ಬೆಳಗಾವಿ: ವಿದ್ಯುತ್ ಸ್ಪರ್ಶಿಸಿ (Electrocuted) ಒಂದೇ ಕುಟುಂಬದ ಮೂವರು ದಾರುಣವಾಗಿ ಸಾವನ್ನಪ್ಪಿದ ಘಟನೆ ಬೆಳಗಾವಿ (Belagavi) ಜಿಲ್ಲೆಯ ಶಾಹುನಗರದಲ್ಲಿ (Shahunagar) ಶನಿವಾರ ಮುಂಜಾನೆ ನಡೆದಿದೆ.
ಮೃತರು ಮೂತಃ ರಾಮದುರ್ಗ (Ramadurga) ತಾಲೂಕಿನ ಅರಬೆಂಚಿ ತಾಂಡಾದವರಾಗಿದ್ದು, ಅಜ್ಜ ಈರಪ್ಪಾ ಗಂಗಪ್ಪಾ ಲಮಾಣಿ (50), ಅಜ್ಜಿ ಶಾಂತವ್ವ ಈರಪ್ಪಾ ಲಮಾಣಿ (45) ಹಾಗೂ ಮೊಮ್ಮಗಳು ಅನ್ನಪೂರ್ಣ ಹುನ್ನಪ್ಪ ಲಮಾಣಿ (8) ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮನೆಯಲ್ಲಿ ನೀರು ಕಾಯಿಸಲು ಕಾಯಿಲ್ ಹಾಕಿದ ವೇಳೆ ಮೊಮ್ಮಗಳಿಗೆ (Grand Daughter) ವಿದ್ಯುತ್ ತಗುಲಿದ್ದು, ಮೊಮ್ಮಗಳನ್ನು ಕಾಪಾಡುವ ಸಲುವಾಗಿ ಅಜ್ಜ (Grandfather), ಅಜ್ಜಿ (Grandmother) ಹೋಗಿದ್ದಾರೆ. ಈ ವೇಳೆ ಅವರಿಗೂ ವಿದ್ಯುತ್ ಸ್ಪರ್ಶವಾಗಿದ್ದು, ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ನಕಲಿ ಇನ್‌ಸ್ಟಾಗ್ರಾಂ ಖಾತೆ ಸೃಷ್ಟಿಸಿ ವಿದ್ಯಾರ್ಥಿನಿಯರಿಗೆ ಬೆದರಿಕೆ – ಇಬ್ಬರು ವಿದ್ಯಾರ್ಥಿಗಳು ಅರೆಸ್ಟ್
ಬೆಳಗಾವಿಯ ಶಾಹುನಗರ 7ನೇ ಕ್ರಾಸ್‌ನ ನಿರ್ಮಾಣ ಹಂತದಲ್ಲಿದ್ದ ಮನೆಯಲ್ಲಿ ಘಟನೆ ನಡೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದು, ಘಟನಾ ಸ್ಥಳಕ್ಕೆ ಎಪಿಎಂಸಿ ಪೊಲೀಸರು ಮತ್ತು ಹೆಸ್ಕಾಂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಮಕ್ಕಳಿಗೆ ಜಾಮೂನಿನಲ್ಲಿ ವಿಷ ಹಾಕಿದ ತಂದೆ – ಬಳಿಕ ತಾನೂ ಆತ್ಮಹತ್ಯೆಗೆ ಯತ್ನ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]