– ನನ್ನ ಹತ್ರ ಬ್ಲ್ಯಾಕ್‌ಮೇಲ್ ನಡೆಯಲ್ಲ; ರೇವಣ್ಣ ದಂಪತಿಗೆ ಟಾಂಗ್
ಬೆಂಗಳೂರು: ಹಾಸನ ಟಿಕೆಟ್ (Hassan Ticket) ಕಗ್ಗಂಟು ಮತ್ತೊಂದು ಹಂತದಲ್ಲಿ ಕುತೂಹಲ ಕೆರಳಿಸಿದೆ.
ಯಲಹಂಕದಲ್ಲಿ ಪಂಚರತ್ನ ರಥಯಾತ್ರೆ ವೇಳೆ ಕಾರ್ಯಕರ್ತನೋರ್ವ, ಪಕ್ಷದ ಪರವಾಗಿ ಕೆಲಸ ಮಾಡಿದವರಿಗೆ ಟಿಕೆಟ್ ನೀಡಬೇಕು. ಹಾಸನದಲ್ಲಿ ಸ್ವರೂಪ್‌ಗೆ (Swaroop) ಟಿಕೆಟ್ ನೀಡುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಅಮುಲ್ ದೇಶದ ಬ್ರ್ಯಾಂಡ್, ಭಾರತದಲ್ಲೇ ಮಾರಾಟ ಮಾಡಿದ್ರೆ ಏನು ತೊಂದ್ರೆ – ಸಿ.ಟಿ ರವಿ ಪ್ರಶ್ನೆ
ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy), ಮಾಧ್ಯಮಮಿತ್ರರಿಗೂ ಹೇಳ್ತೀನಿ ಕೇಳಿಸಿಕೊಳ್ಳಿ. ಕಾರ್ಯಕರ್ತರ ಅಭಿಪ್ರಾಯವೇ ನಮ್ಮ ಅಭಿಪ್ರಾಯ. ಕಾರ್ಯಕರ್ತರಿಗೆ ಟಿಕೆಟ್ ಅಂತಾ ಹೇಳಿದ್ದೀನಿ. ಅದರಲ್ಲಿ ಬದಲಾವಣೆ ಇಲ್ಲ ಅಂತ ಪರೋಕ್ಷವಾಗಿ ಸ್ವರೂಪ್‌ಗೇ ಟಿಕೆಟ್ ಅಂತ ಹೇಳಿದ್ದಾರೆ. ಇದನ್ನೂ ಓದಿ: ದೇವೇಗೌಡ್ರು ಅಡುಗೆ ಮನೆಯಲ್ಲಿ ಅರ್ಧ ಗಂಟೆ ಕುಳಿತರೆ ಜೆಡಿಎಸ್ ಟಿಕೆಟ್ ಹಂಚಿಕೆ ಮುಗಿಯುತ್ತೆ: ತೇಜಸ್ವಿ ಸೂರ್ಯ ವ್ಯಂಗ್ಯ
ಈ ಮಧ್ಯೆ, ಹಾಸನದಲ್ಲಿ ಭವಾನಿಗೆ (Bhavani Revanna) ಟಿಕೆಟ್ ತಪ್ಪಿದರೆ, ಹೊಳೇನರಸೀಪುರದಲ್ಲಿ ನಾನೂ ಕೂಡ ಸ್ಪರ್ಧೆ ಮಾಡಲ್ಲ ಅಂತಾ ಶುಕ್ರವಾರ ಸಭೆಯಲ್ಲಿ ರೇವಣ್ಣ (HD Revanna) ಹೇಳಿದ್ದಾರೆ ಅನ್ನೋದು ತಿಳಿದು ಬಂದಿದೆ. ಇದರ ಬೆನ್ನಲ್ಲೇ, ನನ್ನ ಹತ್ತಿರ ಬ್ಲ್ಯಾಕ್ ಮೇಲ್ ನಡೆಯಲ್ಲ ಅಂತಲೂ ಪರೋಕ್ಷವಾಗಿ ರೇವಣ್ಣ ದಂಪತಿಗೆ ಟಾಂಗ್ ಕೊಟ್ಟಿದ್ದಾರೆ.