ಮಂಗಳೂರು: ಖಾಸಗಿ ಬೀಚ್ ರೆಸಾರ್ಟ್‌ನ (Beach Resort) ಈಜುಕೊಳದಲ್ಲಿ (Swimming Pool) ಮುಳುಗಿ ಮೂವರು ಯುವತಿಯರು ಸಾವನ್ನಪ್ಪಿದ ಘಟನೆ ಮಂಗಳೂರು (Mangaluru) ಹೊರವಲಯದ ಉಚ್ಚಿಲ ಬೀಚ್ ಬಳಿಯ ರೆಸಾರ್ಟ್‌ವೊಂದರಲ್ಲಿ ನಡೆದಿದೆ.
ಮೈಸೂರು (Mysuru) ಮೂಲದ ಎಂಜಿನಿಯರಿಂಗ್ ವಿದ್ಯಾರ್ಥಿಗಳಾದ ನಿಶಿತ ಎಂಡಿ (21), ಪಾರ್ವತಿ ಎಸ್ (20) ಹಾಗೂ ಕೀರ್ತನಾ ಎನ್ (21) ಮೃತ ಯುವತಿಯರು. ಶನಿವಾರ ಬೆಳಗ್ಗೆ ಬೀಚ್ ರೆಸಾರ್ಟ್‌ಗೆ ಆಗಮಿಸಿ ಮೂವರು ಯುವತಿಯರು ಕೊಠಡಿ ಪಡೆದಿದ್ದರು. ಇಂದು ಬೆಳಗ್ಗೆ 8:30ರ ಸುಮಾರಿಗೆ ಈಜಲೆಂದು ಈಜುಕೊಳಕ್ಕೆ ತೆರಳಿದ್ದರು. ಮೂವರೇ ಪೂಲ್‌ನಲ್ಲಿ ಆಟವಾಡುತ್ತಿದ್ದ ವೇಳೆ ಘಟನೆ ನಡೆದಿದೆ. ಇದನ್ನೂ ಓದಿ: ರೈಲು ವಿಳಂಬ – ಸರಿಯಾದ ಸಮಯಕ್ಕೆ ವರನನ್ನು ಮದುವೆಗೆ ಕರೆದೊಯ್ದ ರೈಲ್ವೇ ಇಲಾಖೆ
ಸ್ವಿಮ್ಮಿಂಗ್ ಪೂಲ್‌ನಲ್ಲಿ ಒಂದು ಬದಿ ಆರು ಅಡಿಯಷ್ಟು ಆಳವಿತ್ತು. ಈ ವೇಳೆ ಆಯತಪ್ಪಿ ಓರ್ವ ಯುವತಿ ಮುಳುಗಿದ್ದಾಳೆ. ಆಕೆಯ ರಕ್ಷಣೆಗೆ ತೆರಳಿದ ಉಳಿದ ಇಬ್ಬರೂ ಮುಳುಗಿ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಹೈಪರ್‌ಸಾನಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ – ಆಯ್ದ ದೇಶಗಳ ಪಟ್ಟಿಗೆ ಭಾರತ ಸೇರ್ಪಡೆ
ಈಜುವ ದೃಶ್ಯವನ್ನು ಐಫೋನ್‌ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಈಜು ಕೊಳ ಸಂಪೂರ್ಣ ಕವರ್ ಆಗುವಂತೆ ಸ್ವಲ್ಪ ದೂರದಲ್ಲಿ ಐಫೋನ್ ಇರಿಸಿದ್ದರು. ಮೂವರು ಐದು ಅಡಿ ಹೊಂದಿದ್ದರು. ಮೂವರಿಗೆ ಈಜಲು ಬರುತ್ತಿರಲಿಲ್ಲ. ಆರಂಭದಲ್ಲಿ ಕೊಳದಲ್ಲಿ ನಡೆದಾಡಿಕೊಂಡು, ಮುಳುಗಿ ಏಳುತ್ತಿದ್ದರು. ಈ ಪೈಕಿ ಓರ್ವ ಯುವತಿ ಆರು ಅಡಿ ಆಳಕ್ಕೆ ಹೋಗಿದ್ದಾಳೆ. ಆಕೆ ರಕ್ಷಣೆಗೆ ಇನ್ನೊಬ್ಬಳು, ಕೊನೆಗೆ ಮತ್ತೊಬ್ಬಳು ಹೋಗಿರುವ ದೃಶ್ಯ ಸೆರೆಯಾಗಿದೆ.