– HDFC ಬ್ಯಾಂಕ್‌ನ ಸೆಕ್ಯುರಿಟಿ ಮ್ಯಾನೇಜರ್ ಹೇಳಿದ್ದೇನು?
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹಾಡಹಗಲೇ ಮಹಾ ದರೋಡೆ (Bengaluru Robbery) ನಡೆದಿದೆ. ಎಟಿಎಂಗೆ ಹಣ ತುಂಬುವ ಕಾರನ್ನು ಅಡ್ಡಗಟ್ಟಿ 7 ಕೋಟಿ 11 ಲಕ್ಷ ರೂಪಾಯಿಗಳನ್ನ ದೋಚಿ ಪರಾರಿಯಾಗಿದ್ದಾರೆ. ಘಟನೆ ಕಂಡು ಬೆಂಗಳೂರು ನಗರವೇ ಬೆಚ್ಚಿಬಿದ್ದಿದ್ದು, ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿದೆ.
ಬುಧವಾರ ಮಧ್ಯಾಹ್ನ 12.30ರ ಸಮಯದಲ್ಲಿ ಎಟಿಎಂಗೆ ಹಣ ತುಂಬಲು ಆಗಮಿಸುತ್ತಿದ್ದ ಸಿಎಂಎಸ್ ವಾಹನವನ್ನ ದರೋಡೆಕೋರರ ವಾಹನ ಹಿಂಬಾಲಿಸಿ ಜಯನಗರದ ಅಶೋಕ ಪಿಲ್ಲರ್ ಬಳಿ ದರೋಡೆ ಮಾಡಿದ್ದಾರೆ. ಮೊದಲಿಗೆ ನಗರದ ಶ್ರೀಮಂತ ಬಡಾವಣೆಯಾದ ಜಯನಗರದ ಅಶೋಕಪಿಲ್ಲರ್ ಬಳಿ ಇನ್ನೋವಾ ಕಾರಿನಲ್ಲಿ ಬಂದ ಖದೀಮರು ಸಿಎಂಎಸ್ ವಾಹನವನ್ನ (CMS ATM Vehicle) ಅಡ್ಟಗಟ್ಟಿದ್ದಾರೆ. ಬಳಿಕ ನಾವು ಕೇಂದ್ರದ ಟ್ಯಾಕ್ಸ್ ಆಫೀಸರ್, ನಿಮ್ಮ ವಾಹನವನ್ನ ಪರಿಶೀಲನೆ ಮಾಡಬೇಕು ಎಂಬ ನೆಪದಲ್ಲಿ ಕಾರಿನಲ್ಲಿದ್ದ ಬ್ಯಾಂಕ್ ಸಿಬ್ಬಂದಿಯನ್ನ ಕೆಳಕ್ಕೆ ಇಳಿಸಿ ಕಾರಿನ ಚಾಲಕನೊಂದಿಗೆ ಕಿದ್ವಾಯಿ ಆಸ್ಪತ್ರೆಯ ಡೈರಿ ಸರ್ಕಲ್ ಬಳಿ ಕರೆದೊಯ್ದು 7 ಕೋಟಿ 11 ಲಕ್ಷ ಹಣವನ್ನು ಲೂಟಿ ಮಾಡಿ ಎಸ್ಕೇಪ್ ಆಗಿದ್ದಾರೆ.
ದರೋಡೆಕೋರರ ಪತ್ತೆಗೆ ದಕ್ಷಿಣ ಡಿಸಿಪಿ ಲೋಕೇಶ್ ನೇತೃತ್ವದಲ್ಲಿ ಮೂರು ವಿಶೇಷ ತನಿಖಾ ತಂಡಗಳನ್ನ ರಚಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬೆಂಗಳೂರಲ್ಲಿ ಹಾಡಹಗಲೇ ಮಹಾ ದರೋಡೆ; ನಡು ರಸ್ತೆಯಲ್ಲೇ 7 ಕೋಟಿ ದೋಚಿದ ಕಳ್ಳರು!
ಸೆಕ್ಯುರಿಟಿ ಮ್ಯಾನೇಜರ್ ಹೇಳಿದ್ದೇನು?
