ರಾಮನಗರ: ಕನಕಪುರದಲ್ಲಿರುವ ದೇಗುಲ ಮಠದ ನಿರ್ವಾಣ ಸ್ವಾಮಿ ವಸತಿ ಶಾಲೆಯಲ್ಲಿ ಮೂವರು ವಿದ್ಯಾರ್ಥಿಗಳು (Student) ನಾಪತ್ತೆಯಾಗಿದ್ದಾರೆ. ಮಂಗಳವಾರ ಎಂದಿನಂತೆ ವಸತಿ ನಿಲಯದ (Hostel) ಆವರಣದಲ್ಲಿರುವ ಶಾಲೆಗೆ ತೆರಳಿದ್ದ ವಿದ್ಯಾರ್ಥಿಗಳು ನಾಪತ್ತೆಯಾಗಿದ್ದು, ಈ ಸಂಬಂಧ ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ (Police Station) ದೂರು ದಾಖಲಾಗಿದೆ.
ಕನಕಪುರ (Kanakapura) ಟೌನ್‌ನಲ್ಲಿರುವ ದೇಗುಲ ಮಠದ ನಿರ್ವಾಣ ಸ್ವಾಮಿ ವಸತಿ ಶಾಲೆಯಲ್ಲಿ (School) 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ನ. 8ರಂದು ಎಂದಿನಂತೆ ಹಾಸ್ಟೆಲ್‌ನಲ್ಲಿ ತಿಂಡಿ ಮುಗಿಸಿ ಅದೇ ಆವರಣದ ಶಾಲೆಗೆ ಎಲ್ಲಾ ಮಕ್ಕಳು ತೆರಳಿದ್ದರು. ಎಲ್ಲಾ ಮಕ್ಕಳಂತೆ 9ನೇ ತರಗತಿಯ ಮೂವರು ವಿದ್ಯಾರ್ಥಿಗಳು ಹಾಸ್ಟೆಲ್‌ನಿಂದ ಶಾಲೆಗೆ ಹೊಗಿದ್ದರು. ಆದರೆ ಆ ಮೂವರು ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿಲ್ಲ.
Advertisement
Advertisement
ಆನೇಕಲ್ ತಾಲೂಕಿನ ಅತ್ತಿಬೆಲೆ ಗ್ರಾಮದ ಅನೀಲ್ ಕುಮಾರ್ ಅವ್ರ ಪುತ್ರ ಶಿವಕುಮಾರ್(15), ಬೆಂಗಳೂರಿನ ಬಿಡಿಎ ಲೇಔಟ್ ನಿವಾಸಿ ಮಹದೇವ್ ಎಂಬುವವರ ಪುತ್ರ ಕಾರ್ತಿಕ್(15), ಅತ್ತಿಬೆಲೆ ತಾಲೂಕಿನ ಕೊಡ್ಲಿಪುರ ಗ್ರಾಮದ ಮಂಜುನಾಥ್ ಎಂಬುವವರ ಪುತ್ರ ಪ್ರತಾಪ್ (16) ಎಂಬ ಮೂವರು ನಾಪತ್ತೆಯಾಗಿದ್ದಾರೆ.
Advertisement
Advertisement
ಇದನ್ನು ಗಮನಿಸಿದ ಶಾಲಾ ಶಿಕ್ಷಕಿ ವಾರ್ಡನ್‌ಗೆ ಈ ವಿಚಾರ ಮುಟ್ಟಿಸಿದ್ದಾರೆ. ಸಂಜೆ ಕಳೆದರೂ ವಿದ್ಯಾರ್ಥಿಗಳು ವಾಪಸ್ ಬರೆದೇ ಇರುವುದರಿಂದ ಆತಂಕದಲ್ಲಿ ವಾರ್ಡನ್ ಮಹದೇವಸ್ವಾಮಿ ವಿದ್ಯಾರ್ಥಿಗಳ ಪೊಷಕರಿಗೆ ವಿಷಯ ಮುಟ್ಟಿಸಿ ಮಕ್ಕಳು ಊರಿಗೆ ಬಂದಿರಬಹುದ ಎಂದು ವಿಚಾರಿಸಿದ್ದಾರೆ. ಆದರೆ ಮಕ್ಕಳು ಊರಿಗೆ ಕೂಡ ತೆರಳಲ್ಲಿಲ್ಲವೆಂದು ತಿಳಿದು ಅವರಿಗಾಗಿ ಹುಡುಕಾಟ ನಡೆಸುತ್ತಾರೆ. ಆದ್ರೆ ಮಕ್ಕಳ ಸುಳಿವು ಮಾತ್ರ ಸಿಕ್ಕಿಲ್ಲ. ಇದನ್ನೂ ಓದಿ: ಚುನಾವಣಾ ಪ್ರಚಾರಕ್ಕಾಗಿ ಸಿದ್ದರಾಮಯ್ಯಗೆ ಸಿದ್ಧವಾಯ್ತು ಹೈಫೈ ಪ್ರಚಾರದ ಬಸ್
ಎರಡು ದಿನಗಳ ಕಾಲ ಪೋಷಕರು ಸಂಬಂಧಿಕರ ಮನೆಯಲ್ಲೆಲ್ಲ ಹುಡುಕಾಡಿದ್ದಾರೆ. ಆದರೆ ಪತ್ತೆಯಾಗದ ಹಿನ್ನೆಲೆಯಲ್ಲಿ ಹಾಸ್ಟೆಲ್ ಸಿಬ್ಬಂದಿ ನ. 11 ರಂದು ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೆಂಟ್ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಕ್ಕಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ. ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಬಗ್ಗೆ ಮಾತಾಡಿದ್ರೆ ನುಗ್ಗಿ ಹೊಡಿತೀವಿ- ಯತ್ನಾಳ್‌ಗೆ ಬೆಂಬಲಿಗರು ಎಚ್ಚರಿಕೆ