ಜೈಲಿನಿಂದ ಬಿಡುಗಡೆಯಾಗಿ ಜಮೀರ್‌ ಮನೆಗೆ ಆಗಮಿಸಿದ ನಾಗೇಂದ್ರ – ಟೈಗರ್‌ ಈಸ್‌ ಬ್ಯಾಕ್‌ ಎಂದ ಸಚಿವ

Public TV
1 Min Read
Tiger is back Zameer Ahmed Khan On B Nagendra Release bengaluru

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (Karnataka Maharshi Valmiki Scheduled Tribe Development Corporation Ltd) ಹಗರಣದ ಪ್ರಮುಖ ಆರೋಪಿ ಮಾಜಿ ಮಂತ್ರಿ ನಾಗೇಂದ್ರಗೆ(Nagendra) ಕೊನೆಗೂ ಬಿಡುಗಡೆ ಭಾಗ್ಯ ಸಿಕ್ಕಿದೆ.

ಸೋಮವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿತ್ತು. ಇಂದು ಬೆಳಗ್ಗೆ ಜಾಮೀನಿನ ವಿಧಿವಿಧಾನಗಳನ್ನು ಪೂರೈಸಿದ ಮಾಜಿ ಮಂತ್ರಿ ನಾಗೇಂದ್ರ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾದರು.

ಜೈಲಿನಿಂದ ಬಿಡುಗಡೆಯಾಗಿ ನೇರವಾಗಿ ಸಚಿವ ಜಮೀರ್ ಅಹ್ಮದ್ (Zameer Ahmed) ನಿವಾಸಕ್ಕೆ ತೆರಳಿ ಮಹತ್ವದ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಮಾತಾಡಿದ ನಾಗೇಂದ್ರ, ಕೇಂದ್ರ ಸರ್ಕಾರ ಮತ್ತು ಇಡಿ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು. ಇದನ್ನೂ ಓದಿ: ಭಾರತ-ಕಿವೀಸ್ ಟೆಸ್ಟ್; ಮೊದಲ ದಿನದಾಟ ಮಳೆಗೆ ಬಲಿ

ರಾಜ್ಯ ಸರ್ಕಾರ ಅಸ್ಥಿರಗೊಳಿಸಲು ಇಡಿ ಮೂಲಕ ಕೇಂದ್ರ ಸರ್ಕಾರ ಯತ್ನಿಸಿದೆ. ಸಿಎಂ-ಡಿಸಿಎಂ ಹೆಸರು ಹೇಳುವಂತೆ ಇಡಿ ಅಧಿಕಾರಿಗಳು ನನ್ನ ಮೇಲೆ ಒತ್ತಡ ಹೇರಿದ್ರು ಎಂದು ಆಪಾದಿಸಿ ಸಂಡೂರು ಉಪಚುನಾವಣೆ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಸಚಿವ ಜಮೀರ್, ಟೈಗರ್ ಈಸ್ ಬ್ಯಾಕ್ ಎಂದು ಬಣ್ಣಿಸಿದರು.

Share This Article