ತೆಹ್ರಾನ್: ಹಿಜಬ್ (Hijab) ಧರಿಸದ್ದಕ್ಕೆ ನೈತಿಕ ಪೊಲೀಸ್ಗಿರಿಗೆ ಯುವತಿ ಬಲಿಯಾದ ಪ್ರಕರಣ ವಿರೋಧಿಸಿ ಇರಾನ್‌ನಲ್ಲಿ (Iran Protest) ಪ್ರತಿಭಟನೆ ಭುಗಿಲೆದ್ದಿದೆ. ಪ್ರತಿಭಟನೆ ವೇಳೆ ಮೂವರು ಸಾವನ್ನಪ್ಪಿದ್ದಾರೆ.
ಪ್ರತಿಭಟನೆಯಲ್ಲಿ ಮೂವರು ಸಾವಿಗೀಡಾಗಿರುವ ಬಗ್ಗೆ ಇರಾನ್ ಗವರ್ನರ್ ಎಸ್ಮಾಯಿಲ್ ಜರೀ ಕೌಶಾ ದೃಢಪಡಿಸಿದ್ದಾರೆ. ಯಾವುದೇ ಹಂತದ ಭದ್ರತಾ ಅಥವಾ ಕಾನೂನು ಜಾರಿ ಪಡೆಗಳು ಬಳಸದ ಬಂದೂಕುಗಳಿಂದ ಪ್ರತಿಭಟನಾಕಾರರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ತನಿಖೆಗಳು ದೃಢಪಡಿಸಿವೆ ಎಂದು ವಾಯುವ್ಯ ಕುರ್ದಿಸ್ತಾನ್ ಪ್ರಾಂತ್ಯದ ಗವರ್ನರ್ ಕೌಶಾ ಹೇಳಿದ್ದಾರೆ. ಇದನ್ನೂ ಓದಿ: ನೈತಿಕ ಪೊಲೀಸ್ಗಿರಿಗೆ ಯುವತಿ ಬಲಿ: ತಲೆ ಕೂದಲು ಕತ್ತರಿಸಿ, ಹಿಜಬ್ ಸುಟ್ಟು ಇರಾನಿ ಮಹಿಳೆಯರ ಆಕ್ರೋಶ
Advertisement
Advertisement
ಮೃತರಲ್ಲಿ ಒಬ್ಬರು ದಿವಾಂಡರೆಹ್‌ನಲ್ಲಿ ಮೃತಪಟ್ಟಿದ್ದಾರೆ. ಇನ್ನೊಬ್ಬರು ಸಾಕ್ವೆಜ್‌ನ ಆಸ್ಪತ್ರೆ ಬಳಿ ಸಾವನ್ನಪ್ಪಿದ್ದರೆ, ಮತ್ತೊಬ್ಬರದು ಅನುಮಾನಾಸ್ಪದ ಸಾವಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಗವರ್ನರ್ ತಿಳಿಸಿದ್ದಾರೆ.
Advertisement
ಹಿಜಬ್ ಧರಿಸಿಲ್ಲ ಎಂಬ ಕಾರಣಕ್ಕೆ 22 ವಯಸ್ಸಿನ ಯುವತಿ ಮಹ್ಸಾ ಆಮಿನಿ (Mahsa Amini), ನೈತಿಕ ಪೊಲೀಸ್‌ಗಿರಿಗೆ ಬಲಿಯಾಗಿದ್ದಳು. ಆಕೆಯನ್ನು ಹಿಜಬ್‌ಧಾರಿ ಮಹಿಳೆಯರೇ ಥಳಿಸಿದ್ದರು. ನಂತರ ಬಲವಂತವಾಗಿ ಪೊಲೀಸರಿಗೆ ಕಾರಿಗೆ ನೂಕು ದೌರ್ಜನ್ಯ ನಡೆಸಲಾಗಿತ್ತು. ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಇದರಿಂದ ಗಂಭೀರ ಸ್ಥಿತಿಯಲ್ಲಿದ್ದ ಯುವತಿ ಸಾವನ್ನಪ್ಪಿದ್ದಳು. ಈ ಘಟನೆಯನ್ನು ಖಂಡಿಸಿ ಇರಾನ್‌ನಲ್ಲಿ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ. ಇದನ್ನೂ ಓದಿ: ಹಿಜಬ್ ಧರಿಸಿಲ್ಲ ಅಂತಾ ಪೊಲೀಸರು ಬಂಧಿಸಿದ್ದಕ್ಕೆ ಕೋಮಾ ಸ್ಥಿತಿ ತಲುಪಿ ಯುವತಿ ಸಾವು
Advertisement
ಪ್ರತಿಭಟನೆ ಗಂಭೀರತೆ ಅರಿತ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಯುವತಿ ಆಮಿನಿ ತಂದೆಗೆ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ಅಲ್ಲದೇ ಘಟನೆ ಕುರಿತು ತನಿಖೆ ನಡೆಸಿ ಕ್ರಮವಹಿಸಲಾಗುವುದು ಎಂದು ಭರವಸೆ ಕೂಡ ನೀಡಿದ್ದಾರೆ.