ನೀರಿನ ಆಳ ಪರೀಕ್ಷೆಗಿಳಿದು ಮೂವರು ವಿದ್ಯಾರ್ಥಿಗಳು ನೀರುಪಾಲು

Public TV
1 Min Read
CHITRADURGA

ಚಿತ್ರದುರ್ಗ: ಪಿಯುಸಿ ಓದುತ್ತಿದ್ದ ಮೂವರು ವಿದ್ಯಾರ್ಥಿಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ನಂದನಹೊಸೂರು ಗ್ರಾಮದಲ್ಲಿ ನಡೆದಿದೆ.

ಸಂಜೆ ಗ್ರಾಮದ ಹೊರವಲಯದಲ್ಲಿರುವ ಗುಂಡಿಕೆರೆಯಲ್ಲಿ ಗಿರೀಶ್, ಸಂಜಯ್ ಹಾಗೂ ಮನು ಎಂಬ ಮೂವರು ಈಜಲು ತೆರಳಿದ್ರು. ಸಂಜೆಯಾದರೂ ಮನೆಗೆ ಬಾರದೇ ಇದ್ದಾಗ ಕೆರೆಗೆ ಹೋಗಿ ನೋಡಿದಾಗ ಶವ ಪತ್ತೆಯಾಗಿದೆ.

CHITRADURGA 2

ಮೂವರಲ್ಲಿ ಓರ್ವನಿಗೆ ಈಜು ಬರುತ್ತಿದ್ದು, ಇನ್ನಿಬ್ಬರು ಈಜಲು ಬರುತ್ತಿರಲಿಲ್ಲ. ಆಳದ ಜಾಗದಲ್ಲಿ ಸಿಲುಕಿ ಮೂವರು ನೀರುಪಾಲಾದ ಶಂಕೆ ವ್ಯಕ್ತಪಡಿಸಲಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಘಟನೆ ಸಂಬಂಧ ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆ (Chitrahalli Gate Police Station) ಯಲ್ಲಿ ಕೇಸ್ ದಾಖಲಾಗಿದೆ. ಇದನ್ನೂ ಓದಿ: ಮೆಕ್ಸಿಕೋ ವಲಸಿಗರ ಕೇಂದ್ರದಲ್ಲಿ ಭೀಕರ ಅಗ್ನಿ ದುರಂತ – 39 ಮಂದಿ ಸಾವು

Share This Article