Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ನರಭಕ್ಷಕ ಹುಲಿ ಸೆರೆ ಸಿಕ್ಕಿದ್ದಕ್ಕೆ ಹರಕೆ ತೀರಿಸಿದ ಅರಣ್ಯ ಇಲಾಖೆ ಸಿಬ್ಬಂದಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Chamarajanagar | ನರಭಕ್ಷಕ ಹುಲಿ ಸೆರೆ ಸಿಕ್ಕಿದ್ದಕ್ಕೆ ಹರಕೆ ತೀರಿಸಿದ ಅರಣ್ಯ ಇಲಾಖೆ ಸಿಬ್ಬಂದಿ

Chamarajanagar

ನರಭಕ್ಷಕ ಹುಲಿ ಸೆರೆ ಸಿಕ್ಕಿದ್ದಕ್ಕೆ ಹರಕೆ ತೀರಿಸಿದ ಅರಣ್ಯ ಇಲಾಖೆ ಸಿಬ್ಬಂದಿ

Public TV
Last updated: October 15, 2019 5:55 pm
Public TV
Share
3 Min Read
klr tiger pooja
SHARE

ಚಾಮರಾಜನಗರ: ನರಭಕ್ಷಕ ಹುಲಿ ಬಂಡಿಪುರದಲ್ಲಿ ಸೆರೆ ಸಿಕ್ಕ ಹಿನ್ನಲೆ ಅರಣ್ಯ ಇಲಾಖೆ ಹಾಗೂ ಸುತ್ತಲಿನ ಗ್ರಾಮಸ್ಥರು ಹುಂಡೀಪುರದ ಮಾಳಿಗಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿ ಹರಕೆ ತೀರಿಸಿದ್ದಾರೆ.

ಹುಲಿ ಸೆರೆ ಸಿಕ್ಕರೆ ವಿಶೇಷ ಪೂಜೆ ಸಲ್ಲಿಸುವುದಾಗಿ ಅರಣ್ಯ ಇಲಾಖೆ ಸಿಬ್ಬಂದಿ ಹರಕೆ ಹೊತ್ತುಕೊಂಡಿದ್ದರು. ಅದರಂತೆ ಇಂದು ಹುಂಡೀಪುರದ ಮಾಳಿಗಮ್ಮನ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಹುಲಿ ಸೆರೆಯಾದ ಎರಡು ದಿನಗಳ ನಂತರ ದೇವಿಗೆ ಪೂಜೆ ಸಲ್ಲಿಸಿದ್ದು, ಪ್ರತಿ ಮಂಗಳವಾರ ಪೂಜೆ ಸಲ್ಲಿಸಲು ಅರಣ್ಯ ಇಲಾಖೆ ಹಾಗೂ ಗ್ರಾಮಸ್ಥರು ನಿರ್ಧರಿಸಿದ್ದಾರೆ. ಅರಣ್ಯ ಇಲಾಖೆಯ ಪೂಜೆಗೆ ಗ್ರಾಮಸ್ಥರು ಸಹ ಸಾಥ್ ನೀಡುತ್ತಿದ್ದಾರೆ.

vlcsnap 2019 10 15 17h45m59s026 e1571142108783

ವಿಶೇಷ ಪೂಜೆಗಾಗಿ ಗ್ರಾಮಸ್ಥರು ಪ್ರತಿ ಮನೆಯಿಂದ ಚಂದಾ ಎತ್ತಿದ್ದು, ಹುಂಡಿಪುರ, ಚೌಡಹಳ್ಳಿ, ಹುಲ್ಲೇಪುರ ಮತ್ತು ಶಿವಪುರ ಗ್ರಾಮಸ್ಥರು ವಿಜೃಂಭಣೆಯಿಂದ ಪೂಜೆ ನಡೆಸಿದ್ದಾರೆ. ಪೂಜೆಯ ಅಂಗವಾಗಿ ಸಾವಿರಾರು ಮಂದಿಗೆ ಅನ್ನ ಸಂತರ್ಪಣೆ ಮಾಡುತ್ತಿದ್ದಾರೆ. ವಿಶೇಷವೆಂದರೆ ಹರಕೆ ಹೊತ್ತ ಮರು ದಿನವೇ ಭಾನುವಾರ ಸಂಜೆ ಹುಲಿ ಸೆರೆಯಾಗಿತ್ತು. ಹರಕೆ ಹೊತ್ತ ಕಾರಣದಿಂದಲೇ ಹುಲಿ ಸೆರೆಯಾಗಿದೆ ಎಂದು ಭಾವಿಸಿ ವಿಶೇಷ ಪೂಜೆ ನೆರವೇರಿಸುತ್ತಿದ್ದಾರೆ.

