ಮೈಸೂರು ಜೈಲಿನಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಮೂವರು ಕೈದಿಗಳು ಸಾವು

Public TV
1 Min Read
MYSURU

– ಕೇಕ್‌ಗೆ ಬಳಸುವ ಎಸ್ಸೆನ್ಸ್‌ ಸೇವಿಸಿದ್ದ ಕೈದಿಗಳು

ಮೈಸೂರು: ಇಲ್ಲಿನ ಕಾರಾಗೃಹದಲ್ಲಿ (Mysuru Jail) ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಮೂವರು ಕೈದಿಗಳು ಮೃತಪಟ್ಟಿದ್ದಾರೆ. ಕೇಕ್ ತಯಾರಿಕೆಗೆ ಬಳಸುವ ಎಸ್ಸೆನ್ಸ್‌ (Cake Essence) ದ್ರವ ಕುಡಿದ ಪರಿಣಾಮ ಮೂವರು ಮೃತಪಟ್ಟಿದ್ದಾರೆ.

ವಿವಿಧ ಅಪರಾಧ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಮೈಸೂರು ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಮೂವರು ಕೈದಿಗಳು ಮೃತಪಟ್ಟಿದ್ದಾರೆ. ಡಿಸೆಂಬರ್ 26 ರಂದು ಮೈಸೂರು ಕಾರಾಗೃಹದಲ್ಲಿ ಬೇಕರಿ ಪದಾರ್ಥಗಳನ್ನು ತಯಾರಿಸುವಾಗ ಕೈದಿಗಳಾದ ಮಾದೇಶ್, ನಾಗರಾಜ್ ಮತ್ತು ರಮೇಶ್ ಪದಾರ್ಥಗಳಿಗೆ ಬಳಸುವ ಎಸ್ಸೆನ್ಸಿಯಲ್ ದ್ರವವನ್ನು ಕುಡಿದಿದ್ದರು. ಪರಿಣಾಮ ಮೂವರು ತೀವ್ರವಾಗಿ ಅಸ್ವಸ್ಥಗೊಂಡಿದ್ದರು.

ಮೂವರನ್ನು ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನಗಳ ಹಿಂದೆ ಗುಂಡ್ಲುಪೇಟೆಯ ಮಾದೇಶ್ ಮೃತಪಟ್ಟಿದ್ದ. ನಿನ್ನೆ ಚಾಮರಾಜನಗರ ಮೂಲದ ನಾಗರಾಜ್ ಮೃತಪಟ್ಟಿದ್ದ. ಇವತ್ತು ಮಂಡ್ಯ ಮೂಲದ ರಮೇಶ್ ಮೃತಪಟ್ಟಿದ್ದಾನೆ. ದನ್ನೂ ಓದಿ: ಸ್ಟ್ರಾಂಗ್‌ ಆಗಿರಿ – ರೋಹಿತ್‌ ಕ್ರಿಕೆಟ್‌ ಲೋಕದ ಸೂಪರ್‌ ಸ್ಟಾರ್‌ ಎಂದ ಪೋರ್ನ್‌ ಸ್ಟಾರ್‌

ಮೃತ ದೇಹಗಳ ಮರಣೋತ್ತರ ಪರೀಕ್ಷೆ ನ್ಯಾಯಾಧೀಶರ ಸಮ್ಮುಖದಲ್ಲಿ ನಡೆಸಿ ನಂತರ ಮೃತ ದೇಹಗಳನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಈ ಪ್ರಕರಣ ಬಗ್ಗೆ ಕಾರಾಗೃಹ ಇಲಾಖೆಯ ಹಿರಿಯ ಅಧಿಕಾರಿಗಳು ಇಲಾಖಾ ಮಟ್ಟದ ತನಿಖೆ ಕೂಡ ಶುರು ಮಾಡಿದ್ದಾರೆ. ದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಅಲ್ಲ, ಇಂದು ಸಿಎಂ ಸಮ್ಮುಖದಲ್ಲೇ ಶರಣಾಗಲಿದ್ದಾರೆ ನಕ್ಸಲರು

Share This Article