DharwadDistrictsKarnatakaLatestMain Post

45 ಸಾವಿರ ರೂ. ಮೌಲ್ಯದ 9 ಸಾವಿರ ಮೊಟ್ಟೆಗಳನ್ನು ಕದ್ದು ಪರಾರಿಯಾಗುತ್ತಿದ್ದವರ ಬಂಧನ!

ಧಾರವಾಡ: ಫಾರಂ ನಿಂದ ಮೊಟ್ಟೆಗಳನ್ನು ಕದ್ದು ಪರಾರಿಯಾಗುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಘಟನೆ ಮೂರು ದಿನಗಳ ಹಿಂದೆ ನಡೆದಿದ್ದು, ಕಳವುಗೈದವರನ್ನು ಬೆಳಿಗಟ್ಟಿ ಗ್ರಾಮದ ಮೈಲಾರಪ್ಪ ಕಲ್ಲೂರ(28), ಕಲಘಟಗಿ ತಾಲೂಕಿನ ಶಂಕರ ಜಾಧವ(30) ಹಾಗೂ ಕಲ್ಲಪ್ಪ ಗುಡಿಹಾಳ ಎಂದು ಗುರುತಿಸಲಾಗಿದೆ.

ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದಲ್ಲಿ ಕುಲಕರ್ಣಿ ಎಂಬವರ ಫಾರಂನಲ್ಲಿ ಈ ಘಟನೆ ನಡೆದಿದ್ದು, ಫಾರಂನಲ್ಲಿದ್ದ ಸುಮಾರು 45 ಸಾವಿರ ಮೌಲ್ಯದ 9 ಸಾವಿರ ಮೊಟ್ಟೆಗಳನ್ನು ಕಳ್ಳರು ಕದ್ದೊಯ್ದಿದ್ದರು. ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

Back to top button