ಮಾ.11ರಿಂದ ರಾಜ್ಯದಲ್ಲಿ 4 ದಿನ ಗುಡುಗು ಸಹಿತ ಮಳೆ ಸಾಧ್ಯತೆ

Public TV
1 Min Read
Weather 1

ಬೆಂಗಳೂರು: ಬಿಸಿಲ ಬೇಗೆಯಿಂದ ಕಂಗೆಟ್ಟಿದ ರಾಜ್ಯದ ಜನತೆಗೆ ಗುಡ್‌ನ್ಯೂಸ್ ಸಿಕ್ಕಿದೆ. ಮಾ.11ರಿಂದ ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯಾಗುವ (Pre Mansoon Rain) ಮುನ್ಸೂಚನೆಯನ್ನು ಹವಾಮಾನ ಇಲಾಖೆ (IMD) ನೀಡಿದೆ.

ಕಳೆದೊಂದು ತಿಂಗಳಿನಿಂದ ನಾಡಿನ ಜನರು ಬಿಸಿಲ ಹೊಡೆತಕ್ಕೆ ಕಂಗೆಟ್ಟಿದ್ದರು. ತಾಪಮಾನ ಏರಿಕೆ ಹಿನ್ನೆಲೆ ಮಳೆ ಮಾರುತಗಳು ಸಕ್ರಿಯವಾಗಿದ್ದು, ಮಾ.11ರಿಂದ 14ರವರೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮಳೆಯ ಮುನ್ಸೂಚನೆ ನೀಡಿದ್ದು, ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆಯುವ ಸಾಧ್ಯತೆ ಇದೆ. ಇದನ್ನೂ ಓದಿ: ಮೆಜೆಸ್ಟಿಕ್‌ನ BMTC, KSRTC ನಿಲ್ದಾಣಕ್ಕೆ ಹೊಸ ರೂಪ – ನವೀಕರಣಕ್ಕೆ ಅಧಿಕಾರಿಗಳ ಜೊತೆ ಸಚಿವರ ಚರ್ಚೆ

ಮುಂದಿನ ಮೂರು ತಿಂಗಳು ವಾಡಿಕೆಗಿಂತ ಹೆಚ್ಚು ಬಿಸಿಲು ಅಬ್ಬರಿಸುವ ಸಾಧ್ಯತೆ ಇದೆ. ಈ ಮಧ್ಯೆ ಮಳೆಯೂ ಕೆಲವೊಮ್ಮೆ ತಂಪೆರೆಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಚಾಂಪಿಯನ್ಸ್ ಪಟ್ಟಕ್ಕಾಗಿ ದುಬೈನಲ್ಲಿ ಗುದ್ದಾಟ – ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಲು ಟೀಂ ಇಂಡಿಯಾ ಸನ್ನದ್ಧ

Share This Article