ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಸಿನಿಮಾ ‘ಜೇಮ್ಸ್’ ಬಿಡುಗಡೆಗೆ ಕೌಂಟ್ ಡೌನ್ ಶುರುವಾಗಿದೆ. ದೇಶಾದ್ಯಂತ ನಾಲ್ಕು ಸಾವಿರ ಚಿತ್ರಮಂದಿರಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಕರ್ನಾಟಕದಲ್ಲಂತೂ ಭರ್ಜರಿ ಪ್ರಚಾರ ಸಿಗುತ್ತಿದೆ. ಆದರೆ, ಬೇರೆ ಭಾಷೆಗಳಲ್ಲಿ ಚಿತ್ರತಂಡ ಅಷ್ಟೇನೂ ಪ್ರಚಾರ ಮಾಡದ ಕಾರಣ, ಕ್ರೇಜ್ ಕ್ರಿಯೇಟ್ ಆದಂತೆ ಕಾಣುತ್ತಿಲ್ಲ. ಇದನ್ನೂ ಓದಿ : ರಾಮ್ ಗೋಪಾಲ ವರ್ಮಾ ಡೇಂಜರೆಸ್ ಹುಡುಗಿ ಅಂತ ಹೇಳಿದ್ದು ಯಾರಿಗೆ?
Advertisement
ನಾಲ್ಕು ದಿನಗಳ ಮೊದಲೇ ಟಿಕೆಟ್ ಬುಕ್ಕಿಂಗ್ ಶುರು ಮಾಡಿದೆ ಚಿತ್ರತಂಡ. ಹಲವು ಕಡೆ ಬೆಳಗ್ಗೆ ನಾಲ್ಕರಿಂದಲೇ ಪ್ರದರ್ಶನಕ್ಕೆ ಏರ್ಪಾಟು ಮಾಡಲಾಗಿದೆ. ಸದ್ಯ ಬುಕ್ ಮೈ ಶೋ ಆಪ್ ನಲ್ಲಿ ಬೆಳಗ್ಗೆ 6 ಗಂಟೆಯಿಂದ ಪ್ರದರ್ಶನಕ್ಕೆ ಟಿಕೆಟ್ ಬುಕ್ ಮಾಡಬಹುದು. ಇದನ್ನೂ ಓದಿ : ರಣಬೀರ್ ಮತ್ತು ಆಲಿಯಾ ಮದ್ವೆ ಡೇಟ್ ಮತ್ತೆ ಬದಲು: ಪ್ರಣಯ ಹಕ್ಕಿಗಳ ಪ್ರಲಾಪ
Advertisement
Advertisement
ಬಾಕ್ಸ್ ಆಫೀಸರ್ ರಿಪೋರ್ಟ್ ಪ್ರಕಾರ ಮಾ.17 ರಂದು ಬೆಳಗ್ಗೆ 6 ಗಂಟೆಗೆ 200 ಶೋಗಳು ಜೆಮ್ಸ್ ಗಾಗಿ ಮೀಸಲಿಟ್ಟಿವೆ. ಅಷ್ಟೂ ಶೋಗಳ ಟಿಕೇಟ್ ಸೋಲ್ಡೌಟ್ ಆಗಿರುವುದು ವಿಶೇಷ. ಫಸ್ಟ್ ಡೇ ಫಸ್ಟ್ ಶೋ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತದ್ದು, ಬೆಳಗಿನ ಪ್ರದರ್ಶನಕ್ಕೆ ಭಾರೀ ಬೇಡಿಕೆ ಬಂದಿದೆ. ಹಾಗಾಗಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ಬಹುತೇಕ ಸ್ಕ್ರೀನ್ ಗಳನ್ನು ಜೇಮ್ಸ್ ಪ್ರದರ್ಶನಕ್ಕಾಗಿಯೇ ಮೀಸಲಿಡಲಾಗಿದೆಯಂತೆ. ಇದನ್ನೂ ಓದಿ : ನಟ ಚೇತನ್ ಗಡಿಪಾರು? : ಹೋರಾಟಗಳೇ ನಟನಿಗೆ ಮುಳುವಾಗುತ್ತಾ..?
Advertisement
ಪುನೀತ್ ರಾಜ್ ಕುಮಾರ್ ಅವರ ಕೊನೆಯ ಸಿನಿಮಾ ಇದಾಗಿದ್ದರಿಂದ, ಅವರಿಗೆ ಗೌರವ ಸಲ್ಲಿಸುವುದಕ್ಕಾಗಿಯೇ ಆ ವಾರ ಯಾವ ಭಾರೀ ಬಜೆಟ್ ಚಿತ್ರಗಳು ಬಿಡುಗಡೆ ಆಗುತ್ತಿಲ್ಲ. ಹಾಗಾಗಿ ರಾಜ್ಯ ಶೇ.80ರಷ್ಟು ಚಿತ್ರಮಂದಿರಗಳಲ್ಲಿ ಜೇಮ್ಸ್ ತೆರೆ ಕಾಣುತ್ತಿದೆ. ಕೋವಿಡ್ ಕಾರಣದಿಂದಾಗಿ ಮುಚ್ಚಲಾಗಿದ್ದ ಚಿತ್ರಮಂದಿರಗಳನ್ನೂ ಜೇಮ್ಸ್ ಚಿತ್ರಕ್ಕಾಗಿ ಮತ್ತೆ ತೆರೆದಿರುವುದು ವಿಶೇಷ. ಇದನ್ನೂ ಓದಿ: ಕಂಗನಾಳನ್ನು ಹೀರೋಯಿನ್ ಮಾಡಿದ್ದು ಆ ಜ್ಯೋತಿಷಿ: ಅಸಲಿ ಸತ್ಯ ಬಾಯ್ಬಿಟ್ಟ ನಟ ಪ್ರಭಾಸ್
ಸಿನಿಮಾ ಬಿಡುಗಡೆಗೂ ನಾಲ್ಕು ದಿನಗಳ ಮುನ್ನ ಸಿಕ್ಕಿರುವ ರೆಸ್ಪಾನ್ಸ್ ನೋಡಿದರೆ, ಒಂದು ವಾರದೊಳಗೆ ಈ ಸಿನಿಮಾ ನೂರು ಕೋಟಿ ಕ್ಲಬ್ ಸೇರುವುದರಲ್ಲಿ ಅಚ್ಚರಿ ಪಡಬೇಕಿಲ್ಲ. ಅಷ್ಟರ ಮಟ್ಟಿಗೆ ಅಭಿಮಾನಿಗಳು ಜೇಮ್ಸ್ ಸಿನಿಮಾವನ್ನು ಅಪ್ಪಿಕೊಂಡಿದ್ದಾಗಿದೆ.