ವಾಷಿಂಗ್ಟನ್: ಅಮೆರಿಕದ ಫ್ಲೋರಿಡಾದಲ್ಲಿ ಬೆತ್ತಲೆಯಾಗಿ ವಾಹನ ಚಲಾಯಿಸುತ್ತಿದ್ದ ಮೂವರು ಯುವತಿಯರನ್ನು ಪೊಲೀಸರು ಚೇಸ್ ಮಾಡಿ ಬಂಧಿಸಿದ್ದಾರೆ.
ಮೊದಲು ಕಾರ್ ರೆಸ್ಟ್ ಸ್ಟಾಪ್‍ನಲ್ಲಿ ಬೆತ್ತಲೆಯಾಗಿದ್ದ ಮೂವರು ಸನ್‍ಟ್ಯಾನ್ ಲೋಷನ್ ಹಚ್ಚಿಕೊಳ್ಳುವುದನ್ನು ಪೊಲೀಸರು ಗಮನಿಸಿದ್ದಾರೆ. ಈ ವೇಳೆ ಪೊಲೀಸರು ಕಾರಿನ ಸಮೀಪ ಬಂದು ಏನು ಮಾಡುತ್ತಿದ್ದೀರಿ ಎಂದು ಪ್ರಶ್ನೆ ಕೇಳಿದ್ದಕ್ಕೆ, “ನಾವು ಸ್ನಾನದ ಬಳಿಕ ಗಾಳಿಯಲ್ಲಿ ದೇಹವನ್ನು ಒಣಗಿಸುತ್ತಿದ್ದೇವೆ” ಎಂದು ಉತ್ತರಿಸಿದ್ದಾರೆ.
Advertisement
ಈ ಉತ್ತರದಿಂದ ಅನುಮಾನಗೊಂಡ ಪೊಲೀಸರು ಮತ್ತಷ್ಟು ಮಾಹಿತಿಯನ್ನು ಕಲೆ ಹಾಕಲು ಮುಂದಾದಾಗ ಕಾರನ್ನು ಚಲಾಯಿಸಿ ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಪೊಲೀಸರಿಂದ ತಪ್ಪಿಸಿಕೊಂಡು ರಾಂಗ್ ವೇನಲ್ಲಿ ಸಂಚರಿಸಿದ್ದು, ಈ ವೇಳೆ ಪೊಲೀಸ್ ಅಧಿಕಾರಿಯ ಮೇಲೆ ಕಾರನ್ನು ಹತ್ತಿಸಲು ಪ್ರಯತ್ನಿಸಿದ್ದಾರೆ.
Advertisement
Advertisement
33 ಕಿ.ಮೀಗೂ ಹೆಚ್ಚು ದೂರ ಪೊಲೀಸರು ಚೇಸ್ ಮಾಡಿ ಕಾರು ಚಲಾಯಿಸುತ್ತಿದ್ದ ಯುವತಿಯರನ್ನು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರು ಚಲಾಯಿಸುತ್ತಿದ್ದ ಯುವತಿಯನ್ನು 18 ವರ್ಷದ ಓಯಸಿಸ್ ಶಕಿರಾ ಮೆಕ್‍ಲಿಯೋಡ್ ಎಂದು ಗುರುತಿಸಲಾಗಿದ್ದು, ಸಹ ಪ್ರಯಾಣಿಕರನ್ನು 19 ವರ್ಷದ ಜೆನಿಯಾ ಮೆಕ್‍ಲಿಯೋಡ್ ಹಾಗೂ ಸೆಸಿಲಿಯಾ ಯುನಿಕ್ ಯಂಗ್ ಎಂದು ತಿಳಿದುಬಂದಿದೆ. ಕಾರಿನಲ್ಲಿ ಗಾಂಜಾ ಪತ್ತೆಯಾಗಿದೆ.
Advertisement
ಮೂವರು ಯುವತಿಯರ ಮೇಲೆ ಕಾನೂನು ಜಾರಿ ಮಾಡುವ ಅಧಿಕಾರಿ ಮೇಲೆ ಹಲ್ಲೆ, ಅಸಭ್ಯ ವರ್ತನೆ, ತಪ್ಪಿಸಿಕೊಳ್ಳಲು ಯತ್ನ ಇತ್ಯಾದಿ ಕಾನೂನುಗಳಡಿ ಅವರ ವಿರುದ್ಧ ಪೊಲೀಸರು ಕೇಸ್ ಹಾಕಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.