-ಅಮಿತಾಬ್, ಅಮೀರ್ ನಟನಗೆ ಪ್ರೇಕ್ಷಕ ಫಿದಾ
ಮುಂಬೈ: ಬಾಲಿವುಡ್‍ನ ಬಹುನೀರಿಕ್ಷಿತ ‘ಥಗ್ಸ್ ಆಫ್ ಹಿಂದೋಸ್ತಾನ್’ ಚಿತ್ರದ ರೋಮಾಂಚನಕಾರಿ ಟ್ರೇಲರ್ ಇಂದು ರಿಲೀಸ್ ಆಗಿದೆ. ಟ್ರೇಲರ್ ನೋಡಿದವರು ಮಾತ್ರ ಒಂದು ಕ್ಷಣ ಥ್ರಿಲ್‍ಗೆ ಒಳಗಾಗೋದು ಖಂಡಿತ. ಐತಿಹಾಸಿಕ ಕಥೆಯನ್ನು ಒಳಗೊಂಡಿರುವ ಸಿನಿಮಾ ಇದಾಗಿದ್ದು, ಬಹು ತಾರಾಗಣವನ್ನು ಹೊಂದಿದೆ.
ಟ್ರೇಲರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಿನಿ ಅಂಗಳದಲ್ಲಿ ಭಾರೀ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ. ಟ್ರೇಲರ್ ಆ್ಯಕ್ಷನ್ ಸೀನ್‍ಗಳಿಂದ ಭರಪೂರವಾಗಿದ್ದು, ಅಮಿತಾಬ್ ಬಚ್ಚನ್‍ರ ಸಾಹಸ ದೃಶ್ಯಗಳು ಜನರನ್ನು ಸೆಳೆಯುವಲ್ಲಿ ಯಶ್ವಸಿಯಾಗುವಲ್ಲಿ ಸಫಲವಾಗುತ್ತಿದೆ. ಉಳಿದಂತೆ ಫಾತಿಮಾ, ಕತ್ರಿನಾ ಕೈಫ್ ಸಹ ಟ್ರೇಲರ್ ನಲ್ಲಿ ಮಿಂಚಿದ್ದಾರೆ. ಟ್ರೇಲರ್ ನಲ್ಲಿ ಕೆಲವೇ ಸೆಕೆಂಡ್‍ನಲ್ಲಿ ಕಾಣಿಸುವ ಕತ್ರೀನಾ ಸೊಂಟ ಬಳಸುವ ಮೂಲಕ ತಮ್ಮ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ.
ಥಗ್ಸ್ ಆಫ್ ಹಿಂದೋಸ್ತಾನ್ ಚಿತ್ರತಂಡ ಆರಂಭದಲ್ಲಿ ಪಾತ್ರಗಳ ಪರಿಚಯವನ್ನು ರಿವೀಲ್ ಮಾಡುತ್ತಾ ಬಂದಿತ್ತು. ಈ ಹಿಂದೆ ಬಾಹುಬಲಿ ಚಿತ್ರದ ಟ್ರೇಲರ್ ಎಷ್ಟು ನಿರೀಕ್ಷೆಗಳನ್ನು ಅಭಿಮಾನಿಗಳಲ್ಲಿ ಮೂಡಿಸಿತ್ತೋ? ಅಷ್ಟೆ ಕುತೂಹಲವನ್ನು ಹುಟ್ಟು ಹಾಕಿದೆ. ಚಿತ್ರದ ಗ್ರಾಫಿಕ್ಸ್ ವರ್ಕ್ ಆಕರ್ಷಿಣಿಯವಾಗಿದ್ದು, ನೋಡುಗರನ್ನು ಸೆಳೆಯುತ್ತಿದೆ. ಪಿರಂಗಿ ಪಾತ್ರದಲ್ಲಿ ಅಮಿರ್ ಖಾನ್ ನಟಿಸಿದ್ರೆ, ಕತ್ರಿನಾ ನೃತ್ಯಗಾರ್ತಿ ಪಾತ್ರದಲ್ಲಿ ನಟಿಸಿದ್ದಾರೆ.
ಅಮಿರ್ ಖಾನ್ ಸಿನಿಮಾ ಅಂದ್ರೆ ಸಾಕು ವೀಕ್ಷಕರಲ್ಲಿ ಒಂದು ಕುತೂಹಲ ಹುಟ್ಟುಹಾಕಿರುತ್ತದೆ. ಪ್ರತಿಬಾರಿಯೂ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಅಮಿರ್ ತುಂಬಾ ವಿಭಿನ್ನ ಕಥೆಯನ್ನು ಆರಿಸಿಕೊಳ್ಳುತ್ತಾರೆ. ಟ್ರೇಲರ್ ಈಗ ಥಗ್ಸ್ ಆಫ್ ಹಿಂದೋಸ್ತಾನ್ ಕ್ಯೂರಿಯಾಸಿಟಿ ಹುಟ್ಟಿಸಿದೆ. ಥಗ್ಸ್ ಆಫ್ ಹಿಂದೋಸ್ತಾನ್‍ದಲ್ಲಿ ಫಾತಿಮಾ ಸನಾ ಶೇಖ್, ಶಶಾಂಕ್ ಅರೋರಾ, ಮೊಹಮ್ಮದ್ ಝೀಶಾನ್, ಆಯುಬ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಯಶ್ ರಾಜ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು, ಇದೇ ನವೆಂಬರ್ 8ರಂದು ದೀಪಾವಳಿಗೆ ಸಿನಿಮಾ ಬಿಡುಗಡೆ ಆಗಲಿದೆ. ಚಿತ್ರ ಏಕಕಾಲದಲ್ಲಿ ಹಿಂದಿ, ತೆಲಗು ಮತ್ತು ತಮಿಳು ಭಾಷೆಗಳಲ್ಲಿ ರಿಲೀಸ್ ಆಗಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv