ಹಾವೇರಿ: ತುಂಗಭದ್ರಾ ನದಿಯಲ್ಲಿ (Tungabhadra River) ಈಜಲು ತೆರಳಿದ್ದ ಮೂವರು ಯುವಕರು (Youth) ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಹಾವೇರಿ (Haveri) ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಮುದೇನೂರ ಗ್ರಾಮದ ಬಳಿ ನಡೆದಿದೆ.
ಮೃತ ಯುವಕರನ್ನು ನವೀನ್ ಕುರಗುಂದ(20), ವಿಕಾಸ್ ಪಾಟೀಲ್(20) ಹಾಗೂ ನೇಪಾಳ ಮೂಲದ ಪ್ರೇಮ್ ಬೋರಾ(25) ಎಂದು ಗುರುತಿಸಲಾಗಿದೆ. ಹೊಸ ವರ್ಷದ ಹಿನ್ನೆಲೆ ಪಾರ್ಟಿ ಮುಗಿಸಿ ಈಜಲು ತೆರಳಿದ್ದ ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಸಿದ್ದೇಶ್ವರ ಸ್ವಾಮೀಜಿ ಆರೋಗ್ಯ ಚೇತರಿಕೆಗಾಗಿ ಹುಕ್ಕೇರಿ ಹಿರೇಮಠದಿಂದ ಮಹಾಮೃತ್ಯುಂಜಯ ಹೋಮ
ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ನದಿಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಬೆಳಗ್ಗಿನಿಂದಲೇ ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದಾರೆ. ಹಲಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಕೃಷಿ ಕೂಲಿ ಮಹಿಳೆಯರಿಂದ ಹೊಸ ವರ್ಷಾಚರಣೆ- ಗದ್ದೆಯಲ್ಲಿ ಕೇಕ್ ಕತ್ತರಿಸಿ ಸಂಭ್ರಮ