ಚಾಮರಾಜನಗರ: ರಾಜ್ಯದಲ್ಲಿ ಅತಿ ಹೆಚ್ಚು ಹುಲಿ (Tiger) ಹೊಂದಿರುವ ಚಾಮರಾಜನಗರ (Chamarajanagara) ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಸೇರಿದಂತೆ ರಾಜ್ಯದ ಹುಲಿ ಸಂರಕ್ಷಿತ ಪ್ರದೇಶಗಳು ಹಾಗೂ ವನ್ಯಜೀವಿ ಧಾಮಗಳಲ್ಲಿ ಇಂದಿನಿಂದ ಹುಲಿ ಗಣತಿ ಆರಂಭವಾಗುತ್ತಿದೆ.
ಮಾಂಸಾಹಾರಿ ಹಾಗೂ ಸಸ್ಯಹಾರಿ ಪ್ರಾಣಿಗಳ ಕುರುಹು ಸಮೀಕ್ಷೆ, ಕ್ಯಾಮೆರಾ ಟ್ರ‍್ಯಾಪ್ ಸಮೀಕ್ಷೆ ಹೀಗೆ ಮೂರು ಹಂತಗಳಲ್ಲಿ ಮಾರ್ಚ್ 26ರ ವರಗೆ ಹುಲಿ ಗಣತಿ (Tiger Census) ನಡೆಯಲಿದೆ. ಇದನ್ನೂ ಓದಿ: KSRTC ಯಿಂದ ಗುಡ್‌ನ್ಯೂಸ್ – ಮಾರ್ಚ್‌ವರೆಗೆ ಆಯ್ದ ಮಾರ್ಗಗಳಲ್ಲಿ ಪ್ರೀಮಿಯರ್ ಬಸ್‌ಗಳ ಟಿಕೆಟ್ ದರ 5-10% ಕಡಿತ
ಬಂಡೀಪುರದಲ್ಲಿ ಒಟ್ಟಾರೆ 400 ಕ್ಕೂ ಹೆಚ್ಚು ಸಿಬ್ಬಂದಿ, 500 ಟ್ರ‍್ಯಾಪ್ ಕ್ಯಾಮೆರಾ, 70 ಕ್ಕೂ ಹೆಚ್ಚು ರೇಂಜ್ ಫೈಂಡರ್, 90 ಮೊಬೈಲ್ ಉಪಕರಣ ಹಾಗೂ 50 ಕ್ಕೂ ಹೆಚ್ಚು ಕಾಂಪಾಸ್ ಬಳಿ ಸಮೀಕ್ಷೆ ನಡೆಸಲು ಬಂಡೀಪುರದ ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ. ಆ ನಂತರ ವರದಿಯನ್ನು NTCA ಗೆ ಸಲ್ಲಿಸಲಾಗುತ್ತದೆ. ತದನಂತರ ಹುಲಿಗಳ ಅಂಕಿ ಅಂಶಗಳನ್ನು ಬಿಡುಗಡೆ ಮಾಡಲಾಗುತ್ತದೆ.
ದೇಶದಲ್ಲಿ ರಾಜ್ಯಕ್ಕೆ 2ನೇ ಸ್ಥಾನ
ರಾಷ್ಟ್ರವ್ಯಾಪಿ ಹುಲಿ ಗಣತಿ ಪ್ರತಿ 4 ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ. ಇದು ಅಂತಹ 6ನೇ ಗಣತಿ. ಹಿಂದಿನ ಗಣತಿಗಳನ್ನು 2006, 2010, 2014, 2018 ಮತ್ತು 2022ರಲ್ಲಿ ನಡೆಸಲಾಗಿತ್ತು. ಕರ್ನಾಟಕದಲ್ಲಿ ಈ ಹಿಂದೆ ಸುಮಾರು 563 ಹುಲಿಗಳಿವೆ ಎಂದು ಅಂದಾಜಿಸಲಾಗಿತ್ತು. ಹುಲಿ ಸಂಖ್ಯೆಯ ವಿಷಯದಲ್ಲಿ ರಾಜ್ಯ ದೇಶದಲ್ಲಿ 2ನೇ ಸ್ಥಾನ ಪಡೆದುಕೊಂಡಿತ್ತು. ಇದನ್ನೂ ಓದಿ: ಮೂಢನಂಬಿಕೆ, ಅವೈಜ್ಞಾನಿಕ ಸಾರ್ವಜನಿಕರ ಭೀತಿ ಆಧರಿಸಿ ಸರ್ಕಾರ ಕ್ರಮ ಕೈಗೊಳ್ಳುವಂತಿಲ್ಲ – ಮದ್ರಾಸ್ ಹೈಕೋರ್ಟ್
ರಾಜ್ಯದ ಪ್ರತಿಯೊಂದು ಅರಣ್ಯ ವ್ಯಾಪ್ತಿಯ 38 ಅರಣ್ಯ ವಿಭಾಗಗಳ ಗಸ್ತು ಪ್ರದೇಶಗಳಲ್ಲಿ ಗಣತಿ ಮಾಡಲಾಗುವುದು. ಈ ಉದ್ದೇಶಕ್ಕಾಗಿ, ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ಐದು ಹುಲಿ ಮೀಸಲು ಪ್ರದೇಶಗಳ ಮುಂಚೂಣಿ ಸಿಬ್ಬಂದಿಗೆ ಪ್ರತ್ಯೇಕವಾಗಿ ಮತ್ತು ಎಲ್ಲಾ 13 ಅರಣ್ಯ ವೃತ್ತಗಳ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ತಲಾ ಮೂವರು ಸದಸ್ಯರನ್ನು ಒಳಗೊಂಡ ತಂಡಗಳು ಜನವರಿ 5 ರಿಂದ ಮೂರು ದಿನಗಳ ಕಾಲ ರಾಜ್ಯಾದ್ಯಂತ ಅರಣ್ಯ ಪ್ರದೇಶಗಳಲ್ಲಿ ಪ್ರತಿದಿನ ಸುಮಾರು 5 ಕಿ.ಮೀ. ಗಸ್ತು ತಿರುಗಲಿದ್ದು, ಹುಲಿಗಳು, ಚಿರತೆಗಳು ಮತ್ತು ಇತರ ಮಾಂಸಾಹಾರಿ ಪ್ರಾಣಿಗಳ ಹಾಗೂ ಆನೆಗಳ ಪಗ್‌ಮಾರ್ಕ್‌ಗಳು, ಸ್ಕ್ಯಾಟ್ ಮತ್ತು ನೇರ ವೀಕ್ಷಣೆಯಂತಹ ಡೇಟಾವನ್ನು ಸಂಗ್ರಹಿಸಲಿವೆ.



