ಬೆಂಗಳೂರು: ಒಂದೇ ಕುಟುಂಬದ ಮೂವರು ವಿಷ ಕುಡಿದು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ (Bengaluru) ಮಹಾಲಕ್ಷ್ಮಿ ಲೇಔಟ್‍ನ ಅಪಾರ್ಟ್‍ಮೆಂಟ್‍ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ತಾಯಿ ಯಶೋಧಾ (70), ಮಗಳು ಸುಮನ್ (41) ಹಾಗೂ ಮಗ ನರೇಶ್ (31) ಆತ್ಮಹತ್ಯೆಗೆ ಶರಣಾದವರು. ಮಹಾಲಕ್ಷ್ಮೀ ಲೇಔಟ್‍ನ ಅಪಾರ್ಟ್‍ಮೆಂಟ್‍ವೊಂದರಲ್ಲಿ ಯಶೋಧಾ, ಸುಮನ್, ನರೇಶ್ ಮೂವರು ವಾಸಿಸುತ್ತಿದ್ದರು. ಯಶೋಧಾಗೆ ಮತ್ತೊಂದು ಮಗಳಿದ್ದು, ಆಕೆ ಮದುವೆಯಾಗಿ ರಾಜಾಜಿನಗರದಲ್ಲಿ ವಾಸಿಸುತ್ತಿದ್ದಳು.
Advertisement
Advertisement
ಆದರೆ ಸುಮನ್ ಮತ್ತು ನರೇಶ್‍ಗೆ ಇನ್ನೂ ಮದುವೆ ಆಗಿರಲಿಲ್ಲ. ಜೊತೆಗೆ ನರೇಶ್ ಕಂಟ್ರಾಕ್ಟರ್ ಆಗಿದ್ದು, ಸಾಲ ಮಾಡಿಕೊಂಡಿದ್ದ. ಮಗಳು ಸುಮನ್‍ಗೆ ಅನಾರೋಗ್ಯ ಸಮಸ್ಯೆ ಇತ್ತು. ಯಶೋಧಾ ಅವಳ ಪತಿ ಎರಡು ವರ್ಷದ ಹಿಂದೆ ತೀರಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ತೀವ್ರ ಬೇಸತ್ತು, ವೈಯಕ್ತಿಕ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್ ಬರೆದು ಕಳೆದ ಎರಡು ದಿನಗಳ ಹಿಂದೆಯೇ ಮೂವರು ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
Advertisement
ನಿನ್ನೆ ರಾತ್ರಿ ಆತ್ಮಹತ್ಯೆ ಮಾಡಿಕೊಂಡ ಮೂವರಿಗೂ ಸಂಬಂಧಿಕರು ಕರೆ ಮಾಡಿದ್ದಾರೆ. ಆದರೆ ಎಷ್ಟೇ ಫೋನ್ ಮಾಡಿದರೂ ರಿಸಿವ್ ಮಾಡ್ತಾ ಇರಲಿಲ್ಲ. ಇದರಿಂದಾಗಿ ಯಶೋಧಾಳ ಕೊನೆಯ ಮಗಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯಶೋಧಾಳ ಕೊನೆಯ ಮಗಳು ಮನೆಯ ಬಳಿ ಹೋಗಿ ಪರಿಶೀಲನೆ ನಡೆಸಿದ ವೇಳೆ ಮೂವರು ಮೃತಪಟ್ಟಿರೋದು ಬೆಳಕಿಗೆ ಬಂದಿದೆ. ಮೂರು ಮೃತದೇಹವನ್ನು ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ಸುನಿಲ್ ಕುಮಾರ್ ವಿರುದ್ಧ ಸಿಡಿದ ಹಿಂದೂ ಕಾರ್ಯಕರ್ತರು
Advertisement
ಘಟನೆ ಬಗ್ಗೆ ಅಪಾರ್ಟ್‌ಮೆಂಟ್ ಸೆಕ್ಯುರಿಟಿ ಭೀಮಣ್ಣ ಮಾತನಾಡಿ, ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಅಪಾರ್ಟ್‌ಮೆಂಟ್‌ಗೆ ಬಂದಿದ್ದರು. ತಾಯಿ ಮತ್ತು ಇಬ್ಬರು ಮಕ್ಕಳು ವಾಸವಾಗಿದ್ದರು. ಮತ್ತೋರ್ವ ಮಗಳು ಅಡ್ವಕೇಟ್ ಆಗಿದ್ದಾರೆ. ಅವರು ಬೇರೆ ಕಡೆ ವಾಸವಿದ್ದಾರೆ. ಅಡ್ವಕೇಟ್ ಮಗಳೇ ಬಂದು ನೊಡಿದ್ದಾರೆ. ಬಳಿಕ ಅವರೇ ಪೊಲೀಸರಿಗೆ ಮಾಹಿತಿ ಸಹ ನೀಡಿದ್ದಾರೆ. ಮನೆಯಲ್ಲಿದ್ದ ಓರ್ವರಿಗೆ ಹುಷಾರಿರಲಿಲ್ಲ. ಮನೆಯವರೆಲ್ಲಾ ಬಹಳ ಒಳ್ಳೆಯವರೆಂದು ಹೇಳಿದರು. ಇದನ್ನೂ ಓದಿ: ಇಂಗ್ಲಿಷ್ ಮೀಡಿಯಂ ಶಾಲೆಗಳ ಪರ ರಾಹುಲ್ ಗಾಂಧಿ ಬ್ಯಾಟಿಂಗ್