ರಸ್ತೆ ಮಧ್ಯೆ ಹುಲಿ ಪ್ರತ್ಯಕ್ಷ – ಬೆಚ್ಚಿಬಿದ್ದ ವಾಹನ ಸವಾರರು

Advertisements

ಮಡಿಕೇರಿ: ವಿರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮದ ಚಕ್ ಪೋಸ್ಟ್ ಬಳಿ ತಡರಾತ್ರಿ ವಾಹನ ಸವಾರರಿಗೆ ಹುಲಿ ಕಾಣಿಸಿಕೊಂಡಿದ್ದು, ಇದರಿಂದ ಅಲ್ಲಿನ ಜನ ಭಯಭೀತರಾಗಿದ್ದಾರೆ.

Advertisements

ರಸ್ತೆ ಬದಿಯ ನಡುವೆ ಹುಲಿ ರಾಜಾರೋಷವಾಗಿ ಓಡಾಡುತ್ತಿದ್ದು, ಈ ವೀಡಿಯೋವನ್ನು ಮಾಲ್ದರೆ ಗ್ರಾಮದ ಕೆಲ ಯುವಕರು ಸೆರೆಹಿಡಿದಿದ್ದಾರೆ. ಶನಿವಾರ ರಾತ್ರಿ ಮಾಲ್ದಾರೆ ಗ್ರಾಮದ ಕೆಲ ಯುವಕರು ಮೈಸೂರಿನಿಂದ ಮಾಲ್ದಾರೆ ಗ್ರಾಮಕ್ಕೆ ವಾಪಸ್ ಆಗುತ್ತಿದ್ದರು. ಈ ವೇಳೆ ಮಾಲ್ದಾರೆ ಚಕ್ ಪೋಸ್ಟ್ ಬಳಿ ರಾತ್ರಿ ಸುಮಾರು 11:50ಕ್ಕೆ ಹುಲಿ ರಸ್ತೆ ಬದಿಯಲ್ಲಿ ಹೋಗುತ್ತಿರುವುದನ್ನು ಯುವಕರು ಗಮನಿಸಿದ್ದಾರೆ. ಈ ಹಿನ್ನೆಲೆ ಅವರು ಹುಲಿಯ ವೀಡಿಯೋವನ್ನು ಮೊಬೈಲ್‍ನಲ್ಲಿ ಸೆರೆಹಿಡಿದ್ದಾರೆ. ಇದನ್ನೂ ಓದಿ: ಗೋಡಂಬಿಯಾಕಾರದ ಮೊಟ್ಟೆ ಇಟ್ಟ ಕೋಳಿ 

Advertisements

ಮಾಲ್ದಾರೆ ಗ್ರಾಮದಲ್ಲಿ ಆಗೊಮ್ಮೆ ಈಗೊಮ್ಮೆ ಹುಲಿ ಕಾಣಿಸಿಕೊಳ್ಳುತ್ತಿರುವುದರಿಂದ ಗ್ರಾಮಸ್ಥರಲ್ಲಿ ಮತ್ತೆ ಆತಂಕ ಮನೆ ಮಾಡಿದೆ. ಪರಿಣಾಮ ಕಾಫಿ ತೋಟದ ಕೂಲಿ ಕಾರ್ಮಿಕರು ತೋಟಗಳಿಗೆ ಹೋಗಲು ಹಿಂದೆಟ್ಟು ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Advertisements
Advertisements
Exit mobile version