ಚಿಕ್ಕಮಗಳೂರು: ಎರಡ್ಮೂರು ವರ್ಷದ ಹಿಂದಿನ ಹುಲಿಗಳ ವೀಡಿಯೋವನ್ನ ನಗರದ ಗಾಲ್ಫ್ ಕ್ಲಬ್ ಬಳಿ ಕಂಡ ಹುಲಿಗಳು ಎಂದು ಹಳೇ ವೀಡಿಯೋಗೆ ಹೊಸ ರೂಪ ಕೊಟ್ಟು ಹರಿಬಿಟ್ಟಿದ್ದ ಇಬ್ಬರು ಯುವಕರನ್ನ ಪೊಲೀಸರು ಬಂಧಿಸಿದ್ದಾರೆ.
ಎರಡು ದಿನಗಳ ಹಿಂದೆ ಸುಮಾರು ಎರಡ್ಮೂರು ವರ್ಷದ ಹಿಂದಿನ ಹುಲಿಗಳ ಸಂಚಾರದ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ನಗರದ ಗಾಲ್ಫ್ ಕ್ಲಬ್ ಬಳಿ ಕಂಡ ಹುಲಿಗಳು ಎಂದು ಹರಿಬಿಟ್ಟಿದ್ದರು. ವೀಡಿಯೋ ನೋಡಿ ಹುಲಿಗಳು ಕಾಡಂಚಿನ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದವು. ಈಗ ಜಿಲ್ಲಾ ಕೇಂದ್ರಕ್ಕೂ ಬಂದಿವೆ ಎಂದು ಜನ ಆತಂಕಕ್ಕೀಡಾಗಿದ್ದರು.
Advertisement
Advertisement
ಅರಣ್ಯ ಇಲಾಖೆ ಸಿಬ್ಬಂದಿ ಈ ಹುಲಿಗಳನ್ನು ಎಲ್ಲಿ ಹುಡುಕೋದು ಎಂದು ಕಂಗಾಲಾಗಿದ್ದರು. ಆದರೆ ವೀಡಿಯೋ, ಅದರಲ್ಲಿನ ಸಂಭಾಷಣೆ ನೋಡಿದ ಬಳಿಕ ಅದು ಹೊರರಾಜ್ಯದ ಎರಡ್ಮೂರು ವರ್ಷದ ಹಿಂದಿನ ವೀಡಿಯೋ ಎಂದು ಅರಿವಾಗಿದೆ. ಇದು ಹಳೇ ವೀಡಿಯೋ ಎಂದು ಅರಿತ ಅರಣ್ಯ ಇಲಾಖೆ ಹುಲಿ ಹುಡುಕೋದನ್ನು ಬಿಟ್ಟು, ಹುಲಿ ವೀಡಿಯೋ ಹರಿಬಿಟ್ಟಿವರನ್ನು ಹುಡುಕೋಕೆ ಪ್ರಾರಂಭಿಸಿದ್ದರು.
Advertisement
ಕೊನೆಗೆ ಫೇಕ್ ವೀಡಿಯೋ ಹರಿಬಿಟ್ಟ ಸಮೀರ್ ಹುಸೇನ್ ಹಾಗೂ ಸೈಯದ್ ಹುಸೇನ್ ಎಂಬವರನ್ನು ಪತ್ತೆ ಹಚ್ಚಿ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ನಗರದ ಸೆನ್ ಸ್ಟೇಷನ್ ಪೊಲೀಸರು ಇಬ್ಬರನ್ನೂ ಕರೆತಂದು ವಾರ್ನ್ ಮಾಡಿ ಬಿಟ್ಟಿದ್ದಾರೆ. ಇದನ್ನೂ ಓದಿ: ರಾಜ್ಯ ರಾಜಕೀಯದಲ್ಲಿ ಬಿಟ್ ಕಾಯಿನ್ ಬಿರುಗಾಳಿ – ಹ್ಯಾರಿಸ್, ಲಮಾಣಿ ಪುತ್ರರ ಹೆಸರು ಹೇಳಿರೋ ಹ್ಯಾಕರ್ ಶ್ರೀಕಿ
Advertisement
ಎಲ್ಲಿಯೋ ಹುಲಿ. ಎಲ್ಲೋ ರೆಕಾರ್ಡ್ ಆಗಿತ್ತು. ಯಾರೋ ರೆಕಾರ್ಡ್ ಮಾಡಿದ್ದರು. ಇಲ್ಲಿ ಏಕೆ ವೈರಲ್ ಆಯ್ತು ಎಂಬ ಪ್ರಶ್ನೆ ಸ್ಥಳೀಯರು ಹಾಗೂ ಅಧಿಕಾರಿಗಳಲ್ಲಿ ಪ್ರಶ್ನೆ ಮೂಡಿಸಿತ್ತು. ಆದರೆ ಪ್ರವಾಸೋದ್ಯಮ ಜಿಲ್ಲೆಯಲ್ಲಿ ಸುಮಾರು 600ಕ್ಕೂ ಅಧಿಕ ಹೋಂ ಸ್ಟೇ ಹಾಗೂ ರೆಸಾರ್ಟ್ ಗಳಿವೆ. ಹಾಗಾಗಿ, ಪ್ರವಾಸಿಗರನ್ನು ಸೆಳೆಯಲು ಈ ರೀತಿ ಸುಳ್ಳು ಸುದ್ದಿಯನ್ನ ಹಬ್ಬಿಸಿದ್ದಾರೆಂದು ಹೇಳಲಾಗುತ್ತಿದೆ.
ಇಲ್ಲದ ಹುಲಿಯನ್ನ ಇದೆ ಎಂದು ಬಿಂಬಿಸಿ ಗ್ರಾಹಕರನ್ನ ಸೆಳೆಯೋದು, ಜನರನ್ನ ಭಯ ಬೀಳಿಸೋದು ಎಷ್ಟು ಸರಿ ಎಂದು ಪರಿಸರವಾದಿಗಳು ಹಾಗೂ ಹೋಂ ಸ್ಟೇ ಅಸೋಷಿಯನ್ ಸದಸ್ಯರು ಗಾಳಿಸುದ್ದಿಕೋರರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ:ಸೆಲ್ಫಿ ತೆಗೆದುಕೊಳ್ಳುವಾಗ ಬಂಡೆಯಿಂದ ಜಾರಿ ನದಿಗೆ ಬಿದ್ದ ಯುವಕ ಕಣ್ಮರೆ!