ಆನೇಕಲ್: ಬೆಂಗಳೂರು ಹೊರವಲಯದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಹುಲಿ ಸಫಾರಿಯಲ್ಲಿ ಹೆಣ್ಣು ಹುಲಿಯೊಂದು 3 ಮರಿಗಳಿಗೆ ಜನ್ಮ ನೀಡುವ ಮೂಲಕ ಪ್ರಾಣಿ ಪ್ರಿಯರಲ್ಲಿ ಸಂತಸವನ್ನುಂಟುಮಾಡಿದೆ.
Advertisement
ಹುಲಿ ಸಫಾರಿಯ ಹೆಣ್ಣು ಹುಲಿ ವಿಸ್ಮಯ ಹಾಗೂ ಗಂಡು ಹುಲಿ ಅಮರ್ ಈ 3 ಮರಿಗಳ ತಂದೆ ತಾಯಿ. ಸದ್ಯ ತಾಯಿ ಹಾಗೂ ಮರಿಗಳು ಆರೋಗ್ಯವಾಗಿದ್ದು ಹುಲಿ ಸಫಾರಿಯಲ್ಲಿ ವಿಶೇಷ ಆರೈಕೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಾಣಿ ಪ್ರಿಯರ ಸ್ವರ್ಗ ಎಂದೆ ಕರೆಸಿಕೊಳ್ಳುವ ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಹುಲಿ ಸಫಾರಿಯಲ್ಲಿ ಈಗ ಎಲ್ಲೆಲ್ಲೂ ಸಂಭ್ರಮ ಮನೆ ಮಾಡಿದೆ.
Advertisement
Advertisement
15 ದಿನಗಳ ಹಿಂದೆಯಷ್ಟೇ ಈ ಮುದ್ದಾದ ಮರಿಗಳು ಜನ್ಮ ತಾಳಿವೆ. 2 ಹೆಣ್ಣು ಹಾಗೂ 1 ಗಂಡು ಮರಿಗಳಾಗಿದ್ದು, ತಾಯಿ ವಿಸ್ಮಯ ಜೊತೆ ಮೂರು ಮರಿಗಳ ತುಂಟಾಟ ನೋಡಲು ನಿಜಕ್ಕೂ ಕಣ್ಣಿಗೆ ಹಬ್ಬವನ್ನ ಉಂಟು ಮಾಡಿದೆ.
Advertisement
ಈವರೆಗೂ ಹುಲಿ ಸಫಾರಿಯಲ್ಲಿ 23 ಹುಲಿಗಳಿದ್ದು ಇದೀಗ 3 ಹುಲಿ ಮರಿಗಳ ಜನನದಿಂದ ಹುಲಿಗಳ ಸಂಖ್ಯೆ 26 ಕ್ಕೆ ಏರಿಕೆಯಾಗಿದೆ. ಇದು ಪಾರ್ಕ್‍ನ ಸಿಬ್ಬಂದಿಗಳಿಗೂ ಸಂತಸವನ್ನುಂಟುಮಾಡಿದೆ. ಇನ್ನು ಈ 3 ಹುಲಿ ಮರಿಗಳು ತಾಯಿಯ ಆರೈಕೆಯಲ್ಲಿ ಬೆಳೆಯುತ್ತಿವೆ. ಹುಲಿಮರಿಗಳಗಳ ತಾಯಿ ವಿಸ್ಮಯಗೆ ಪ್ರಾಣಿ ಪಾಲಕರು ವಿಶೇಷ ಆರೈಕೆ ನೀಡುತ್ತಿದ್ದು, ಪ್ರತ್ಯೇಕ ಪಂಜರದಲ್ಲಿ ಇರಿಸಲಾಗಿದೆ. ವೈದ್ಯರು ಸಹ ತಾಯಿ ಹಾಗೂ ಮರಿಗಳ ಬಗ್ಗೆ ಮುತುವರ್ಜಿ ವಹಿಸಿದ್ದಾರೆ.
ಒಟ್ಟಿನಲ್ಲಿ ಮೂರು ಹುಲಿ ಮರಿಗಳ ಜನನದಿಂದ ಬನ್ನೇರುಘಟ್ಟ ಹುಲಿ ಸಫಾರಿಯಲ್ಲಿ ಹಬ್ಬದ ವಾತಾವರಣ ನಿಮಾಣವಾಗಿದೆ. ಈ ಹುಲಿ ಮರಿಗಳ ತುಂಟಾಟವನ್ನು ನೀವು ನೋಡಬೇಕಾದ್ರೆ ಇನ್ನೂ 6 ತಿಂಗಳ ಕಾಲ ಕಾಯಲೇಬೇಕು.