Exclusive Details- ಯುವರಾಜ್ ಸಿನಿಮಾಗೆ ಮೂರು ಟೈಟಲ್: ‘ಯುವ’ ಫಿಕ್ಸ್ ಆಗಿದ್ದು ಯಾಕೆ?

Public TV
2 Min Read
FotoJet 14

ಡಾ.ರಾಜ್ ಕುಟುಂಬದ ಮತ್ತೊಂದು ಕುಡಿ ನಿನ್ನೆ ಸಿನಿಮಾ ರಂಗಕ್ಕೆ ಅಧಿಕೃತ ಪ್ರವೇಶ ಮಾಡಿದೆ. ಪುನೀತ್ ರಾಜ್ ಕುಮಾರ್ (Puneeth Rajkumar) ಉತ್ತರಾಧಿಕಾರಿ ಎಂದು ಬಿಂಬಿತರಾಗಿರುವ ಯುವರಾಜ್ ಕುಮಾರ್ (Yuvaraj Kumar) ನಟನೆಯ ಚೊಚ್ಚಲು ಸಿನಿಮಾದ ಟೈಟಲ್ ಟೀಸರ್ ಬಿಡುಗಡೆ ಹಾಗೂ ಸಿನಿಮಾದ ಮುಹೂರ್ತ ಕೂಡ ನಡೆದಿದೆ. ಯುವರಾಜ್ ನಟನೆಯ ಮೊದಲ ಸಿನಿಮಾಗೆ ಶೀರ್ಷಿಕೆ ಏನಿರಬಹುದು ಎನ್ನುವ ಕುತೂಹಲ ಹಲವು ದಿನಗಳಿಂದ ಇತ್ತು. ಅದಕ್ಕೂ ತೆರೆ ಬಿದ್ದಿದೆ. ಆದರೆ, ಈ ಟೈಟಲ್ ಆಯ್ಕೆಯ ಹಿಂದೆ ಹಲವು ಲೆಕ್ಕಾಚಾರಗಳು ಇರುವುದು ಸುಳ್ಳಲ್ಲ.

YUVA RAJKUMAR

ಚಿತ್ರರಂಗಕ್ಕೆ ಯುವರಾಜ್ ಕುಮಾರ್ ಅವರನ್ನು ಲಾಂಚ್ ಮಾಡಲು ಮತ್ತು ಸಿನಿಮಾದ ಶೀರ್ಷಿಕೆ ಇಡಲು ಹಲವು ರೀತಿಯಲ್ಲಿ ಯೋಚನೆ ಮತ್ತು ಯೋಜನೆಯನ್ನು ಸಿದ್ಧ ಮಾಡಿತ್ತು ಹೊಂಬಾಳೆ ಫಿಲ್ಮ್ಸ್. ಇದರ ಭಾಗವಾಗಿ ಮೂರು ಸಿನಿಮಾ ಶೀರ್ಷಿಕೆಗಳನ್ನೂ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿತ್ತು. ಡಾ.ರಾಜ್ ನಟನೆಯ ಜ್ವಾಲಾಮುಖಿ ಮತ್ತು ಅಶ್ವಮೇಧ ಚಿತ್ರಗಳ ಶೀರ್ಷಿಕೆಯನ್ನೂ ಆಯ್ಕೆ ಮಾಡಿತ್ತು. ಆದರೆ, ಕೊನೆಯ ಬದಲಾವಣೆ ಎನ್ನುವಂತೆ ‘ಯುವ’ (Yuva) ಟೈಟಲ್ ಅನ್ನು ಅಂತಿಮಗೊಳಿಸಿದೆ. ಇದನ್ನೂ ಓದಿ: Breaking:ಸ್ಯಾಂಡಲ್‌ವುಡ್‌ನಲ್ಲಿ ಯುವ ಪರ್ವ ಆರಂಭ

yuva 2

ಈಗಾಗಲೇ ಚಿತ್ರೋದ್ಯಮದಲ್ಲಿ ಯುವರಾಜ್ ಕುಮಾರ್, ‘ಯುವ’ ಹೆಸರಿನಲ್ಲಿ ಬ್ರ್ಯಾಂಡ್ ಆಗಿದ್ದಾರೆ. ಅಲ್ಲದೇ, ಪುನೀತ್ ರಾಜ್ ಕುಮಾರ್ ಮೊದಲ ಸಿನಿಮಾ ‘ಅಪ್ಪು’ (Appu) ಕೂಡ ಹೀಗೆಯೇ ಆಯ್ಕೆಯಾಗಿದ್ದು. ಈ ಎಲ್ಲವನ್ನೂ ಅಳೆದು ತೂಗಿ ಕೊನೆಗೂ ‘ಯುವ’ ಟೈಟಲ್ ಅನ್ನೇ ನಿರ್ದೇಶಕರು ಮತ್ತು ನಿರ್ಮಾಣ ಸಂಸ್ಥೆ ಅಂತಿಮಗೊಳಿಸಿದ್ದಾರೆ. ಮೊದಲ ಚಿತ್ರದಲ್ಲೇ ಪುನೀತ್ ರಾಜ್ ಕುಮಾರ್ ‘ಅಪ್ಪು’ ಆಗಿ ಫೇಮಸ್ ಆದರು. ಯುವರಾಜ್ ಕುಮಾರ್ ಕೂಡ ‘ಯುವ’ ಹೆಸರಿನಿಂದಲೇ ಮುಂದುವರೆಯಲಿ ಎನ್ನುವ ಗುರಿಯೂ ಈ ಟೈಟಲ್ ಹಿಂದಿದೆ.

YUVA

ಈಗಾಗಲೇ ಯುವ ಟೈಟಲ್ ಅನ್ನು ಎಲ್ಲರೂ ಮೆಚ್ಚಿದ್ದಾರೆ. ನಿನ್ನೆ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕೂಡ ಆಗಿದೆ. ಇದು ಸೂಕ್ತ ಟೈಟಲ್ ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗಿದೆ. ಸಿನಿಮಾದ ಕಥೆಯಲ್ಲೂ ನಾಯಕನ ಪಾತ್ರ ಯುವ ಹೆಸರಿನಿಂದಲೇ ಇರುವುದು ಪಕ್ಕಾ ಆಗಿದೆ. ಸಂತೋಷ್ ಆನಂದ್ ರಾಮ್ ಹೊಸ ರೀತಿಯಲ್ಲಿ ಕಥೆ ಬರೆದುಕೊಂಡು ಯುವರಾಜ್ ಕುಮಾರ್ ಅವರನ್ನು ಲಾಂಚ್ ಮಾಡುತ್ತಿದ್ದಾರೆ. ಇದೇ ತಿಂಗಳಿನಿಂದ ಚಿತ್ರೀಕರಣ ಕೂಡ ಶುರುವಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *