ಬೆಂಗಳೂರು: ನಗರದಲ್ಲಿ ದಿನೇ ದಿನೇ ಪುಡಿರೌಡಿಗಳ ಅಟ್ಟಹಾಸ ಹೆಚ್ಚಾಗುತ್ತಿದ್ದು, ಬಡಪಾಯಿಗಳ ಮೇಲೆ ದುರ್ವರ್ತನೆ ತೋರುತ್ತಿದ್ದಾರೆ. ಕಳೆದ ತಿಂಗಳಷ್ಟೇ ಬೇಕರಿಯಲ್ಲಿ ಯುವಕರ ಮೇಲಿನ ಹಲ್ಲೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದಿದೆ.
ಕೋಣನಕುಂಟೆಯ ಮಾಲ್ಗುಡಿ ನಾಟಿ ಸ್ಟೈಲ್ ಹೋಟೆಲಿಗೆ ನುಗ್ಗಿದ ಪುಂಡರು ಮಾಲೀಕನಿಗೆ (Hotel Manager) ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾಲೀಕ ಬಾಬಣ್ಣ, ಬುಧವಾರ ರಾತ್ರಿ 11 ಗಂಟೆ ವೇಳೆಗೆ 4 ಜನ ಪುಂಡರು ಕಬಾಬ್ (Kebab) ಬೇಕು ಎಂದು ಬಂದಿದ್ರು. ನಮ್ಮ ಹುಡುಗರು ಕಬಾಬ್ ಪಾರ್ಸೆಲ್ ಕೊಟ್ಟಿದ್ದರು. ಬಿಲ್ 120 ರೂ. ಆಗಿದ್ದು, ಆದರೆ ಅವರು 90 ರೂ. ಮಾತ್ರ ಕೊಟ್ಟು ಹಣ ಕಡಿಮೆಯಿದೆ ಮೊತ್ತೊಮ್ಮೆ ಬಂದು ಕೊಡುತ್ತೇವೆ ಎಂದು ಹೇಳಿ ಹೋಗಿದ್ದರು.
ಆದರೆ ವಾಪಸ್ ಬಂದ ಪುಂಡರು ಕಬಾಬ್ ಪೀಸ್ ಕಡಿಮೆ ಕೊಟ್ಟಿದ್ದೀರಾ ಎಂದು ನಮ್ಮ ಹುಡುಗರ ಮೇಲೆ ಹಲ್ಲೆ ಮಾಡೋಕೆ ಮುಂದಾಗಿದ್ದರು. ನಾನು ಮಧ್ಯೆ ಪ್ರವೇಶಿಸಿದೆ. ಈ ವೇಳೆ ಅವರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ನನ್ನ ತುಟಿ ಹಾಗೂ ತಲೆಯಲ್ಲಿ ರಕ್ತ ಬರುವ ರೀತಿಯಲ್ಲಿ ಹೊಡೆದಿದ್ದಾರೆ ಎಂದು ಬಾಬಣ್ಣ ತಿಳಿಸಿದ್ದಾರೆ. ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ- ಮತ್ತಿಬ್ಬರ ಪತ್ತೆಗೆ 10 ಲಕ್ಷ ಬಹುಮಾನ ಘೋಷಣೆ
ಆರೋಪಿಗಳು ನಮ್ಮ ಹೋಟೆಲ್ ಮುಂದಿನ ರಸ್ತೆಯಲ್ಲೇ ವಾಸವಿದ್ದಾರೆ. ಯಾವಾಗಲೂ ಗಾಂಜಾ ಹೊಡೆದುಕೊಂಡು ಓಡಾಡುತ್ತಾರೆ. ಅಂದು ಅವರು ಗಾಂಜಾ ಮತ್ತಿನಲ್ಲೇ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಘಟನೆ ಕುರಿತು ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪುಂಡರು ಹೋಟೆಲ್ ಮಾಲೀಕನ ಮೇಲೆ ಹಲ್ಲೆ ನಡೆಸಿರುವ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಉಗ್ರರ ಜೊತೆ ಸಂಪರ್ಕ, ಭಾರತದಲ್ಲಿ ಶಾಂತಿ ಕದಡಲು ಸಂಚು- ಬೆಂಗಳೂರಿನ ಇಬ್ಬರ ವಿರುದ್ಧ NIA ಚಾರ್ಜ್ಶೀಟ್ ಸಲ್ಲಿಕೆ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k