ಸೆರೆಯಾಗಿದ್ದು ಹೇಗೆ?
ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಭಾನುವಾರ ಹುಲಿಯನ್ನು ಸೆರೆ ಹಿಡಿಯಲಾಗಿತ್ತು. ನರಹಂತಕನ ದಾಳಿಯಿಂದ ಚೌಡಹಳ್ಳಿ ಗ್ರಾಮದ ಶಿವಮಾದಯ್ಯ ಮತ್ತು ಶಿವಮಾದಪ್ಪ ಎಂಬುವರು ಬಲಿಯಾಗಿದ್ದರು. ಎಷ್ಟೇ ಕಸರತ್ತು ನಡೆಸಿದರೂ ಸಹ ಹುಲಿ ಸೆರೆ ಸಿಕ್ಕಿರಲಿಲ್ಲ, ಕೊನೆಗೆ ಹರಸಾಹಸ ಪಟ್ಟು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದರು.

vlcsnap 2019 10 15 17h45m37s684

ಬಂಡೀಪುರ ಅರಣ್ಯ ವ್ಯಾಪ್ತಿಯ ಮಗುವಿನಳ್ಳಿ ಬಳಿಯ ಸಿದ್ದಿಕಿ ಜಮೀನಿನಲ್ಲಿ ಭಾನುವಾರ ನರಭಕ್ಷಕ ಹುಲಿ ಕಾಣಿಸಿಕೊಂಡಿತ್ತು. ತಕ್ಷಣವೇ ಅಭಿಮನ್ಯು, ಜಯಪ್ರಕಾಶ್ ಗೋಪಾಲಸ್ವಾಮಿ ನೇತೃತ್ವದ ಸಾಕಾಣೆ ಆನೆ ತಂಡಗಳ ಸಹಾಯದಿಂದ ಅರಣ್ಯ ಇಲಾಖೆ ಹಾಗೂ ವೈದ್ಯರು ಸಿದ್ದಿಕಿ ಜಮೀನನ್ನು ಸುತ್ತುವರಿದಿದ್ದರು. ಈ ವೇಳೆ ಹುಲಿ ಇದ್ದ ಜಾಗದಿಂದ ಸ್ವಲ್ಪ ದೂರದಲ್ಲಿ ನಿಂತಿದ್ದ ವೈದ್ಯರು ಅರವಳಿಕೆ ಗನ್‍ನಿಂದ ಶೂಟ್ ಮಾಡಿದರು. ಆದರೆ ಅರವಳಿಕೆ ಸೂಜಿ ನೇರವಾಗಿ ಚುಚ್ಚಿದ್ದರೂ ನರಭಕ್ಷಕ ವ್ಯಾಘ್ರ ಪ್ರಜ್ಞೆ ಕಳೆದುಕೊಂಡಿರಲಿಲ್ಲ.

ಹುಲಿ ಪೊದೆಯೊಳಗೆ ಅಡಗಿ ಕುಳಿತಿದ್ದರಿಂದ ಅರಣ್ಯ ಇಲಾಖೆ ಸಿಬ್ಬಂದಿ, ವೈದ್ಯರು ವ್ಯಾಘ್ರವನ್ನು ಸುತ್ತುವರಿದು ನಿಂತಿದ್ದರು. ಬಳಿಕ ರಾಣಾ ಹೆಸರಿನ ನಾಯಿ ಸಹಾಯದಿಂದ ಹುಲಿ ಎಲ್ಲಿ ಅಡಗಿ ಕುಳಿತಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಖಚಿತ ಪಡಿಸಿಕೊಂಡರು. ಹುಲಿ ಸೆರೆ ಕಾರ್ಯಾಚರಣೆ ನೋಡಲು ಸ್ಥಳೀಯ ಶಾಸಕ ಸಿ.ಎಸ್.ನಿರಂಜನ ಕುಮಾರ್ ಸಹ ಬಂದಿದ್ದರು. ಅಭಿಮನ್ಯು ನೇತೃತ್ವದ ಸಾಕಾನೆ ನೇತೃತ್ವದಲ್ಲಿ ಹುಲಿ ಬಳಿಗೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ವೈದ್ಯರು ವ್ಯಾಘ್ರನನ್ನು ಬೋನಿಗೆ ಹಾಕಿದ್ದರು.

CNG Tiger

ಬಂಡೀಪುರ ಅರಣ್ಯ ವ್ಯಾಪ್ತಿಯ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದ ರೈತ ಶಿವಲಿಂಗಪ್ಪ ಅಕ್ಟೋಬರ್ 7ರಂದು ಹಸು ಮೇಯಿಸಲು ಹೋಗಿದ್ದಾಗ ಹುಲಿ ತಿಂದು ಹಾಕಿತ್ತು. ಇದಾದ ಬಳಿಕ ಚೌಡಹಳ್ಳಿ ಸಮೀಪದ ಮೂರ್ಕಲ್ಲು ಗುಡ್ಡದ ಬಳಿ ಹುಲಿ ದಾಳಿಗೆ ಹಸು ಬಲಿಯಾಗಿತ್ತು. ಇದರಿಂದ ಭಯಗೊಂಡ ಗ್ರಾಮಸ್ಥರು ಹುಲಿ ಸೆರೆಹಿಡಿಯುವಂತೆ ಪ್ರತಿಭಟನೆ ಮಾಡಿದ್ದರು. ಗ್ರಾಮಸ್ಥರ ಪ್ರತಿಭಟನೆಗೆ ಮಣಿದ ಅರಣ್ಯ ಇಲಾಖೆಯ ಎಪಿಸಿಸಿಎಫ್ ಜಗತ್ ರಾಂ ಹುಲಿಯ ಶೂಟೌಟ್‍ಗೆ ಆದೇಶ ಹೊರಡಿಸಿದ್ದರು. ಹುಲಿ ಶೂಟೌಟ್ ಆದೇಶ ನೀಡಿದ ಬೆನ್ನಲ್ಲೇ ವನ್ಯ ಪ್ರಿಯರು ಟ್ವಿಟ್ಟರ್ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದರು.

ಹುಲಿಯನ್ನು ಶೂಟ್ ಮಾಡಬಾರದು. ಬದಲಿಗೆ ಅದನ್ನು ಸೆರೆಹಿಡಿಯಬೇಕು ಎಂದು ಪ್ರಾಣಿ ಪ್ರಿಯರು ಆಗ್ರಹ ಮಾಡಿದ್ದರು. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಕೂಡ ಚರ್ಚೆಯಾಗಿತ್ತು. ಇದರಿಂದ ಎಚ್ಚೆತ್ತ ಬೆಂಗಳೂರು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್ ಹುಲಿಯನ್ನು ಶೂಟ್ ಮಾಡದೇ ಸೆರೆಹಿಡಿಯುವಂತೆ ಸೂಚನೆ ನೀಡಿದ್ದರು.

Huli Sere A 1

ಹುಲಿಯ ಚಲನವಲನ ಪತ್ತೆಗೆ ಬಂಡೀಪುರ, ಕೆಬ್ಬೇಪುರ, ಮಕ್ಕಳಮಲ್ಲಪ್ಪ ದೇವಸ್ಥಾನದ ಸುತ್ತಮುತ್ತ ಅರಣ್ಯದಲ್ಲಿ 224 ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗಿತ್ತು. ಇದರ ಜೊತೆಗೆ ಕಾರ್ಯಾಚರಣೆಯನ್ನು ತೀವ್ರಗೊಳಿಸಲು ಅರಣ್ಯ ಇಲಾಖೆ ತೀರ್ಮಾನ ಮಾಡಿತ್ತು.

