ರಾಜ್ಯಾದ್ಯಂತ ಹುಲಿ ಉಗುರು ಪ್ರಕರಣ ಸದ್ದು ಮಾಡುತ್ತಿದೆ. ಅದರಲ್ಲೂ ಸೆಲೆಬ್ರಿಟಿಗಳ ಕೊರಳಲ್ಲಿ ಹುಲಿ ಉಗುರು (Tiger Claw) ಕಂಡ ನೆಟ್ಟಿಗರು, ಒಂದೊಂದೇ ಫೋಟೋ ಶೇರ್ ಮಾಡುತ್ತಾ ವೈರಲ್ ಮಾಡುತ್ತಿದ್ದಾರೆ. ಅವರ ಮೇಲೆ ಕ್ರಮಕ್ಕೆ ಒತ್ತಾಯಿಸುತ್ತಿದ್ದಾರೆ. ಈ ಕುರಿತಂತೆ ಜಗ್ಗೇಶ್ (Jaggesh) ಎಕ್ಸ್ (ಟ್ವಿಟರ್) ಮೂಲಕ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಭಾವನಾತ್ಮಕವಾಗಿಯೂ ಎಕ್ಸ್ ಮಾಡಿದ್ದಾರೆ.
Advertisement
ನನಗೆ 61. ಮುಂದೆ 100 ಆದರು ನನ್ನ ಅಮ್ಮನೇ ನನ್ನ ದೇವರು. ನಾನು ಏನೇ ಕಳೆದುಕೊಂಡರೂ ಸಂಕಟ ಪಡಲ್ಲ. ಆದರೆ, ನನ್ನ ಅಮ್ಮನ ಕಡೇ ಪ್ರೀತಿ ಕಳೆದುಕೊಂಡಿದ್ದು ಶೂನ್ಯದಂತೆ ಆಯಿತು. ತಂದೆ ತಾಯಿ ಹೃದಯದಲ್ಲಿ ಇರಿಸಿಕೊಂಡ ನನಗೆ ತಂದೆ ತಾಯಿ ಅನಾಥಾಶ್ರಮಕ್ಕೆ ಅಟ್ಟುವ ಈ ಕಾಲದ ಕಾಲಜ್ಞಾನಿಗಳಿಗೆ ಪ್ರೀತಿ ಅರಿವಾಗದು. ದೇವರಿದ್ದಾನೆ ಉತ್ತರಿಸಲು. ಕಾಲ ಬರುತ್ತದೆ ನಿಮಗೂ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
Advertisement
Advertisement
ಮತ್ತೊಂದು ಎಕ್ಸ್ (ಟ್ವೀಟ್) ಮಾಡಿ, ‘ಹೋರಾಡುವ ಸಹೋದರ ಸಹೋದರಿಯರೆ, ಖಂಡಿತ ನಿಮ್ಮ ಅವಶ್ಯಕತೆ ಸಮಾಜಕ್ಕೆ ಇದೆ. ಸಮಾಜದಲ್ಲಿ ಅನೇಕ ಕಾಡುಪ್ರಾಣಿ ರೂಪದ ಜನ ಹೆಚ್ಚಿದ್ದಾರೆ. ಅಂಥ ಕೊಳಕರ ಬೆತ್ತಲುಮಾಡಿ. ಭಾಷೆ, ಭ್ರಷ್ಟಾಚಾರ ಪಾಪಕೃತ್ಯ ನೋಡಿದರು ಮೌನಮುನಿಗಳು. ಅದೇ ಕಲಾವಿದರ ವಿಷಯ ಬಂದರೆ ಆರ್ಭಟವೇಕೆ? ಇದು ನಿಮ್ಮನ್ನು ರಂಜಿಸಿದಕ್ಕೆ ನೀಡುವ ಉಡುಗೊರೆಯೇ? ಆದರು ನಿಮಗೆ ಶುಭಕೋರುವೆ ಎಂದು ಬರೆದುಕೊಂಡಿದ್ದಾರೆ ಜಗ್ಗೇಶ್.
Advertisement
ಹೈಕೋರ್ಟ್ ಮೆಟ್ಟಿಲೇರಿದ ಜಗ್ಗೇಶ್
ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಹುಲಿ ಉಗುರು ಧರಿಸಿದವರ ವಿರುದ್ಧ, ಅರಣ್ಯಾಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ. ನಿನ್ನೆಯಷ್ಟೇ ದರ್ಶನ್, ನಿಖಿಲ್ ಕುಮಾರ್, ಜಗ್ಗೇಶ್ ಸೇರಿದಂತೆ ಹಲವರಿಗೆ ನೋಟಿಸ್ ಜಾರಿ ಮಾಡಿದ್ದರು. ಜೊತೆಗೆ ಅವರ ನಿವಾಸಕ್ಕೂ ಅಧಿಕಾರಿಗಳು ತೆರಳಿ ದಾಳಿ ಮಾಡಿದ್ದರು. ಇದನ್ನು ಪ್ರಶ್ನಿಸಿ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಹೈಕೋರ್ಟ್ (High Court) ಮೆಟ್ಟಿಲು ಏರಿದ್ದಾರೆ.
ನಿನ್ನೆ ಅರಣ್ಯಾಧಿಕಾರಿಗಳ ದಾಳಿ ಕಾನೂನು ಬಾಹಿರ. ಅರಣ್ಯಾಧಿಕಾರಿಗಳ ಕ್ರಮ ಸರಿ ಇಲ್ಲ ಎಂದು ಹೈಕೋರ್ಟಿಗೆ ಜಗ್ಗೇಶ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅರಣ್ಯಾಧಿಕಾರಿಗಳ ನಡೆ ಕಾನೂನು ಬಾಹಿರ ಎಂದು ಘೋಷಿಸಲು ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ಅರಣ್ಯಾಧಿಕಾರಿಗಳು ಕೊಟ್ಟಿರುವ ನೋಟೀಸ್ ಅನ್ನು ರದ್ದು ಪಡಿಸಲು ನಟ ಜಗ್ಗೇಶ್ ಮನವಿ ಸಲ್ಲಿಸಿದ್ದಾರೆ.
ನೋಟೀಸ್ (Notice) ಗೆ ಉತ್ತರ ನೀಡುವ ಮುನ್ನವೇ ದಾಳಿ ಮಾಡಿದ್ದಾರೆ. ಪರಶೀಲನೆ ನೆಪದಲ್ಲಿ ಮನೆಯ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಸಂದರ್ಶನದಲ್ಲಿ ಹೇಳಿದ ಮಾತನ್ನ ಆಧರಿಸಿ ತೇಜೋವಧೆ ಮಾಡಲಾಗುತ್ತಿದ್ದೆ ಎಂದು ನಟ ಜಗ್ಗೇಶ್ ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದಾರೆ.
Web Stories