ಚಿಕ್ಕಬಳ್ಳಾಪುರ: ಈಜಲು (Swimming) ಹೋದ ಮೂವರು ವಿದ್ಯಾರ್ಥಿಗಳು ನೀರಲ್ಲಿ ಮುಳುಗಿ (Drown) ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರ (Chikkaballapura) ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರದ ಶ್ರೀನಿವಾಸ ಸಾಗರ ಜಲಾಶಯದಲ್ಲಿ (Srinivasa Sagara Dam) ಈ ಘಟನೆ ನಡೆದಿದ್ದು, ಇಮ್ರಾನ್ ಖಾನ್(20), ರಾಧಿಕಾ(19) ಹಾಗೂ ಪೂಜಾ ಈಜಲು ಹೋಗಿ ಮುಳುಗಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಸಾರ್ವಜನಿಕರ ಬಸ್‌ಗೆ ಬೆಂಕಿ ಇಟ್ಟ ನಕ್ಸಲರು – 15 ಮಂದಿ ಸಾವು
Advertisement
ವೀಕೆಂಡ್ ಎಂದು ಕರ್ನಾಟಕ ಫಾರ್ಮಸಿ ಕಾಲೇಜಿನ ಸುನೀತಾ, ರಾಧಿಕ, ಪೂಜಾ, ಇಮ್ರಾನ್ ಖಾನ್, ವಿಕಾಸ್, ಚನ್ನರಾಮ್ ಎಂಬ ಆರು ವಿದ್ಯಾರ್ಥಿಗಳು ಮೂರು ಬೈಕುಗಳಲ್ಲಿ ಶನಿವಾರ ಬೆಂಗಳೂರಿನಿಂದ ಚಿಕ್ಕಬಳ್ಳಾಪುರದ ಶ್ರೀನಿವಾಸ ಸಾಗರ ಜಲಾಶಯಕ್ಕೆ ಪಿಕ್‌ನಿಕ್ ಬಂದಿದ್ದರು. ಈ ವೇಳೆ ಸುನಿತಾಳನ್ನು ಹೊರತುಪಡಿಸಿ ಉಳಿದ 5 ಮಂದಿ ವಿದ್ಯಾರ್ಥಿಗಳು ಜಲಾಶಯ ಹಿಂಭಾಗದ ಹಿನ್ನೀರಿನಲ್ಲಿ ಈಜಾಡಲು ಹೋಗಿದ್ದು, ರಾಧಿಕಾ, ಪೂಜಾ ಮತ್ತು ಇಮ್ರಾನ್ ಖಾನ್ ಜಲಾಶಯದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಲಂಚ ಪಡೆಯುತ್ತಿದ್ದ ಕೆರೆ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿ ಲೋಕಾಯುಕ್ತ ಬಲೆಗೆ
Advertisement
Advertisement
ನೀರಿನ ಆಳದ ಅರಿವಿರದ ವಿದ್ಯಾರ್ಥಿಗಳು ಒಬ್ಬರನ್ನೊಬ್ಬರು ಕೈ ಹಿಡಿದುಕೊಂಡು ಕೂಗುತ್ತಿದ್ದಂತೆ ಅಲ್ಲೇ ಇದ್ದ ಸ್ಥಳೀಯ ಯುವಕರು ರಕ್ಷಣೆಗೆ ಧಾವಿಸಿದ್ದಾರೆ. ಈ ವೇಳೆ ಚನ್ನರಾಮ್ ಹಾಗೂ ವಿಕಾಸ್ ಎಂಬ ವಿದ್ಯಾರ್ಥಿಗಳನ್ನು ರಕ್ಷಿಸಿದ್ದು, ಪೂಜಾಳನ್ನು ಸಹ ಮೇಲೆ ಎಳೆದುಕೊಂಡು ಬಂದು ಕೂಡಲೇ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೂ ಆಕೆ ಬದುಕುಳಿಯಲಿಲ್ಲ. ಇದನ್ನೂ ಓದಿ: ಇಂಡಿಗೋ ವಿಮಾನ ಸಿಬ್ಬಂದಿಯ ಜೊತೆ ಅನುಚಿತ ವರ್ತನೆ- ಸ್ವೀಡಿಷ್ ಪ್ರಜೆಯ ಬಂಧನ
Advertisement
ಇನ್ನೂ ಪೂಜಾ ಹಾಗೂ ಇಮ್ರಾನ್ ಖಾನ್ ಮೃತದೇಹವನ್ನು ಸ್ಥಳೀಯರ ಸಹಕಾರದೊಂದಿಗೆ ಆಗ್ನಿಶಾಮಕದಳ ಸಿಬ್ಬಂದಿ ಮೇಲೆ ತಂದಿದ್ದಾರೆ. ಓಟ್ಟಿನಲ್ಲಿ ವೀಕೆಂಡ್ ಔಟಿಂಗ್ ಪೋಟೋಶೂಟ್ ಎಂದು ಬಂದ ಆರು ಮಂದಿಯಲ್ಲಿ ಮೂವರು ಜಲಸಮಾಧಿಯಾಗಿದ್ರೆ, ಇಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದಾರೆ. ಸದ್ಯ ಮೃತರ ಸಂಬಂಧಿಕರು, ಪೋಷಕರು ವಿಷಯ ತಿಳಿದು ಬೆಂಗಳೂರಿನಿಂದ (Bengaluru) ಧಾವಿಸಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಮೃತದೇಹಗಳನ್ನ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿರುವ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಇದನ್ನೂ ಓದಿ: ಅಕ್ರಮ ಗಾಂಜಾ ಮಾರಾಟ ಯತ್ನ- ಇಬ್ಬರ ಬಂಧನ