ಕೋಲಾರ: ಮಾನವೀಯತೆ ಮರೆತ ಜನರಿಂದ ಮೂರು ಜನ ಯುವಕರು ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡ ಅಮಾನವೀಯ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಯಾಗಿದೆ. ಈ ಘಟನೆ ಇದೇ ತಿಂಗಳ 9 ರಂದು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನಲ್ಲಿ ನಡೆದಿದೆ.
ಬಂಗಾರಪೇಟೆ ತಾಲೂಕಿನ ನೇರಳೆಕೆರೆ ಬಳಿಯ ಕೆರೆಯಲ್ಲಿ ತೆಪ್ಪ ಮುಗುಚಿ ಬಿದ್ದ ಪರಿಣಾಮ ನೀರಿನಲ್ಲಿ ಮುಳುಗಿದ ಮೂವರು ಯುವಕರು ಸಾವನ್ನಪ್ಪಿದ್ದಾರೆ. ಚಿಕ್ಕವಲಗಮಾದಿಯ ರಾಜೇಂದ್ರ (32), ಕೆರೆಕೋಡಿ ಗ್ರಾಮದ ನವೀನ್ (32), ನೇರಳೆಕೆರೆಯ ಮೋಹನ್ (28) ಮೃತರು. ಇದನ್ನೂ ಓದಿ: ಹಿಜಬ್ ತೀರ್ಪು: ಮಂಗಳವಾರ ಉಡುಪಿ, ಶಿವಮೊಗ್ಗ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ಶಿವರಾಜ್ ಈಜಿಕೊಂಡು ದಡ ಸೇರಿದ ಹಿನ್ನೆಲೆ ಪಾರಾಗಿದ್ದಾನೆ. ಅಂದು ಕೆರೆಯಲ್ಲಿ ನಡೆದ ಸನ್ನಿವೇಶ ಮೊಬೈಲ್‍ನಲ್ಲಿ ಸೆರೆಯಾಗಿದೆ. ‘ಯಾರಾದ್ರು ಕಾಪಾಡಿ’ ಎಂದು ಮೂರು ಜನ ಯುವಕರು ಬೇಡಿಕೊಂಡಿದ್ದಾರೆ. ಆದ್ರೆ ಅಲ್ಲೆ ದಡದಲ್ಲಿ ನಿಂತಿದ್ದ ಸಾಕಷ್ಟು ಜನರು ದಡದಲ್ಲಿ ನಿಂತು ಈಜಿಕೊಂಡು ಬರುವಂತೆ ಸಲಹೆ ನೀಡಿದ್ದಾರೆ.
ತೆಪ್ಪದಲ್ಲಿ ರೌಂಡ್ಸ್ ಮಾಡಲು ಹೋಗಿ ಮುಗುಚಿದ್ರು ಯಾರೂ ರಕ್ಷಣೆಗೆ ಬಾರದ ಹಿನ್ನೆಲೆ ನೋಡ ನೋಡುತ್ತಿದ್ದಂತೆ ಮೂವರ ಪ್ರಾಣ ಪಕ್ಷಿ ಹಾರಿ ಹೋಗಿದೆ. ಕೆರೆ ಮಧ್ಯದಲ್ಲಿ ಸಿಲುಕಿ ಕಾಪಾಡಿ ಕಾಪಾಡಿ ಎಂದು ಚೀರಾಡಿದ್ರು ಮಾನವೀಯತೆ ಮರೆತ ಜನರು ನಿಂತು ನೋಡುತ್ತಲೆ ಇದ್ದರು. ಈ ಹಿನ್ನೆಲೆ 3 ಜನರ ಪ್ರಾಣ ಕಳೆದುಕೊಂಡಿರುವುದು ವಿಪರ್ಯಾಸ., ಇದನ್ನೂ ಓದಿ: 10ನೇ ತರಗತಿ ಬಾಲಕಿಯನ್ನ ಚಾಕುವಿನಿಂದ ಇರಿದು ಆತ್ಮಹತ್ಯೆಗೆ ಯತ್ನಿಸಿದ ಆರೋಪಿಗಳು