 ಕೋಟಿ ರೂ.ಗಳಿಸಿದೆ. ಅಭಿಮಾನಿಗಳ ಉತ್ತಮ ಪ್ರತಿಕ್ರಿಯೆ ಹಾಗೂ ಪ್ರೋತ್ಸಾಹ ದೊರೆತಿದ್ದು, ಈ ಬೆನ್ನಲ್ಲೇ ನಿರ್ಮಾಪಕರು ಬಾಗಿ 3 ಚಿತ್ರಕ್ಕೆ ಮುಂದಾಗಿದ್ದಾರೆ.

ಬಾಗಿ ಸಿನಿಮಾದಲ್ಲಿ ಟೈಗರ್ ಶ್ರಾಫ್‍ಗೆ ಜೋಡಿಯಾಗಿ ಶ್ರದ್ಧಾ ಕಪೂರ್ ನಟಿಸಿದ್ದರೆ, ಬಾಗಿ-2 ಚಿತ್ರದಲ್ಲಿ ದಿಶಾ ಪಠಾಣಿ ಕಾಣಿಸಿಕೊಂಡಿದ್ದರು. ಬಾಗಿ-3 ಚಿತ್ರದಲ್ಲಿ ಟೈಗರ್‍ಗೆ ಜೋಡಿ ಯಾರು ಆಗಲಿದ್ದಾರೆ ಎನ್ನುವ ಕುತೂಹಲ ಈಗ ಹೆಚ್ಚಾಗಿದೆ.

ದಿಶಾ ಹಾಗೂ ಟೈಗರ್ ಇಬ್ಬರೂ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದ್ದರೂ ಇವರಿಬ್ಬರು ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಎಲ್ಲೂ ಹೇಳಿಕೊಂಡಿಲ್ಲ.

Leave a Reply

Your email address will not be published. Required fields are marked *