ಚಿಕ್ಕಬಳ್ಳಾಪುರ: ನೀರಿನಲ್ಲಿ ಮುಳುಗುತ್ತಿದ್ದ 6 ವರ್ಷದ ಬಾಲಕನ ಉಳಿಸಲು ಹೋದ ಮೂವರು ಸಂಬಂಧಿಕರು ಜಲಸಮಾಧಿಯಾಗಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಶ್ರೀನಿವಾಸ ಸಾಗರ ಜಲಾಶಯದಲ್ಲಿ (Srinivasa Sagara Reservoir) ನಡೆದಿದೆ.
ಬೆಂಗಳೂರು ಮೂಲದ ಫರ್ಹೀನಾ (35), ಚಿಕ್ಕಬಳ್ಳಾಪುರ ನಿವಾಸಿ ಬಷೀರಾ (35), ಹಾಗೂ ಬೆಂಗಳೂರಿನ ಇಮ್ರಾನ್ (45) ಮೃತರು. ರಂಜಾನ್ ಹಬ್ಬದ ಮುಗಿದ ಕಾರಣ ಸಂಬಂಧಿಕರೆಲ್ಲಾ ಸೇರಿ 10 ಮಂದಿ ಮಕ್ಕಳೊಡನೆ ಎರಡು ಕಾರುಗಳ ಮೂಲಕ ಚಿಕ್ಕಬಳ್ಳಾಪುರದ ಸುತ್ತಮುತ್ತಲ ಪ್ರವಾಸಿತಾಣಗಳಿಗೆ ಪಿಕ್‌ನಿಕ್‌ಗೆಂದು ಹೋಗಿದ್ದರು. ಬೆಳಗ್ಗೆ ನಂದಿಬೆಟ್ಟಕ್ಕೆ ಹೋಗಿದ್ದು, ರಸ್ತೆ ಬಂದ್ ಹಿನ್ನೆಲೆಯಲ್ಲಿ ಶ್ರೀನಿವಾಸ ಸಾಗರದತ್ತ ಹೋಗಿದ್ದಾರೆ. ಮಧ್ಯಾಹ್ನ ಊಟ ಮಾಡೋಣ ಎಂದು ಜಲಾಶಯದ ಬಂಡೆ ಮೇಲೆ ಕೂತು ಊಟ ಮಾಡೋಕೆ ಮುಂದಾಗಿದ್ದರು. ಅಷ್ಟರಲ್ಲಿ ಫರ್ಹೀನಾರ 6 ವರ್ಷದ ಗಂಡು ಮಗು ಅನಂ ನೀರಿನಲ್ಲಿ ಇಳಿದು ಆಟವಾಡುತ್ತಿದ್ದು, ಆಕಸ್ಮಿಕವಾಗಿ ಕಾಲು ಜಾರಿ ನೀರಿನೊಳಗೆ ಮುಳುಗಿದ್ದಾನೆ. ಇದನ್ನೂ ಓದಿ: ಬ್ಲಡ್ ಶುಗರ್ ಲೆವೆಲ್ ಏರಿಕೆ – ಲಾಲೂ ಪ್ರಸಾದ್ ಯಾದವ್ ಆಸ್ಪತ್ರೆಗೆ ದಾಖಲು
- Advertisement -
- Advertisement -
ಕೂಡಲೇ ಫರ್ಹೀನಾ ಮಗನ ರಕ್ಷಣೆಗೆ ನೀರಿಗೆ ಇಳಿದಿದ್ದು, ನಂತರ ಇಮ್ರಾನ್ ಹಾಗೂ ಬಷೀರಾ ಸಹ ಒಬ್ಬೊಬ್ಬರಾಗಿ ನೀರಿಗೆ ಧುಮುಕಿದ್ದಾರೆ. ಆದರೆ ಅನಂನ ರಕ್ಷಣೆ ಮಾಡಿ ಮೂವರು ಸಹ ಮರಳಿ ಮೇಲೆ ಬರಲಾಗದೇ ನೀರಿನಲ್ಲೇ ಮುಳುಗಿದ್ದಾರೆ. ಅಲ್ಲೇ ಇದ್ದ ಸ್ಥಳೀಯರು ಮೂವರನ್ನ ಮೇಲೆ ತಂದು ಸಿಪಿಆರ್ ಮಾಡಿದ್ದಾರೆ. ಶಾಸಕ ಪ್ರದೀಪ್ ಈಶ್ವರ್‌ಗೆ ಸೇರಿದ ಅಮ್ಮ ಅಂಬ್ಯುಲೆನ್ಸ್ ಬಂದು ಮೂವರನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಅರ್ಧಂಬರ್ಧ ಉಸಿರಾಡುತ್ತಿದ್ದ ಮಹಿಳೆ ಸೇರಿ ಮೂವರು ಸಹ ಮೃತಪಟ್ಟಿದ್ದಾರೆ. ಮೃತರನ್ನು ಕಳೆದುಕೊಂಡು ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಗೋಲ್ಡ್ ರಾಣಿಗೆ ಮತ್ತೆ ಶಾಕ್ ಕೊಟ್ಟ ಪತಿ – ವಿಚ್ಛೇದನಕ್ಕೆ ಅರ್ಜಿ
- Advertisement -