ಘಟನೆ ಬಳಿಕ ಸಿಎಂಎಸ್ ವಾಹನ ಚಾಲಕ, ಸಿಬ್ಬಂದಿ ಮೇಲೆಯೇ ಅನುಮಾನ ಮೂಡಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಈ ಬಗ್ಗೆ ಹೆಚ್‌ಡಿಎಫ್‌ಸಿ ಬ್ಯಾಂಕ್‌ನ ಸೆಕ್ಯುರಿಟಿ ಸೀನಿಯರ್ ಮ್ಯಾನೇಜರ್ ನಟರಾಜ್ ಪ್ರತಿಕ್ರಿಯಿಸಿ, ಮಧ್ಯಾಹ್ನ 12:21ಕ್ಕೆ ಜೆಪಿ ನಗರದ ಹೆಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ಹಣ ತಗೊಂಡಿದ್ದಾರೆ. ಸುಮಾರು 7 ಕೋಟಿ 11 ಲಕ್ಷ ಹಣ ತಗೊಂಡಿದ್ದಾರೆ. ಗೋವಿಂದರಾಜಪುರಂ ಬ್ರ್ಯಾಂಚ್‌ಗೆ ಹಣ ಹೋಗ್ತಾ ಇತ್ತು. ಇಬ್ಬರು ಗನ್ ಮ್ಯಾನ್, ಓರ್ವ ಡ್ರೈವರ್ ಹಾಗೂ ಓರ್ವ ಹ್ಯಾಂಡ್ಲರ್ ಇದ್ದರು. ಮಧ್ಯಾಹ್ನ 1 ಗಂಟೆ ವೇಳೆಗೆ ಬ್ರಾಂಚ್ ಮ್ಯಾನೇಜರ್‌ಗೆ ಕರೆ ಮಾಡಿದ್ದಾರೆ. ಬಳಿಕ ಡಿಜಿ ಕಂಟ್ರೋಲ್ ರೂಮ್‌ಗೆ, ಪೊಲೀಸ್ ಕಂಟ್ರೋಲ್ ರೂಮ್‌ಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಹುಡುಕಾಟ ಮಾಡಿದ್ದಾರೆ. ಯಾಕೆ ತಡ ಆಯ್ತು ಅಂದ್ರೆ ರಾಬರ್ಸ್ ಮೊಬೈಲ್ ಕಸಿದುಕೊಂಡಿದ್ರು. ಹಣ ರಾಬರಿ ಮಾಡೋವರೆಗೂ ಮೊಬೈಲ್ ಕೊಟ್ಟಿಲ್ಲ. ಹೀಗಾಗಿ ಅವರು ಬ್ರ್ಯಾಂಚ್ ಮ್ಯಾನೇಜರ್‌ಗೂ ಮಾಹಿತಿ ನೀಡಲು ಆಗಿಲ್ಲ. ನಮಗೂ ಕೆಲ ಅನುಮಾನಗಳು ಇವೆ. ಅವರೆಲ್ಲ 7-8 ವರ್ಷಗಳಿಂದ ಕೆಲಸ ಮಾಡ್ತಾ. ಪೊಲೀಸರು ಈಗ ನಾಲ್ವರನ್ನ ವಶಕ್ಕೆ ಪಡೆದು ವಿಚಾರಣೆ ಮಾಡ್ತಾ ಇದ್ದಾರೆ ಅಂತ ತಿಳಿಸಿದ್ದಾರೆ.
RBI ಅಧಿಕಾರಿಗಳ ಸೋಗಿನಲ್ಲಿ ಬಂದಿದ್ದ ರಾಬರ್ಸ್
ಜೆ.ಪಿ ನಗರದ ಹೆಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ಸಿಎಂಎಸ್ ವಾಹನದಲ್ಲಿ ಹಣವನ್ನು ತರಲಾಗುತ್ತಿತ್ತು. ಇದೇ ವೇಳೆ ಇನ್ನೋವಾ ಕಾರಿನಲ್ಲಿದ್ದ ದರೋಡೆಕೋರರು ಸಿಎಂಎಸ್ ವಾಹನವನ್ನ ಹಿಂಬಾಲಿಸಿದ್ದಾರೆ. ಹಲವು ಜಾಗಗಳಲ್ಲಿ ಓವರ್ ಟೇಕ್ ಮಾಡಲು ಯತ್ನಿಸಿದ್ದಾರೆ. ಸೌತ್ ಎಂಡ್ ಸರ್ಕಲ್‌ನಿಂದ ಲಾಲ್ ಬಾಗ್ ರಸ್ತೆಯಲ್ಲಿ ಹಲವು ಬಾರಿ ಓವರ್ ಟೇಕ್ ಮಾಡಲು ಯತ್ನಿಸಿದ್ದಾರೆ. ಕೊನೆಗೆ ಹಣವಿದ್ದ ಕಾರನ್ನ ಅಡ್ಡಗಟ್ಟಿ ನಾವೆಲ್ಲಾ ಆರ್‌ಬಿಐ ಅಧಿಕಾರಿಗಳು, ಕಾರಿನಲ್ಲಿ ಚಾಲಕ ಬಿಟ್ಟು ಎಲ್ಲರೂ ಕೆಳಗಿಳಿಯಿರಿ ಎಂದು ಹೇಳಿದ್ದಾರೆ. ಡ್ರೈವರ್ ನನ್ನ ಡೈರಿ ಸರ್ಕಲ್ ಕಡೆಗೆ ಕರೆತಂದಿದ್ದಾರೆ. ನಂತರ ಡೈರಿ ಸರ್ಕಲ್ ಫ್ಲೈ ಓವರ್ ಮೇಲೆ ವಾಹನ ನಿಲ್ಲಿಸಿ ಐದೇ ನಿಮಿಷದಲ್ಲಿ ತಮ್ಮ ಭಾರತ ಸರ್ಕಾರ ನಾಮಫಲಕ ಹೊಂದಿದ್ದ ಕಾರಿಗೆ ಹಣವನ್ನ ತುಂಬಿಕೊಂಡು ಪರಾರಿಯಾಗಿದ್ದಾರೆ.
