ಬೆಂಗಳೂರು: ಪ್ರತಿವರ್ಷದಂತೆ ಬೆಂಗಳೂರಿನಲ್ಲಿ (Bengaluru) ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ (RCB) ಕ್ರಿಕೆಟ್ ಪಂದ್ಯಗಳ ಟಿಕೆಟ್ ದರ ದುಬಾರಿಯಾಗಿದ್ದು ಇಳಿಕೆ ಮಾಡುವಂತೆ ಆಗ್ರಹ ಕೇಳಿ ಬಂದಿದೆ.
ಸಾಮಾನ್ಯ ಕ್ರಿಕೆಟ್ ಅಭಿಮಾನಿಗಳಿಗೆ ನಿಲುಕದ ರೀತಿಯಲ್ಲಿ ಟಿಕೆಟ್ ದರ (Ticket Price) ಇರುವ ಹಿನ್ನೆಲೆಯಲ್ಲಿ ಟಿಕೆಟ್ ದರ ಕಡಿಮೆ ಮಾಡುವಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಧ್ಯಕ್ಷ ಪ್ರಥಮೇಶ್ ಮಿಶ್ರಾಗೆ ಅವರಿಗೆ ಕನ್ನಡ ಚಳುವಳಿ ಕೇಂದ್ರ ಸಮಿತಿಯಿಂದ ಪತ್ರ ಬರೆಯಲಾಗಿದೆ.
ಆರ್‌ಸಿಬಿ ಪಂದ್ಯಗಳ ಟಿಕೆಟ್‌ನ ಆರಂಭಿಕ ದರವೇ 2,300 ರೂ. ನಿಂದ ಆರಂಭವಾಗಿ 43,000 ರೂ. ವರೆಗೆ ಇದೆ. ಬುಧವಾರದಿಂದ ಟಿಕೆಟ್ ಮಾರಾಟ ಆರಂಭವಾಗಿದ್ದು ಮೊದಲ ಪಂದ್ಯದ ಟಿಕೆಟ್‌ಗಳು ಈಗಾಗಲೇ ಖಾಲಿಯಾಗಿದೆ. ಆರ್‌ಸಿಬಿ ಅಭಿಮಾನಿಗಳು ಆರ್‌ಸಿಬಿ ವೆಬ್‌ಸೈಟ್ ಅಥವಾ ಬುಕ್‌ಮೈ ಶೋ ವೆಬ್‌ಸೈಟಿನಿಂದ ಐಪಿಎಲ್ ಪಂದ್ಯಗಳ ಟಿಕೆಟ್ ಖರೀದಿಸಬಹುದು. ಇದನ್ನೂ ಓದಿ: IPL 2025 | ಸಾರ್ವಕಾಲಿಕ ದಾಖಲೆ ಬರೆದವರು, ಕೆಟ್ಟ ದಾಖಲೆ ಹೆಗಲಿಗೇರಿಸಿಕೊಂಡವರು…
ಟಿಕೆಟ್ ಬೆಲೆ ಎಷ್ಟಿದೆ?
ಕೆಐಎ ವೈರ್‌ಗಳು ಮತ್ತು ಕೇಬಲ್‌ಗಳು ಎ ಸ್ಟ್ಯಾಂಡ್: 2,300 ರೂ.
ಬೋಟ್ ಸಿ ಸ್ಟ್ಯಾಂಡ್ – 3,300
ಪೂಮಾ ಬಿ ಸ್ಟ್ಯಾಂಡ್ 3,300
ಟಿಕೆಟಿ ಜಿಟಿ ಅನೆಕ್ಸ್ – 4,000 ರೂ.
ಕತಾರ್ ಏರ್‌ವೇಸ್ ಜಾವಗಲ್ ಶ್ರೀನಾಥ್ ಸ್ಟ್ಯಾಂಡ್ – 10,000 ರೂ.
ಬಿರ್ಲಾ ಎಸ್ಟೇಟ್ ಬಿಎಸ್ ಚಂದ್ರಶೇಖರ್ ಸ್ಟ್ಯಾಂಡ್ – 15,000 ರೂ.
ಬೆಂಗಳೂರಿನಲ್ಲಿ ಯಾವ ದಿನ ಪಂದ್ಯ?
RCB vs GT: ಏಪ್ರಿಲ್ 2
RCB vs DC: ಏಪ್ರಿಲ್ 10
RCB vs PBKS: ಏಪ್ರಿಲ್ 18
RCB vs RR: ಏಪ್ರಿಲ್ 24
RCB vs CSK: ಮೇ 3
RCB vs SRH: ಮೇ 13
RCB vs KKR: ಮೇ 17