Tiger 3: ಸೋಲಿನ ಸುಳಿಯಲ್ಲಿರುವ ಸಲ್ಮಾನ್‌ ಖಾನ್‌ ಮತ್ತೆ ಗೆದ್ದು ಬೀಗುತ್ತಾರಾ?

Public TV
1 Min Read
salman khan 1

ಸೋತು ಸುಣ್ಣವಾಗಿರೋ ಸಲ್ಮಾನ್ ಖಾನ್ (Salman Khan) ಮೈ ಕೊಡವಿ ಎದ್ದು ನಿಲ್ಲೋಕೆ ಸಜ್ಜಾಗಿದ್ದಾರೆ. ಟೈಗರ್ ಜಿಂದಾ ಹೈ ಎಂದಿದ್ದಾರೆ. ಟೈಗರ್ ಸಿರೀಸ್‌ನ ಪಾರ್ಟ್3 ಟ್ರೈಲರ್ ಅಬ್ಬರಿಸಿದೆ. ಹಾಗಾದ್ರೆ ಹೇಗಿದೆ ಟೈಗರ್ 3 ಟ್ರೈಲರ್? ಸಲ್ಮಾನ್ ಖಾನ್‌ಗೆ ಈ ಚಿತ್ರ ಮರುಜೀವ ಕೊಡುತ್ತಾ? ಟೈಗರ್ 3 ಚಿತ್ರದ ಬಗ್ಗೆ ಇಲ್ಲಿದೆ ಮಾಹಿತಿ.

salman khan 2 2

ಸಾಲು ಸಾಲು ಸೋಲು ಕಂಡಿರುವ ಭಜರಂಗಿ ಭಾಯ್‌ಜಾನ್‌ಗೆ ಬಾಕ್ಸಾಫೀಸ್‌ನಲ್ಲಿ ಅಬ್ಬರದ ಗೆಲುವೊಂದು ಸಿಗದೇ ಅನೇಕ ವರ್ಷಗಳೇ ಉರುಳಿದೆ. ಒಂದು ಕಾಲದಲ್ಲಿ ಸಲ್ಲುಭಾಯ್ ಸಿನಿಮಾ ಅಂದ್ರೆ ಗಲ್ಲಾಪೆಟ್ಟಿಗೆಯಲ್ಲಿ ಸಖತ್ ಕಲೆಕ್ಷನ್ ಆಗುತ್ತಿತ್ತು. ಆದರೆ ಈಗ ಸೋತಲ್ಲೇ ಗೆಲ್ಲಲು ಸಲ್ಮಾನ್ ಯೋಚಿಸಿದಂತಿದೆ. ಹಿಂದಿನ ಏಕ್ ಥಾ ಟೈಗರ್ ಹಾಗೂ ಟೈಗರ್ ಜಿಂದಾ ಹೈ ಸಲ್ಮಾನ್‌ಗೆ ನಿರಾಸೆ ಮಾಡಿರಲಿಲ್ಲ. ಇದೀಗ ಅದಕ್ಕಿಂತಲೂ ಅಡ್ವಾನ್ಸ್ಡ್ ಆಗಿ ಬರುತ್ತಿದೆ ಟೈಗರ್ 3 ಸಿನಿಮಾ.

salman khan 1 1

ಟೈಗರ್ 3 ಟ್ರೈಲರ್ ರಿಲೀಸ್ ಆಗಿದೆ. ಬ್ಯಾಡ್ ಬಾಯ್ ಅಬ್ಬರಿಸಿದ್ದಾರೆ. ಟ್ರೈಲರ್‌ನಲ್ಲಿ ಭರಪೂರ ಆ್ಯಕ್ಷನ್ ದೃಶ್ಯಗಳು ಹೈಲೈಟ್ ಆಗಿವೆ. ಹೀಗಾಗಿ ನಿರೀಕ್ಷೆ ಹೆಚ್ಚಾಗಿದೆ. ಇದೇ ದೀಪಾವಳಿ ಹಬ್ಬಕ್ಕೆ ಟೈಗರ್ 3 ರಿಲೀಸ್ ಆಗ್ತಿದೆ. ಇದನ್ನೂ ಓದಿ:ಟಾಲಿವುಡ್‌ನಲ್ಲಿ ರುಕ್ಮಿಣಿ ವಸಂತ್‌ಗೆ ಭರ್ಜರಿ ಡಿಮ್ಯಾಂಡ್

ಸಲ್ಮಾನ್ ಖಾನ್ ಜೊತೆ ಕತ್ರೀನಾ (Katrina Kaif) ಮತ್ತೆ ತೆರೆ ಹಂಚಿಕೊಂಡಿದ್ದಾರೆ. ನಿರ್ಮಾಪಕ ಆದಿತ್ಯಾ ಚೋಪ್ರಾ ಭರ್ಜರಿ ಬಂಡವಾಳ ಹೂಡಿದ್ದಾರೆ. ಸದ್ಯಕ್ಕಂತೂ ‘ಟೈಗರ್ 3’ ಟ್ರೈಲರ್ ನಿರೀಕ್ಷೆಯನ್ನಂತೂ ಹೆಚ್ಚಿಸಿದೆ. ಸಿನಿಮಾ ಹೇಗಿರುತ್ತೋ ನೋಡಬೇಕು ಅಂತಾ ಅಭಿಮಾನಿಗಳು ಕಾಯುತ್ತಿದ್ದಾರೆ.

Share This Article