‘ಥಗ್‌ ಲೈಫ್‌’ ಟೀಂ ಉದ್ಧಟತನ ಬಟಾಬಯಲು – ಕನ್ನಡ ಬಿಟ್ಟು 4 ಭಾಷೆಗಳಿಗೆ ಸಿನಿಮಾ ಡಬ್‌

Public TV
1 Min Read
kamal haasan thug life

ಟ ಕಮಲ್‌ ಹಾಸನ್‌ (Kamal Haasan) ಕನ್ನಡ ಹೇಳಿಕೆ ವಿವಾದದ ಬೆನ್ನಲ್ಲೇ ‘ಥಗ್‌ ಲೈಫ್‌’ (Thug Life) ತಂಡವು ಮತ್ತೆ ಉದ್ದಟತನ ಪ್ರದರ್ಶಿಸಿದೆ.

ಕನ್ನಡ ಹೊರತುಪಡಿಸಿ ನಾಲ್ಕು ಭಾಷೆಗಳಿಗೆ ನಿರ್ಮಾಪಕರು ಸಿನಿಮಾವನ್ನು ಡಬ್‌ ಮಾಡಿದ್ದಾರೆ. ತಮಿಳಿನಲ್ಲಿ ನೇರವಾಗಿ ಚಿತ್ರೀಕರಿಸಿ ತೆಲುಗು, ಹಿಂದಿ, ಮಲಯಾಳಂಗೆ ಸಿನಿಮಾವನ್ನು ಡಬ್‌ ಮಾಡಲಾಗಿದೆ. ಇದನ್ನೂ ಓದಿ: ಥಗ್‌ ಲೈಫ್ ಚಿತ್ರಕ್ಕೆ ʻಶುಗರ್‌ ಬೇಬಿʼ ಪಡೆದ ಸಂಭಾವನೆ ಎಷ್ಟು ಗೊತ್ತಾ?

Kamal Haasan

ಕನ್ನಡ ಕೈಬಿಟ್ಟು ಕರ್ನಾಟಕದಲ್ಲಿ ಇತರ ಭಾಷೆಯ ಚಿತ್ರ ಬಿಡುಗಡೆಗೆ ಪ್ಲ್ಯಾನ್ ಮಾಡಲಾಗಿದೆ. ಬುಕ್ ಮೈ ಶೋನಲ್ಲಿ ತಮಿಳು, ಹಿಂದಿ, ಮಲಯಾಳಂ, ತೆಲುಗು ಬುಕ್ಕಿಂಗ್‌ಗೆ ಅವಕಾಶ ನೀಡಲಾಗಿದೆ.

ತಮಿಳು ಭಾಷೆಯಿಂದ ಕನ್ನಡ ಬಂದಿದ್ದು ಎಂದು ಈಚೆಗೆ ನಟ ಕಮಲ್‌ ಹಾಸನ್‌ ನೀಡಿದ ಹೇಳಿಕೆ ಭಾರಿ ವಿವಾದ ಸೃಷ್ಟಿಸಿದೆ. ನಟನ ಹೇಳಿಕೆಗೆ ಕರ್ನಾಟಕದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಇದನ್ನೂ ಓದಿ: ಶಿವಣ್ಣನ ರೀತಿಯಲ್ಲಿ ಇನ್ಯಾರು ಕಮಲ್‌ ಪರವಾಗಿದ್ದಾರೋ ಅವರೆಲ್ಲ ನಾಡದ್ರೋಹಿಗಳು: ಮುಖ್ಯಮಂತ್ರಿ ಚಂದ್ರು

Thug Life Trisha Kamal Haasan

ಕಮಲ್‌ ಹಾಸನ್‌ ತಮ್ಮ ಹೇಳಿಕೆಗೆ ಕೂಡಲೇ ಕ್ಷಮೆಯಾಚಿಸಬೇಕು ಎಂಬ ಆಗ್ರಹ ಕೇಳಿಬಂದಿದೆ. ಆದರೆ, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ನಟ ಕ್ಷಮೆಯಾಚಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದು ಕನ್ನಡಿಗರನ್ನು ಮತ್ತಷ್ಟು ಕೆರಳಿಸಿದ್ದು, ನಟನ ಸಿನಿಮಾಗಳನ್ನು ಕರ್ನಾಟಕದ ಥಿಯೇಟರ್‌ಗಳಲ್ಲಿ ಬ್ಯಾನ್‌ ಮಾಡುವುದಾಗಿ ತಿಳಿಸಿದೆ.

ಸದ್ಯದಲ್ಲೇ ಬಿಡುಗಡೆಯಾಗಲಿರುವ ‘ಥಗ್‌ ಲೈಫ್‌’ ಸಿನಿಮಾಗೂ ಕರ್ನಾಟಕದಲ್ಲಿ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಕನ್ನಡಪರ ಸಂಘಟನೆಗಳು ತಿಳಿಸಿವೆ. ಒಂದು ವೇಳೆ ಸಿನಿಮಾ ಪ್ರದರ್ಶನ ಮಾಡಿದರೆ, ಅಂತಹ ಥಿಯೇಟರ್‌ಗಳಿಗೆ ಬೆಂಕಿ ಹಚ್ಚುವುದಾಗಿ ಎಚ್ಚರಿಕೆ ಸಂದೇಶ ರವಾನಿಸಿವೆ. ಇದನ್ನೂ ಓದಿ: ಕರ್ನಾಟಕ, ಕನ್ನಡ ಭಾಷೆ ಬಗ್ಗೆ ಯಾರೇ ತಪ್ಪಾಗಿ ಮಾತಾಡಿದ್ರೂ ಒಪ್ಪಲ್ಲ: ಸುಧಾರಾಣಿ

Share This Article