ಯಾದಗಿರಿ: ನಾಡಿನಾದ್ಯಂತ ಇಂದು ಸ್ವಾತಂತ್ರ್ಯ ದಿನಾಚರಣೆಯನ್ನು (Independence Day) ಅದ್ಧೂರಿಯಿಂದ ಆಚರಿಸಲಾಯಿತು. ಅಂತೆಯೇ ಯಾದಗಿರಿಯಲ್ಲಿ (Yadagiri) ಈ ಸಂಭ್ರಮದ ವೇಳೆ ಮೂವರು ವಿದ್ಯಾರ್ಥಿಗಳು(Students) ಕುಸಿದು ಬಿದ್ದ ಘಟನೆ ನಡೆದಿದೆ.
ಯಾದಗಿರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಪರೇಡ್ ನಿರ್ಗಮನದ ವೇಳೆ ಕುಸಿದು ಮೂವರು ಕುಸಿದುಬಿದ್ದಿದ್ದಾರೆ. ಯಾದಗಿರಿಯ ಆದರ್ಶ ಸಮಿತಿ ಶಾಲೆಯ ವಿದ್ಯಾರ್ಥಿಗಳು ಬೆಳಗ್ಗೆ ಉಪಹಾರ ಸೇವಿಸದೇ ಸ್ವಾತಂತ್ರ್ಯೋತ್ಸವದ ಕವಾಯತಿನಲ್ಲಿ ಭಾಗಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಸುಸ್ತಾಗಿ, ವಿಪರೀತ ಬಿಸಿಲಿನಿಂದ ಬಸವಳಿದು ಕುಸಿದು ಬಿದ್ದಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ ಇಸ್ಲಾಂ ರಾಷ್ಟ್ರ ಎಂದು ಘೋಷಿಸಿಕೊಂಡು ಏನಾಗಿದೆ ಎಂದು ಎಲ್ಲರಿಗೂ ಗೊತ್ತು: ದಿಗ್ವಿಜಯ್ ಸಿಂಗ್
ವಿದ್ಯಾರ್ಥಿಗಳು ಕುಸಿದು ಬೀಳುತ್ತಿದ್ದಂತೆಯೇ ಶಿಕ್ಷಕರು ಹಾಗೂ ಸಹಪಾಠಿಗಳು ಸಹಾಯಕ್ಕೆ ಧಾವಿಸಿದ್ದಾರೆ. ಇತ್ತ ಶಿಕ್ಷಕರು ನೀರು ಗ್ಲೂಕೋಸ್ ನೀಡಿ, ನೀರು ಕುಡಿಸಿದ್ದಾರೆ. ವಿದ್ಯಾರ್ಥಿಗಳು ಆರೋಗ್ಯ ಸುಧಾರಿಸಿದೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]