ವಾಷಿಂಗ್ಟನ್: ಅಮೆರಿಕದ 6 ಪ್ರದೇಶಗಳಲ್ಲಿ ಮಾರಕ ಟಿಕ್ ವೈರಸ್ ಮತ್ತೆಯಾಗಿ ಆತಂಕ ಮೂಡಿಸಿದೆ.
Advertisement
ಟಿಕ್ ಎಂಬ ಕೀಟ ಹಾರ್ಟ್‍ಲ್ಯಾಂಡ್ ವೈರಸ್‍ನ್ನು ಒಡಲಲ್ಲಿ ತುಂಬಿಕೊಂಡು ಓಡಾಡುತ್ತಿದೆ. ಇದು ಮನುಷ್ಯನಿಗೆ ಒಮ್ಮೆ ಕಚ್ಚಿದರೆ, ನಿಗೂಢ ಕಾಯಿಲೆಯಿಂದ ಬಳಲುವಂತಾಗಿಸುತ್ತದೆ. ವಯಸ್ಕರನ್ನು ಅಸ್ವಸ್ಥಗೊಳಿಸಿ, ಸಾಯಿಸುವಷ್ಟು ಈ ವೈರಸ್ ಅಪಾಯಕಾರಿ ಎಂದು ಅಮೆರಿಕದ ಸಂಶೋಧಕರ ತಂಡವೊಂದು ವರದಿ ಮಾಡಿದೆ. ಇದನ್ನೂ ಓದಿ: ತರಗತಿಯಲ್ಲಿ ಅವಮಾನ – 30 ವರ್ಷದ ಬಳಿಕ ಶಿಕ್ಷಕಿಯನ್ನು 101 ಬಾರಿ ಇರಿದು ಹತ್ಯೆಗೈದ ವಿದ್ಯಾರ್ಥಿ
Advertisement
ಅಮೆರಿಕದ ಎಮೋರಿ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಈ ಟಿಕ್ ವೈರಸ್ ಬಗ್ಗೆ ಮಾಹಿತಿ ಕಳೆಹಾಕಿದ್ದು, ಟಿಕ್ ಬಗ್ಗೆ ಎಲ್ಲೆಡೆ ಅರಿವು ಮೂಡಿಸುತ್ತಿದ್ದಾರೆ. ಟಿಕ್ ಕಚ್ಚಿದರೆ ಮನುಷ್ಯನ ಜೀವಕ್ಕೆ ಅಪಾಯವಾಗಿದ್ದು, ಟಿಕ್ ವೈರಸ್‍ನಿಂದಾಗಿ ಹಲವು ಕಾಯಿಲೆಗಳು ಕಂಡುಬಂದಿರುವ ಬಗ್ಗೆ ಸಂಶೋಧನಾ ವರದಿಯಿಂದ ಮಾಹಿತಿ ಹೊರಬಿದ್ದಿದೆ.
Advertisement
Advertisement
ಸಂಶೋಧಕರು ತಿಳಿಸಿರುವ ಪ್ರಕಾರ, ಅಮೆರಿಕದ 6 ಪ್ರದೇಶಗಳಲ್ಲಿ ಈ ಟಿಕ್ ವೈರಸ್ ಕಂಡುಬಂದಿದ್ದು, ಮನುಷ್ಯನಿಗೆ ಕಚ್ಚಿದ ಬಳಿಕ ವಿಪರೀತ ಜ್ವರ, ತಲೆನೋವು, ಮೈಕೈನೋವು, ಮಾಂಸಖಂಡಗಳಲ್ಲಿ ನೋವು ಇದರ ಲಕ್ಷಣವಾಗಿದ್ದು, ಒಂದು ಬಾರಿ ಕಚ್ಚಿದರೆ ಮನುಷ್ಯ ಬದುಕುವುದು ಕಷ್ಟ ಎಂಬ ಬಗ್ಗೆ ಮಾಹಿತಿ ನೀಡಿದೆ. ಅಲ್ಲದೆ ಈ ವೈರಸ್ ಹರಡುವ ಲಕ್ಷಣಗಳನ್ನು ಹೊಂದಿದೆ ಎಂದು ಆತಂಕ ವ್ಯಕ್ತಪಡಿಸಿದೆ. ಇದನ್ನೂ ಓದಿ: ಉಕ್ರೇನ್ ಮೇಲೆ ಯುದ್ಧ ಸಾರಿ ಕೈಸುಟ್ಟುಕೊಂಡ ರಷ್ಯಾ
ಅಲ್ಲದೇ ಈ ಟಿಕ್ ವೈರಸ್ 2009ರಲ್ಲಿ ಮೊಟ್ಟ ಮೊದಲು ಮಿಸೌರಿಯಲ್ಲಿ ಪತ್ತೆಯಾಗಿದ್ದು, ಈವರೆಗೆ ಒಟ್ಟು 50 ಕೇಸ್ ಪತ್ತೆಯಾಗಿರುವ ಬಗ್ಗೆ ಸಂಶೋಧಕರ ತಂಡ ನಡೆಸಿದ ಸರ್ವೇಯಲ್ಲಿ ತಿಳಿದುಬಂದಿದೆ. ಅಲ್ಲದೆ ಈ ಟಿಕ್ ವೈರಸ್‍ಗಾಗಿ ಔಷಧಿ ಸಂಶೋಧನೆ ಕೂಡ ನಡೆಯುತ್ತಿರುವುದಾಗಿ ವರದಿಯಾಗಿದೆ.