ಮೈಸೂರು: ಕಾವೇರಿ ಹಿನ್ನೀರಿನಲ್ಲಿ (Cauvery Backwater) ಈಜಲು (Swimming) ಹೋದ ಮೂವರು ಯುವಕರು ನಾಪತ್ತೆಯಾದ ಘಟನೆ ಮೈಸೂರು (Mysuru) ತಾಲೂಕಿನ ಮೀನಾಕ್ಷಿಪುರದಲ್ಲಿ (Meenakshipura) ನಡೆದಿದೆ.
ಭರತ್ (20), ಪ್ರವೀಣ್ (20) ಮತ್ತು ವರುಣ್ (20) ನಾಪತ್ತೆಯಾದ ಯುವಕರು. ಈ ಮೂವರು ಮೈಸೂರಿನ ಖಾಸಗಿ ಕಾಲೇಜಿನಲ್ಲಿ ಎರಡನೇ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದರು. ಒಟ್ಟು 5 ಜನ ಸ್ನೇಹಿತರು ಕಾವೇರಿ ಹಿನ್ನೀರಿನಲ್ಲಿ ಈಜಲು ತೆರಳಿದ್ದು, ಈ ಸಂದರ್ಭ ಮೂವರು ಯುವಕರು ನಾಪತ್ತೆಯಾಗಿದ್ದಾರೆ. ಇದನ್ನೂ ಓದಿ: ತವರು ಮನೆ ಸೇರಿದ್ದ ಪತ್ನಿಯನ್ನು ಚುಚ್ಚಿ ಕೊಂದ ಪತಿ
ಮೀನಾಕ್ಷಿಪುರ ಕಾವೇರಿ ಹಿನ್ನೀರಿನಲ್ಲಿ ಘಟನೆ ನಡೆದಿದ್ದು, ಈಜುವ ಸಂದರ್ಭ ನೀರಿನ ಸೆಳೆತಕ್ಕೆ ಸಿಲುಕಿ ಮೂವರು ಯುವಕರು ನಾಪತ್ತೆಯಾಗಿದ್ದಾರೆ. ಪೊಲೀಸರ ಶೋಧಕಾರ್ಯದಿಂದ ಭರತ್ ಎಂಬ ಯುವಕನ ಶವ ಪತ್ತೆಯಾಗಿದ್ದು, ಉಳಿದವರಿಗಾಗಿ ಶೋಧ ಮುಂದುವರಿದಿದೆ. ಈ ಕುರಿತು ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಯುವತಿ ವಿಚಾರಕ್ಕೆ ಯುವಕರ ಮಧ್ಯೆ ಕಿರಿಕ್- ಎಣ್ಣೆ ಏಟಲ್ಲಿ ಗೆಳೆಯನ ತಲೆ ಒಡೆದ್ರು!
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]