ಚಾಮರಾಜನಗರ: ಭೀಮನಬೀಡು (Bheemanabeedu) ಗ್ರಾಮದಲ್ಲಿ ಮತ್ತೆ ಹುಲಿ (Tiger) ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಹುಲಿ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿದೆ. ಡ್ರೋನ್ ಮೂಲಕ ಕಾರ್ಯಾಚರಣೆ ನಡೆಸಲು ಅಧಿಕಾರಿಗಳು ಹಾಗೂ ಸಿಬ್ಬಂದಿ ಮುಂದಾಗಿದ್ದಾರೆ. ಬಂದೂಕು ಸಮೇತ ಕಾರ್ಯಾಚರಣೆಗೆ ಇಳಿದಿದ್ದಾರೆ. ಇದನ್ನೂ ಓದಿ: ಗ್ಯಾಸ್ ಅಭಾವದ ಮಧ್ಯೆ ಬೀದರ್‌ನ ಸರ್ಕಾರಿ ಶಾಲೆಯ 6 ಸಿಲಿಂಡರ್ ಕಳ್ಳತನ
ಇತ್ತೀಚೆಗೆ ಹಂದಿಯನ್ನು ಹುಲಿ ಕೊಂದಿತ್ತು. ಮೊನ್ನೆ ಕೂಡ ಇದೇ ಗ್ರಾಮದಲ್ಲಿ ಕುರಿಗಳನ್ನು ಬಲಿ ಪಡೆದಿದೆ. ಇದೀಗ ಹುಲಿ ಪ್ರತ್ಯಕ್ಷವಾದ ಹಿನ್ನೆಲೆ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಹುಲಿ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.

