ಪಾಟ್ನಾ: ಬಿಹಾರದ ಸಿತಾಮಾರ್ಹಿ (Sitamarhi) ಜಿಲ್ಲೆಯಲ್ಲಿ ಕಳ್ಳಬಟ್ಟಿ ಸೇವಿಸಿ ಮೂವರು ಸಾವಿಗೀಡಾಗಿದ್ದು, ಇಬ್ಬರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಭಾರತ ಮತ್ತು ನೇಪಾಳ ಗಡಿಯ ಬಳಿ ಜಯನಗರ ಹಾಗೂ ಅರಾರಿಯಾ ಗ್ರಾಮದ ಸೋನ್‌ಬಸ್ರಾ ಹಾಗೂ ಕನ್ಹೌಲಿ ಬ್ಲಾಕ್‌ನಲ್ಲಿ ಘಟನೆ ಸಂಭವಿಸಿದೆ. ಸಂತ್ರಸ್ತರು ಸದ್ಯ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಲಾಗಿದೆ.ಇದನ್ನೂ ಓದಿ: Kolkata Horror | ಕಿರಿಯ ವೈದ್ಯರಿಗೆ ನಾನು ಎಂದಿಗೂ ಬೆದರಿಕೆ ಹಾಕಿಲ್ಲ: ಮಮತಾ ಬ್ಯಾನರ್ಜಿ
ಜಯನಗರದ ನಿವಾಸಿಗಳಾದ ಲಾಲ್ ಬಾಬು ರೈ(50), ಗೌರಿಶಂಕರ್ ರಾವ್ (45), ಅರಾರಿಯಾ ನಿವಾಸಿ ಉಮಾ ಶಾ (55) ಮೃತಪಟ್ಟವರು.
ಶನಿವಾರ ಸಂಜೆ ಐದು ಸಂತ್ರಸ್ತರು ಸ್ಥಳೀಯ ಮಾರುಕಟ್ಟೆಯಲ್ಲಿ ಖರೀದಿಸಿದ್ದ ಕಳ್ಳಬಟ್ಟಿಯನ್ನು ಸೇವಿಸಿದ್ದಾರೆ. ಭಾನುವಾರದಿಂದಲೇ ಇವರ ಸ್ಥಿತಿ ಹದಗೆಡಲು ಪ್ರಾರಂಭಿಸಿದೆ. ತಕ್ಷಣ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದ ಸ್ವಲ್ಪ ಹೊತ್ತಿನಲ್ಲಿ ಲಾಲ್ ಬಾಬು ರೈ ಮೃತಪಟ್ಟಿದ್ದಾರೆ. ತ್ರೀವವಾದ ಹೊಟ್ಟೆ ನೋವು, ವಾಕರಿಕೆ, ತಲೆನೋವು ಹಾಗೂ ದೃಷ್ಟಿ ಕಳೆದುಕೊಳ್ಳುತ್ತಾ ಸಾವನ್ನಪ್ಪಿದರು.
ಅದೇ ದಿನ, ಚಿಕಿತ್ಸೆಯ ಸಮಯದಲ್ಲಿ ಉಮಾ ಶಾ ಮೃತಪಟ್ಟಿದ್ದಾನೆ. ಬಳಿಕ ಮಂಗಳವಾರದಂದು ಗೌರಿ ಶಂಕರ್ ರಾವ್ ಸಾವಿಗೀಡಾಗಿದ್ದಾರೆ. ಸದ್ಯ ಜಗತ್ ಮಹತೋ (33) ಹಾಗೂ ಛೋಟಾನ್ ಮಹತೋ (20) ಎಂಬವರು ಚಿಕಿತ್ಸೆ ಪಡೆಯುತ್ತಿದ್ದಾರೆ.ಇದನ್ನೂ ಓದಿ: ಯುಪಿಯಲ್ಲಿ 7 ಮಕ್ಕಳನ್ನು ಕೊಂದ ತೋಳ – ಆಪರೇಷನ್ ಭೇಡಿಯಾ ನಡೆಸಿ ಸೆರೆ