ಬೆಂಗಳೂರು: ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮುಂದಿನ 3 ಗಂಟೆಗಳಲ್ಲಿ ಬಿರುಗಾಳಿ ಸಹಿತ ಮಳೆಯ (Rain) ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.
ಇಂದೂ ಕೂಡ ರಾಜ್ಯದಲ್ಲಿ ಭಾರೀ ಮಳೆ ಮುಂದುವರಿಯಲಿದೆ. ಈಗಾಗಲೇ ಜೂನ್ 29ರ ವರೆಗೆ ರಾಜ್ಯದ ಕೆಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ (Orange Alert) ಘೋಷಣೆ ಮಾಡಲಾಗಿದೆ. ಉತ್ತರ ಒಳನಾಡು ಪ್ರದೇಶಗಳಿಗೆ ಯೆಲ್ಲೋ ಅಲರ್ಟ್, ದಕ್ಷಿಣ ಹಾಗೂ ಕರಾವಳಿ ಪ್ರದೇಶಗಳಿಗೆ ಇಂದು ಕೂಡ ಆರೆಂಜ್ ಅಲರ್ಟ್ ಮುಂದುವರಿಕೆ ಮಾಡಲಾಗಿದೆ.
Advertisement
Advertisement
ನಿನ್ನೆಯೂ ರಾಜ್ಯದ ಹಲವೆಡೆ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದೆ. ಸೋಮವಾರ ಶಿವಮೊಗ್ಗದ ಆಗುಂಬೆಯಲ್ಲಿ ಅತಿ ಹೆಚ್ಚಾಗಿ ಮಳೆ ಸುರಿದಿದೆ.
Advertisement
ನಿನ್ನೆ ರಾಜ್ಯದಲ್ಲಿ ಎಷ್ಟೆಷ್ಟು ಮಳೆ?: ಬಜ್ಪೆ – 30.6mm, ಪಣಂಬೂರು- 2.6mm, ಶಿರಾಲಿ- 4.6mm, ಗದಗ- 1.4mm, ಬಾಗಲಕೋಟೆ-1.5mm, ಹನುಮನಮಟ್ಟಿ- 1.0mm, ಕಲಬುರಗಿ- 1.0mm, ಆಗುಂಬೆ- 67.5mm, ಮೂಡಿಗೆರೆ- 17.5 mm, ಚಂದೂರಾಯನಹಳ್ಳಿ- 0.5mm, ಗೋಣಿಕೊಪ್ಪಲು- 9.0mm ಹಾಗೂ ದಾವಣಗೆರೆಯಲ್ಲಿ 1.5mm ಮಳೆಯಾಗಿದೆ.