ಮುಂಬೈ: ಟೀಂ ಇಂಡಿಯಾದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಭಾರತದ ಮಾಜಿ ಕೋಚ್ ರವಿಶಾಸ್ತ್ರಿ ಬಗ್ಗೆ ಬಹಿರಂಗವಾಗಿಯೇ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದು ಈಗ ಎಲ್ಲೆಡೆ ಚರ್ಚೆ ಆಗುತ್ತಿದೆ.
Advertisement
2019ರ ಆಸ್ಟ್ರೇಲಿಯಾ ಪ್ರವಾಸದ ವೇಳೆ ರವಿಶಾಸ್ತ್ರಿ, ಕುಲ್‍ದೀಪ್ ಯಾದವ್ ಟೀಂ ಇಂಡಿಯಾದ ನಂಬರ್ 1 ಬೌಲರ್ ಎಂದಿದ್ದರು. ಈ ಮಾತನ್ನು ಕೇಳಿ ನನಗೆ ಟೀಂ ಇಂಡಿಯಾದ ಬಸ್‍ನಿಂದ ನನ್ನನ್ನು ತಳ್ಳಿದಂತಾಗಿತ್ತು ಮತ್ತು ನಾನು ಕುಗ್ಗಿ ಹೋಗಿದ್ದೆ ಎಂದು ಮಾಧ್ಯಮವೊಂದರ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ರೋಹಿತ್ ಶರ್ಮಾಗೆ ಬೌಲಿಂಗ್ ಮಾಡುವುದು ಕಷ್ಟ – ಪಾಕ್ ಬೌಲರ್
Advertisement
Advertisement
ಆಸ್ಟ್ರೇಲಿಯಾ ಪ್ರವಾಸದಲ್ಲಿ ಕುಲ್‍ದೀಪ್ ಯಾದವ್ ಇನ್ನಿಂಗ್ಸ್ ಒಂದರಲ್ಲಿ 5 ವಿಕೆಟ್ ಕಿತ್ತು ಮಿಂಚಿದ್ದರು. ಈ ವೇಳೆ ನಾನು ಕೂಡ ತಂಡದಲ್ಲಿದ್ದೆ. ಕುಲ್‍ದೀಪ್ ಸಾಧನೆಯನ್ನು ಹೊಗಳಿದ ರವಿಶಾಸ್ತ್ರಿ ಭಾರತ ನಂಬರ್ 1 ಬೌಲರ್ ಕುಲ್‍ದೀಪ್ ಎಂದಿದ್ದರು. ಈ ಮಾತು ಕೇಳಿ ನಾನು ಕುಗ್ಗಿ ಹೋಗಿದ್ದೆ. ಆ ಬಳಿಕ ಹಲವು ಬಾರಿ ಕ್ರಿಕೆಟ್ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಲು ತೀರ್ಮಾನಿಸಿದೆ. ನನಗೆ ಶಾಸ್ತ್ರಿ ಮಾತು ತುಂಬಾ ಘಾಸಿಗೊಳಿಸಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಉತ್ತಮ ಆಯ್ಕೆ: ಎಂಎಸ್‌ಕೆ ಪ್ರಸಾದ್
Advertisement
ನಾನು ಟೀಂ ಇಂಡಿಯಾದ ಯಶಸ್ಸಿಗಾಗಿ ತಂಡದಲ್ಲಿ ಆಡಲು ತುಂಬಾ ಸಂತೋಷ ಪಡುತ್ತೇನೆ. ಅಂದು ಕುಲ್‍ದೀಪ್ ಸಾಧನೆ ಕೂಡ ನನಗೆ ತುಂಬಾ ಹೆಮ್ಮೆ ಅನಿಸಿತ್ತು. ನನಗೆ ಆ ಪಂದ್ಯದಲ್ಲಿ 5 ವಿಕೆಟ್ ಪಡೆಯಲು ಆಗಿರಲಿಲ್ಲ. ಆದರೆ ಕುಲ್‍ದೀಪ್ 5 ವಿಕೆಟ್ ಪಡೆದು ಮಿಂಚಿದ್ದರು. ಆಸ್ಟ್ರೇಲಿಯಾದ ನೆಲದಲ್ಲಿ 5 ವಿಕೆಟ್ ತೆಗೆಯುವುದು ತುಂಬಾ ಕಷ್ಟ ಎಂದು ನನಗೆ ಅರಿವಿತ್ತು. ನಾನು ತಂಡದ ಯಶಸ್ಸಿನಿಂದಾಗಿ ತುಂಬಾ ಸಂತೋಷಗೊಂಡಿದ್ದೆ ಎಂದು ಮನದ ಮಾತು ಹಂಚಿಕೊಂಡಿದ್ದಾರೆ.
ಟೀಂ ಇಂಡಿಯಾಕ್ಕೆ ಹೊಸ ಆಟಗಾರರ ಆಗಮನವಾಗುತ್ತಿದ್ದಂತೆ ನನ್ನ ಮೇಲೆ ತುಂಬಾ ಒತ್ತಡ ಇತ್ತು. ನಾನು ಪ್ರತಿ ಪಂದ್ಯದಲ್ಲೂ ಬೌಲಿಂಗ್ ಉತ್ತಮವಾಗಿ ಮಾಡಲು ಶ್ರಮಿಸುತ್ತಿದ್ದೆ ಮತ್ತು 6 ಎಸೆತಗಳನ್ನು ವಿವಿಧ ಬಗೆಯಲ್ಲಿ ಎಸೆಯಲು ಪ್ರಯತ್ನಿಸುತ್ತಿದ್ದೆ. ಕೆಲ ಕಾಲ ತಂಡದಿಂದ ಹೊರಗುಳಿದರು ಕೂಡ ಇದೀಗ ಮತ್ತೆ ಕಂಬ್ಯಾಕ್ ಮಾಡಿದ್ದೇನೆ ಎಂದು ಸಂತಸ ಪಟ್ಟರು. ಇದನ್ನೂ ಓದಿ: ಐಪಿಎಲ್ 2022 – ಯಾರು ಯಾವ ತಂಡಕ್ಕೆ ನಾಯಕ? – ಇಲ್ಲಿದೆ ಪೂರ್ಣ ವಿವರ
ಅಶ್ವಿನ್ ಟೆಸ್ಟ್ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು 427 ವಿಕೆಟ್ ಪಡೆದು ಭಾರತದ ನಂಬರ್ 1 ಸ್ಪಿನ್ನರ್ ಎನಿಸಿಕೊಂಡಿದ್ದಾರೆ. ಅದಲ್ಲದೆ ಅನಿಲ್ ಕುಂಬ್ಳೆ ಮತ್ತು ಕಪಿಲ್ ದೇವ್ ಬಳಿಕ ಅತಿ ಹೆಚ್ಚು ವಿಕೆಟ್ ಪಡೆದ 3 ಬೌಲರ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.