ಪ್ರತ್ಯಕ್ಷದರ್ಶಿ ಹೇಳಿದ್ದೇನು?
3-4 ಜನ ಸಿಲ್ವರ್ ಕಲರ್ ಜೆನ್ ಕಾರಲ್ಲಿ ಬಂದ್ರು. ಎಟಿಂಎಂ ಗಾಡಿಯನ್ನು ಅಡ್ಡ ಹಾಕಿ ನಿಲ್ಲಿಸಿದರು. ಸ್ಲೋ ಆಗಿ ಬಂದು ಓವರ್ ಟೇಕ್ ಮಾಡಿ ವ್ಯಾನ್ ಅಡ್ಡ ಹಾಕಿದ್ರು. ಕಾರನ್ನ ನಿಲ್ಲಿಸಿ ಐದಾರು ನಿಮಿಷ ಮಾತುಕತೆ ನಡೆಸಿದ್ರು, ಆಮೇಲೆ ಎಟಿಎಂ ಗಾಡಿ ಮುಂದೆ ಹೋಯ್ತು. ಹಿಂದೆ ಸಿಲ್ವರ್ ಕಲರ್ ಜೆನ್ ಕಾರು ಫಾಲೋ ಮಾಡ್ಕೊಂಡು ಹೋಯ್ತು. ಇದನ್ನೂ ಓದಿ: ಕೆಲವರಿಗೆ ಅಧಿಕಾರ ಮಾತ್ರ ಬೇಕು, ಅದಕ್ಕೆ ನಾವು ಏನು ಮಾಡೋದು: ಡಿಕೆಶಿ ಮಾರ್ಮಿಕ ಮಾತು
ಇನ್ನೂ ದರೋಡೆಕೋರರು ಭಾರತ ಸರ್ಕಾರ ಎಂಬ ನಾಮಫಲಕ ಹೊಂದಿದಂತಹ ಕೆಎ 03 ಎನ್‌ಸಿ-8052 ನಂಬರ್‌ನ ಇಂದಿರಾನಗರ ಆರ್‌ಟಿಓದಲ್ಲಿ ರಿಜಿಸ್ಟ್ರೇಷನ್ ಆಗಿರುವ ಇನ್ನೋವಾ ಕಾರನ್ನು ಬಳಸಿದ್ದಾರೆ. ಮೊದಲಿಗೆ ದರೋಡೆ ಮಾಡಲು 2 ಕಾರುಗಳನ್ನು ಬಳಕೆ ಮಾಡಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ, ಮೊದಲಿಗೆ ಸಿಲ್ವರ್ ಕಲರ್ ಜೆನ್ ಕಾರಲ್ಲಿ ರಾಬರಿಗೆ ಬಳಸಿದ್ದಾರೆ. ಇನ್ನು ದರೋಡೆಕೋರರು ರಾಬರಿ ಮಾಡಲು ನಕಲಿ ನಂಬರ್ ಪ್ಲೇಟ್ ಬಳಕೆ ಮಾಡಿದ್ದಾರೆ. ಸ್ವಿಫ್ಟ್ ಕಾರಿನ ನಂಬರ್ ಪ್ಲೇಟ್ ಅನ್ನು ಇನ್ನೋವಾ ಕಾರಿಗೆ ಬಳಕೆ ಮಾಡಿದ್ದಾರೆ. ಬೆಂಗಳೂರಿನ ತಿಪ್ಪಸಂದ್ರ ವಿಳಾಸದಲ್ಲಿ ಪಿ.ಬಿ. ಗಂಗಾಧರನ್ ಎಂಬುವವರ ಹೆಸರಿನಲ್ಲಿ ನೊಂದಣಿಯಾಗಿರುವ ಕಾರಿನ ನಂಬರ್‌ನ್ನ ಬಳಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ವಾಹನ ಸವಾರರಿಗೆ ಜಿಬಿಎ ಶಾಕ್ – ಬೀದಿಬದಿ ತಿಂಗಳುಗಟ್ಟಲೆ ವಾಹನ ನಿಲ್ಲಿಸಿದ್ರೆ ದಂಡ