TAGGED:chamarajanagarforest departmentPublic TVtigerworshipಅರಣ್ಯ ಇಲಾಖೆಚಾಮರಾಜನಗರಪಬ್ಲಿಕ್ ಟಿವಿಪೂಜೆಹುಲಿ
Share This Article
Facebook Whatsapp Whatsapp Telegram

Cinema news

AMB Cinemas 2
ಬೆಂಗಳೂರಿನ ಕಪಾಲಿ ಥಿಯೇಟರ್ ಜಾಗದಲ್ಲಿ ಮಹೇಶ್ ಬಾಬು `ಎಎಂಬಿ ಸಿನಿಮಾಸ್’.. ಇದರ ಸ್ಪೆಷಾಲಿಟಿ ಏನು?
Bengaluru City Cinema Latest Main Post South cinema
Rajanikanth
ಸಂಕ್ರಾಂತಿ ದಿನವೇ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಟ್ಟ ತಲೈವಾ.!
Cinema Latest South cinema Top Stories
Samruddhi Ram
ಗ್ಯಾಮ್ಲಿಂಗ್‌ನಲ್ಲಿ ಹಣ ಕಳೆದುಕೊಂಡೆ, 3 ವರ್ಷಗಳಿಂದ ಮನೆಯಿಂದಾಚೆಯಿದ್ದೀನಿ, ಇವರಿಂದ ಬದುಕೋಕೆ ಆಗ್ತಿಲ್ಲ: ಸಮೃದ್ಧಿ ರಾಮ್‌ ಕಣ್ಣೀರು
Bengaluru City Cinema Districts Karnataka Latest Main Post Sandalwood
Pratibha Shetty Samriddhi Ram Karunya Ram
ಮೋಸ ಮಾಡಿದವ್ರು ಉದ್ಧಾರ ಆಗಲ್ಲ – ಸಮೃದ್ಧಿ ರಾಮ್‌ ವಿರುದ್ಧ ಪ್ರತಿಭಾ ಶೆಟ್ಟಿ ಗರಂ
Bengaluru City Cinema Crime Karnataka Latest States Top Stories

You Might Also Like

02 14
Districts

Video | ಅಗ್ನಿ ಅವಘಡ – ಶೀಟ್‌ ಮನೆಯಲ್ಲಿದ್ದ 5 ಲಕ್ಷ ನಗದು ಭಸ್ಮ!

Public TV
By Public TV
4 hours ago
Delhi Weather 1
Latest

ಬೆಚ್ಚಿ ಬೀಳಿಸಿದ ವರದಿ – ದೆಹಲಿಯಲ್ಲಿ ಒಂದೇ ವರ್ಷ 9,000 ಕ್ಕೂ ಹೆಚ್ಚು ಸಾವು!

Public TV
By Public TV
4 hours ago
Mandya Sankranti Fire
Districts

ಸಂಕ್ರಾಂತಿ ವೇಳೆ ಕಿಚ್ಚು ಹಾಯಿಸುವಾಗ ಯಡವಟ್ಟು – ಜನರ ಮೇಲೆ ಎಗರಿದ ಎತ್ತುಗಳು, ಇಬ್ಬರಿಗೆ ಗಾಯ

Public TV
By Public TV
4 hours ago
Dinesh Gundu Rao 1
Bengaluru City

ಸಚಿವ ದಿನೇಶ್ ಗುಂಡೂರಾವ್ ಕಾರ್ಯಕ್ರಮದಲ್ಲಿ ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

Public TV
By Public TV
4 hours ago
Harleen Deol
Cricket

ಡಿಯೋಲ್‌ ಡಿಚ್ಚಿ, ಮುಂಬೈ ಮೇಲೆ ವಾರಿಯರ್ಸ್‌ ಸವಾರಿ – ಹ್ಯಾಟ್ರಿಕ್‌ ಸೋಲಿನ ಬಳಿಕ ಗೆದ್ದ ಯುಪಿ

Public TV
By Public TV
4 hours ago
01 14
Big Bulletin

ಬಿಗ್‌ ಬುಲೆಟಿನ್‌ 15 January 2026 ಭಾಗ-1

Public TV
By Public TV
4 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?