3ರ ಬಾಲೆಯ ಕೈಯಿಂದ ಸಿಡಿದ ಗುಂಡು: ಸಹೋದರಿ ಸಾವು

Public TV
1 Min Read
police jeep

ಹೂಸ್ಟನ್: ಮೂರು ವರ್ಷದ ಬಾಲಕಿಯೊಬ್ಬಳು ತನ್ನ ಸಹೋದರಿಗೆ ಆಕಸ್ಮಿಕವಾಗಿ ಗುಂಡು ಹಾರಿಸಿದ ಘಟನೆ ಹ್ಯಾರಿಸ್ ಕೌಂಟಿನಲ್ಲಿ (Harris County) ನಡೆದಿದೆ. ಟಾಮ್‍ಬಾಲ್ ಪಾರ್ಕ್‍ವೇ (Tomball Parkway) ಬಳಿಯ ಅಪಾರ್ಟ್‍ಮೆಂಟ್‍ನಲ್ಲಿ ಸ್ನೇಹಿತರೊಂದಿಗೆ ಮಕ್ಕಳು ಆಟ ಆಡುವಾಗ ಈ ಘಟನೆ ನಡೆದಿದೆ. ಬಾಲಕಿಯ ಅಕ್ಕ ನಾಲ್ಕು ವರ್ಷದವಳಾಗಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.

ಪೋಷಕರು ಮಕ್ಕಳನ್ನು ರೂಮಿನಲ್ಲಿ ಬಿಟ್ಟು ಹೋಗಿದ್ದರು. ಮಕ್ಕಳು ಆಟ ಆಡುತ್ತ ಗನ್ (Gun) ತೆಗೆದುಕೊಂಡಿದ್ದಾರೆ. ಈ ವೇಳೆ ಗನ್ ಫೈರ್ ಆಗಿದೆ. ಗುಂಡು ಸಿಡಿದ ಶಬ್ದ ಕೇಳುತ್ತಿದ್ದಂತೆ, ಗನ್‍ನ್ನು ತೆಗೆದಿಟ್ಟು ಕುಟುಂಬಸ್ಥರು ಪೊಲೀಸರಿಗೆ ಕರೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಆಕಸ್ಮಿಕವಾಗಿರುವುದರಿಂದ ಪ್ರಕರಣ ದಾಖಲಿಸುವ ಬಗ್ಗೆ ಗೊಂದಲವಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಪತ್ನಿ ತಡವಾಗಿ ಏಳುತ್ತಾಳೆ – ಪತಿಯಿಂದ ಪೊಲೀಸರಿಗೆ ದೂರು

Share This Article
Leave a Comment

Leave a Reply

Your email address will not be published. Required fields are marked *