ನಗರಾದ್ಯಂತ ಟ್ರಾಫಿಕ್ ಪೊಲೀಸರು ಅಲರ್ಟ್
ಘಟನಾ ಸ್ಥಳಕ್ಕೆ ತಕ್ಷಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ದರೋಡೆಕೋರರು ಪರಾರಿಯಾಗಿರುವ ಕಾರನ್ನ ಪತ್ತೆಹಚ್ಚಲು ನಗರದಾದ್ಯಂತ ಟ್ರಾಫಿಕ್ ಪೊಲೀಸರಿಗೆ ಅಲರ್ಟ್ ಮಾಡಿದ್ದಾರೆ. ಅದರಂತೆ ಪೊಲೀಸರು ವಾಹನ ತಡೆಯಲು ನಾಕಾಬಂದಿ ಹಾಕಿದ್ದಾರೆ. ಬೆಂಗಳೂರಿನಾದ್ಯಂತ ಪೊಲೀಸರಿಗೆ ನಗರ ಪೊಲೀಸ್ ಆಯುಕ್ತರಿಂದ ಎಲ್ಲಾ ಠಾಣೆಗೂ ಸಂದೇಶ ರವಾನೆ ಮಾಡಿದ್ದಾರೆ. ಎಲ್ಲಾ ಕಡೆ ಬ್ಯಾರಿಕೇಡ್ ಹಾಕಿ ತಪಾಸಣೆಗೆ ಸೂಚನೆ ನೀಡಲಾಯಿತು. ಹೀಗಾಗಿ ನಗರದ ಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಕಾಬಂಧಿ ಹಾಕಿ ರಾಬರ್ಸ್ ಅನ್ನು ಹಿಡಿದೇ ಹಿಡಿಯುತ್ತೇವೆ ಎಂದು ಕಮಿಷನರ್ ತಿಳಿಸಿದ್ರು ಘಟನಾ ಸ್ಥಳದಲ್ಲಿ ಶ್ವಾನದಳದಿಂದಲೂ ತಪಾಸಣೆ ನಡೆಸಲಾಯಿತು.
ಇನ್ನು ದರೋಡೆಗೆ ಬಳಸಿದ್ದ ಇನ್ನೋವಾ ಕಾರು ನಗರದಲ್ಲಿ ಎಲ್ಲೆಲ್ಲಿ ಓಡಾಡಿದೆ ಎಂದು ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಇನ್ನೋವಾ ಕಾರು ಸಂಚಾರ ಮಾಡಿರುವುದು ಸೆರೆಯಾಗಿದೆ. ಡೈರಿ ಸರ್ಕಲ್‌ನಿಂದ ಯಾವ ಕಡೆಗೆ ಹೋಗಿದೆ ಎಂದು ತಲಾಶ್ ಮಾಡುತ್ತಿದ್ದಾರೆ. ದರೋಡೆಕೋರರನ್ನ ಬಂಧಿಸಲು ಮೂರು ತಂಡವನ್ನ ರಚನೆ ಮಾಡಿ ದರೋಡೆಕೋರರಿಗೆ ಬಲೆ ಬೀಸಿದ್ದರೆ, ನಾವು ದರೋಡೆಕೋರರನ್ನು ಹಿಡಿದೇ ಹಿಡಿಯುತ್ತೇವೆ ಎಂದು ಗೃಹ ಸಚಿವರು ತಿಳಿಸಿದ್ದಾರೆ. ಇದನ್ನೂ ಓದಿ: ಸಕ್ಕರೆ ದರ ಹೆಚ್ಚಳ ಮಾಡಲು ಕೇಂದ್ರ ನಿರ್ಧಾರ – ಸಿದ್ದರಾಮಯ್ಯ, ಡಿಕೆಶಿ ಸ್ವಾಗತ


