ಮಂಗಳೂರು: ಮನೆಯೊಂದನ್ನು ನುಗ್ಗಿದ ಖತರ್ನಾಕ್ ದರೋಡೆಕೋರರ ಗ್ಯಾಂಗ್ ಒಂದು ಮನೆ ಮಂದಿಯನ್ನು ಕಟ್ಟಿ ಹಾಕಿ, ಫಿಲ್ಮಿ ಸ್ಟೈಲ್‌ನಲ್ಲಿ ದರೋಡೆ (Robbery) ನಡೆಸಿರುವ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರಿನ (Puttur) ಕುದ್ಕಾಡಿ ಎಂಬಲ್ಲಿ ನಡೆದಿದೆ.
ಗುರುಪ್ರಸಾದ್ ರೈ ಎಂಬವರಿಗೆ ಸೇರಿದ ಮನೆಗೆ ನುಗ್ಗಿದ ಸುಮಾರು 8 ಜನರ ಗ್ಯಾಂಗ್ ಮನೆ ಮಂದಿಯನ್ನು ಕಟ್ಟಿ ಹಾಕಿ ನಗ-ನಗದನ್ನು ಎಗರಿಸಿದ್ದಾರೆ. ಮನೆಯಲ್ಲಿ ಗುರುಪ್ರಸಾದ್ ಹಾಗೂ ಅವರ ತಾಯಿ ಇದ್ದ ಸಂದರ್ಭದಲ್ಲಿ ಘಟನೆ ನಡೆದಿದೆ. ಗುರುಪ್ರಸಾದ್ ಕುತ್ತಿಗೆಗೆ ಚಾಕು ಹಿಡಿದು ಮನೆ ದರೋಡೆ ಮಾಡಿದ್ದಾರೆ.
ನಸುಕಿನ ಜಾವ ಸುಮಾರು 2 ಗಂಟೆಗೆ ಮನೆಯ ಮುಂದಿನ ಬಾಗಿಲನ್ನು ಮುರಿದು ನುಗ್ಗಿರುವ ಖದೀಮರು 40 ಸಾವಿರ ನಗದು ಹಾಗೂ 120 ಗ್ರಾಂ ಚಿನ್ನಾಭರಣವನ್ನು ಹೊತ್ತೊಯ್ದಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ-ಸಾಗರ ರೈಲ್ವೆ ಹಳಿ ಮೇಲೆ ತುಂಡಾಗಿ ಬಿದ್ದ ವಿದ್ಯುತ್ ತಂತಿ – ರೈಲು 2 ಗಂಟೆ ವಿಳಂಬ
ದರೋಡೆಕೋರರು ತುಳು ಹಾಗೂ ಕನ್ನಡ ಭಾಷೆಯನ್ನು ಮಾತನಾಡುತ್ತಿದ್ದರು ಎಂದು ಮನೆ ಮಂದಿ ತಿಳಿಸಿದ್ದಾರೆ. ಸ್ಥಳಕ್ಕೆ ವಿಧಿ ವಿಜ್ಞಾನ, ಬೆರಳಚ್ಚು ಮತ್ತು ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಶ್ಚಿಮ ವಲಯ ಐಜಿಪಿ ಚಂದ್ರಗುಪ್ತ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಿಬಿ ರಿಷ್ಯಂತ್, ಪುತ್ತೂರು ಡಿವೈಎಸ್‌ಪಿ ಗಾನ.ಪಿ. ಕುಮಾರ್ ಭೇಟಿ ನೀಡಿದ್ದಾರೆ. ಇದನ್ನೂ ಓದಿ: ಮತ್ತೊಂದು ವಿವಾದ – ಸನಾತನ ಧರ್ಮವನ್ನ HIV, ಕುಷ್ಠರೋಗಕ್ಕೆ ಹೋಲಿಸಿದ ಸಂಸದ ಎ. ರಾಜಾ
Web Stories