ಚಾಮರಾಜನಗರ: ಕುರುಬರಹುಂಡಿ ಬೆಲಚಲವಾಡಿ ರಸ್ತೆಯಲ್ಲಿ ಹುಲಿ ಪ್ರತ್ಯಕ್ಷವಾಗಿದೆ. ಮುಂಜಾನೆ ಜಮೀನುಗಳ ನಡುವೆ ಭಾರಿ ಗಾತ್ರದ ಹುಲಿರಾಯ ಕಾಣಿಸಿಕೊಂಡಿದೆ.
ಹುಲಿ ಕಂಡು ರೈತರು ಗಾಬರಿಗೊಂಡಿದ್ದಾರೆ. ಹುಲಿ ನಡೆದುಕೊಂಡು ಸಾಗುವ ಹಿಂದೆ ಬರೀ 500 ಅಡಿ ಅಂತರದಲ್ಲಿ ರೈತನೊಬ್ಬ ವೀಡಿಯೋ ಮಾಡಿದ್ದಾನೆ. ಹುಲಿ ಹಿಂದೆ ತಿರುಗಿ ಬರುತ್ತಿದ್ದಂತೆ ರೈತರು ಓಡಿ ಹೋಗಿದ್ದಾರೆ.
ಹುಲಿ ಸೆರೆಗೆ ಡ್ರೋನ್ ಬಳಸುವಂತೆ ರೈತರು ಆಗ್ರಹಿಸಿದ್ದಾರೆ. ಹುಲಿ ಸಂಚಾರದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಕೂಡಲೆ ಹುಲಿ ಸೆರೆ ಹಿಡಿಯುವಂತೆ ರೈತರ ಒತ್ತಾಯ ಮಾಡ್ತಿದ್ದಾರೆ.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಓಂಕಾರ ಅರಣ್ಯ ವಲಯ ವ್ಯಾಪ್ತಿಯ ಕುರುಬರಹುಂಡಿ ಹಾಗೂ ಬೆಲಚಲವಾಡಿ ಗ್ರಾಮದ ಬಳಿ ಹುಲಿ ಸಂಚಾರ ಹೆಚ್ಚಾಗಿದೆ.

