ಬೆಂಗಳೂರು: ನಗರದ ಹೊರವಲಯದ ಮೆಡಿಸಿನ್ ಕಂಪೆನಿಯೊಂದರಲ್ಲಿ ಮೂವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಮಹೇಶ್, ಲೋಕೇಶ್ ಮತ್ತು ಶರವಣ ಮೃತ ನೌಕರರು. ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಅಂತಮ್ ಬಯೋ ಸೈನನ್ಸ್ ಮೆಡಿಸಿನ್ ಕಂಪೆನಿಯಲ್ಲಿ ಮೃತರು ಕೆಲಸ ಮಾಡಿಕೊಂಡಿದ್ದರು. ಮಂಗಳವಾರ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಈ ಮೂವರನ್ನು 9 ಆಡಿ ಆಳದ ವೆಸಲ್ ಗೆ ಇಳಿಸಲಾಗಿತ್ತು.
Advertisement
ಈ ವೇಳೆ ಆಮ್ಲಜನಕದ ಕೊರತೆಯಿಂದಾಗಿ ಮೂವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಲೋಕೇಶ್ ಮತ್ತು ಮಹೇಶ್ ಇಬ್ಬರು ಒಂದು ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದರು. ಈ ಸಂಬಂಧ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.