ಶಿವಮೊಗ್ಗ: ದೀಪಾವಳಿ ಹಬ್ಬ (Deepavali Festival) ದ ಬಳಿಕ ಗ್ರಾಮೀಣ ಭಾಗದಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಏರ್ಪಡಿಸಲಾಗುತ್ತದೆ. ಸಾವು-ನೋವು ಸಂಭವಿಸುತ್ತಿದ್ರೂ ಆಚರಣೆ ಅಂತ ಜನ ಜೀವಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಮಲೆನಾಡು ಜಿಲ್ಲೆ ಶಿವಮೊಗ್ಗ (Shivamogga) ದಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಒಂದೇ ದಿನ ಮೂವರು ಬಲಿಯಾಗಿದ್ದಾರೆ.
Advertisement
ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಹೋರಿ ತಿವಿತಕ್ಕೆ ಸಾವನ್ನಪ್ಪಿದ್ದಾರೆ. ಶಿಕಾರಿಪುರ ತಾಲೂಕಿನ ಗ್ರಾಮದಲ್ಲಿ ಹೋರಿ ಬೆದರಿಸುವ ವೇಳೆ ಬೆದರಿದ ಎದೆ ಮೇಲೆ ಕಾಲಿಟ್ಟ ಪರಿಣಾಮ ಪ್ರಶಾಂತ್ ಎಂಬಾತ ಸಾವನ್ನಪ್ಪಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಸೊರಬ ತಾಲೂಕಿನ ಜಡೆ ಗ್ರಾಮದಲ್ಲಿ ನಡೆದ ಹೋರಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಚಗಟೂರು ನಿವಾಸಿ ಆದಿ ಎಂಬಾತ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ. ಆದರೆ ಹೋರಿ ತಿವಿತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ತೂಗು ಸೇತುವೆ ದುರಂತ- ಸಾವಿನ ಸಂಖ್ಯೆ 132ಕ್ಕೆ ಏರಿಕೆ; ಸ್ಥಳಕ್ಕೆ ಮೋದಿ ಭೇಟಿ ನೀಡುವ ಸಾಧ್ಯತೆ
Advertisement
Advertisement
ಇತ್ತ ತರಲಘಟ್ಟ ಗ್ರಾಮದಲ್ಲಿ ಹೋರಿ ಬೆದರಿಸುವ ಸ್ಪರ್ಧೆ ವೀಕ್ಷಣೆಗೆ ಶಿಕಾರಿಪುರ ತಾಲೂಕಿನ ಕಲ್ಮನೆ ಗ್ರಾಮದ ವಸಂತ ಅನ್ನೋರು ಬಂದಿದ್ರು. ಹೋರಿ ಸ್ಫರ್ದೆ ನೋಡುತ್ತಿರುವಾಗಲೇ ಹಾರಿ ಬಂದ ಕುತ್ತಿಗೆಗೆ ತಿವಿದ ಪರಿಣಾಮ ವಸಂತ ಕೊನೆಯುಸಿರೆಳೆದಿದ್ದಾರೆ. ಇನ್ನು ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಇಂತಹ ಆಚರಣೆ ವೇಳೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಅಂದಿದ್ದಾರೆ.