ವಿಜಯಪುರ: ಖೋಟಾ ನೋಟು ಮುದ್ರಿಸುತ್ತಿದ್ದ ಮೂವರು ಆರೋಪಿಗಳನ್ನು ಡಿಸಿಐಬಿ ಇನ್ಸ್ ಪೆಕ್ಟರ್ ಚಂದ್ರಕಾಂತ ಅವರು ಎಲ್.ಟಿ ನೇತೃತ್ವದಲ್ಲಿ ದಾಳಿ ನಡೆಸಿ ಬಂಧಿಸಿದ್ದಾರೆ.
ಹಾಜಿಮಸ್ತಾನ ವಾಲೀಕಾರ್(23), ಸೀರಾಜ್ ಮಳ್ಳಿ(27), ಮೇಹಬೂಬ್ ವಾಲೀಕಾರ್(23) ಬಂಧಿತ ಆರೋಪಿಗಳು. ಬಂಧಿತರಿಂದ 200, 500 ಹಾಗೂ 2000 ಮುಖಬೆಲೆಯ ಒಟ್ಟು 67,200ರೂ ಮೌಲ್ಯದ ಖೋಟಾ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೇ, ಖೋಟಾ ನೋಟು ಮುದ್ರಿಸುವ 38 ಪೇಪರ್‍ಗಳು, 2ಎಪ್ಸಾನ್ ಕಂಪನಿಯ ಪ್ರೀಂಟರ್‍ಗಳನ್ನ ಜಪ್ತಿ ಮಾಡಿದ್ದಾರೆ.
Advertisement
Advertisement
ವಿಜಯಪುರ ನಗರದ ದರ್ಗಾ ಜೈಲು ಬಳಿಯ ಮನೆಯೊಂದರಲ್ಲಿ ಖೋಟಾ ನೋಟು ತಯಾರಿಸಲಾಗುತ್ತದೆ ಎಂಬ ಖಚಿತ ಮಾಹಿತಿ ಮೇರೆಗೆ ಡಿಸಿಐಬಿ ಪೊಲೀಸರು ಈ ದಾಳಿ ಮಾಡಿದ್ದಾರೆ.
Advertisement
ಈ ಕುರಿತು ಡಿಸಿಐಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.