ಚೆನ್ನೈ: ಕಲುಷಿತ ನೀರು ಸೇವಿಸಿ ಮೂವರು ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿರುವ ಘಟನೆ ಚೆನ್ನೈ (Chennai) ಸಮೀಪದ ಪಲ್ಲಾವರಂ (Pallavaram) ಎಂಬಲ್ಲಿ ನಡೆದಿದೆ.
ಮೃತರನ್ನು ತಿರುವೀತಿ (56), ಮೋಹನರಂಗಂ (42), ವರಲಕ್ಷ್ಮಿ (88) ಎಂದು ಗುರುತಿಸಲಾಗಿದ್ದು, 20 ಜನ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರನ್ನು ಕ್ರೋಮ್‌ಪೇಟೆ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇನ್ನೂ ಕೆಲವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇದನ್ನೂ ಓದಿ: ಇಂದು ದೆಹಲಿ-ಹರಿಯಾಣ ಗಡಿಯಲ್ಲಿ ರೈತರ ಪ್ರತಿಭಟನೆ; ಶಂಭು ಗಡಿಯಲ್ಲಿ ರೈತರು ಜಮಾವಣೆ
Advertisement
Advertisement
ಫೆಂಗಲ್ ಚಂಡಮಾರುತದಿಂದಾಗಿ ಪಲ್ಲಾವರಂನಲ್ಲಿ ಇತ್ತೀಚಿಗೆ ಸುರಿದ ಮಳೆಯ ಪರಿಣಾಮ ಕೊಳಚೆ ನೀರು ಮತ್ತು ಕುಡಿಯುವ ನೀರು ಮಿಶ್ರಣವಾಗಿ ಕಲುಷಿತಗೊಂಡಿದೆ ಎಂದು ಅಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ.
Advertisement
குரோம்பேட்டை அரசு மருத்துவமனையில் வாந்தி மற்றும் மயக்கம் காரணமாக சிகிச்சை பெறுபவர்களை நேரில் சந்தித்து நலம் விசாரித்து அவர்களுக்கு வழங்கப்படும் சிகிச்சை குறித்து மருத்துவர்களிடம் கேட்டறியப்பட்டது. #Masubramanian #TNHealthminister #DMK4TN pic.twitter.com/nM8KPGMaRE
— Subramanian.Ma (@Subramanian_ma) December 5, 2024
Advertisement
ತಮಿಳುನಾಡು ಆರೋಗ್ಯ ಸಚಿವ ಮಾ.ಸುಬ್ರಮಣಿಯನ್ (Ma.Subramanian) ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀರಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಸಾವಿಗೆ ನಿಖರವಾದ ಕಾರಣ ತಿಳಿಯಲಿದೆ ಎಂದು ತಿಳಿಸಿದ್ದಾರೆ.
ವೈದ್ಯರ ಮಾಹಿತಿಯ ಆಧಾರದ ಮೇಲೆ, ಪಲ್ಲಾವರಂನ ಕಾಮರಾಜ್‌ನಗರ ಹಾಗೂ ಮನಲ್ಮೇಡು ನಿವಾಸಿಗಳು ಕಳೆದ ಮೂರು ದಿನಗಳಿಂದ ವಾಂತಿ ಹಾಗೂ ಭೇದಿ ಲಕ್ಷಣಗಳೊಂದಿಗೆ ಸರ್ಕಾರಿ ಆಸ್ಪತ್ರೆಗೆ ಬರುತ್ತಿದ್ದಾರೆ. ಇಲ್ಲಿಯವರೆಗೂ ಒಟ್ಟು 34 ಚಿಕಿತ್ಸೆ ಪಡೆದಿದ್ದು, 14 ಮಂದಿ ಬಿಡುಗಡೆಯಾಗಿದ್ದಾರೆ. 19 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.ಇದನ್ನೂ ಓದಿ: EXCLUSIVE: ಮುಡಾ ಕೇಸ್; 13 ವರ್ಷದಲ್ಲಿ 4,921 ಕ್ಕೂ ಹೆಚ್ಚು ಸೈಟ್‌ಗಳ ಅಕ್ರಮ ಹಂಚಿಕೆ