ಧಾರವಾಡ: ಮೊಬೈಲ್ ಇರದೆ ಇರಲಾಗುವುದಿಲ್ಲ ಎಂದು ಕೆಲವರು ಹೇಳಿದರೆ, ಟಿಕ್ ಟಾಕ್ ಇಲ್ಲದೆ ಸಾಧ್ಯವೇ ಇಲ್ಲ ಎಂದು ಇನ್ನೂ ಹಲವರು ಹೇಳುವವರಿದ್ದಾರೆ. ಅಲ್ಲದೆ ಇದಕ್ಕಾಗಿ ಸಾರಿರಾರು ರೂ. ವೆಚ್ಚ ಮಾಡುವವರೂ ಇದ್ದಾರೆ. ಅದೇ ರೀತಿ ಧಾರವಾಡದಲ್ಲೊಬ್ಬ ಕಾಕಾಗೆ ಟಿಕ್ ಟಾಕ್ ಹುಚ್ಚಿದೆ.
ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಗ್ರಾಮದ ಸಿದ್ದಪ್ಪ ಕುಂಬಾರ ಅವರಿಗೆ ಟಿಕ್‍ಟಾಕ್ ಕಾಕಾ ಎಂದೇ ಹೆಸರಿಡಲಾಗಿದೆ. ಈ ಕಾಕಾ ಟಿಕ್‍ಟಾಕ್ ಮಾಡುವುದರಲ್ಲಿ ಎತ್ತಿದ ಕೈ. ಇವರ ಜಾನಪದ ಟಿಕಟಾಕ್‍ವೊಂದು ಸಿಕ್ಕಾಪಟ್ಟೆ ಪ್ರಸಿದ್ಧಿ ಪಡೆದಿದ್ದು, ಮಿಲಿಯನ್ ಗಟ್ಟಲೆ ಜನರು ನೋಡಿ ಲೈಕ್ ಮಾಡಿದ್ದಾರೆ.
Advertisement
Advertisement
ಹೆಬ್ಬಳ್ಳಿ ಗ್ರಾಮ ಪಂಚಾಯಿತಿ ಸದಸ್ಯನಾಗಿರುವ ಸಿದ್ದಪ್ಪ, ಮೊದಲು ಕಟ್ಟಡ ಕಾಮಗಾರಿ ಮಾಡುತ್ತಿದ್ದರು. ಸದ್ಯ ಇವರಿಗೆ ಟಿಕ್‍ಟಾಕ್ ಮಾಡುವುದೇ ದೊಡ್ಡ ಹವ್ಯಾಸ. ಇವರ ಜೊತೆಯಲ್ಲಿ ಇದೇ ಗ್ರಾಮದ ಕೆಲ ಯುವಕರು ಕೂಡಾ ಸೇರಿಕೊಂಡಿದ್ದು, ಟಿಕ್‍ಟಾಕ್ ಮಾಡಲು ವೇಷಭೂಷಣ ಹೇಗೆ ಮಾಡಿಕೊಳ್ಳಬೇಕು ಎಂದು ಹೇಳಿ ಕೊಡ್ತಾರೆ. ಇನ್ನು ಯಾವ ಹಾಡಿಗೆ ಹೇಗೆ ಹೇಳಬೇಕು ಎಂದು ಯುವಕರಿಗೆ ಹೇಳಿಕೊಡುತ್ತಾರೆ.
Advertisement
ಸದ್ಯ 300ಕ್ಕೂ ಹೆಚ್ಚು ಟಿಕ್‍ಟಾಕ್ ಮಾಡಿರುವ ಸಿದ್ದಪ್ಪನರನ್ನ ಭೇಟಿಯಾಗಲು ಜಿಲ್ಲೆಯ ಯುವಕ, ಯುವತಿಯರು ಅಷ್ಟೇ ಅಲ್ಲ, ಬೆಂಗಳೂರಿನವರು ಬಂದು ಹೋಗಿದ್ದಾರೆ. ಇವರನ್ನ ಭೇಟಿ ಮಾಡಿದವರು ಇವರ ಜೊತೆ ಟಿಕ್‍ಟಾಕ್ ಮಾಡದೇ ಇರಲ್ಲ. ಇಷ್ಟೆಲ್ಲ ಅಭಿಮಾನಿಗಳನ್ನು ಹೊಂದಿರುವುದರಿಂದ ಸಿದ್ದಪ್ಪ ಕುಂಬಾರ ಅತ್ಯಂತ ಸಂತಸ ಹೊಂದಿದ್ದಾರೆ.
Advertisement
ಗ್ರಾಮದಲ್ಲಿ ಇವರಿಗೆ ಟಿಕ್ ಟಾಕ್ ಕಾಕಾ ಎಂದು ಹೆಸರಿಡಲಾಗಿದ್ದು, ಯಾರೇ ಗ್ರಾಮಕ್ಕೆ ಭೇಟಿ ನೀಡಿದರೂ ಟಿಕ್‍ಟಾಕ್ ಕಾಕಾ ಎಲ್ಲಿ ಎಂದು ಕೇಳಿದ್ರೆ ಇವರ ಮನೆ ತೋರಿಸ್ತಾರೆ. ಗ್ರಾಮದ ಬುಧವಾರ ಪೇಟೆಯಲ್ಲಿರುವ ಇವರು, ಸಿನಿಮಾ ಹಾಗೂ ಜಾನಪದ ಗೀತೆಗಳಿಗೆ ಟಿಕ್‍ಟಾಕ್ ಮಾಡುತ್ತಾರೆ. ಬಾಹುಬಲಿ ಸಿನೆಮಾದ ಡೈಲಾಗ್ ಕೂಡಾ ಇವರು ಟಿಕ್‍ಟಾಕ್‍ವಿಡಿಯೋ ಮಾಡಿದ್ದಾರೆ. ಅಷ್ಟೆ ಅಲ್ಲದೆ, ಬಾಲಕಿಯ ಜೊತೆ ಮಾಡಿದ ಟಿಕ್‍ಟಾಕ್ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಸಿದ್ದಪ್ಪ ಕಾಕಾ ಸದ್ಯ ಟಿಕ್‍ಟಾಕ್ ಕಾಕಾ ಆಗುವ ಮೂಲಕ, ಗ್ರಾಮ ಪಂಚಾಯಿತಿಯ ಸದಸ್ಯನ ಕೆಲಸದ ಜೊತೆಯಲ್ಲೇ ಈ ಟಿಕ್‍ಟಾಕ್ ಕೆಲಸ ಕೂಡಾ ಮಾಡಿ ಹೆಸರು ಮಾಡಿದ್ದಾರೆ.