ಹಾವೇರಿ: ಜಿಲ್ಲೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಮೂವರು ಬಲಿಯಾಗಿದ್ದಾರೆ.
ಮೃತರನ್ನು ಚಂದ್ರಶೇಖರ ಕೋಡಿಹಳ್ಳಿ (70), ಗನಿಸಾಬ್ ಬಂಕಾಪುರ (70) ಹಾಗೂ ಭರತ್ (22) ಎಂದು ಗುರುತಿಸಲಾಗಿದ್ದು, 5ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.ಇದನ್ನೂ ಓದಿ:ಪ್ರತಿ ಮನೆಗೆ ಸರ್ಕಾರಿ ಉದ್ಯೋಗ, 125 ಯೂನಿಟ್ ಉಚಿತ ವಿದ್ಯುತ್: ಬಿಹಾರಿಗಳಿಗೆ ಭರಪೂರ ಕೊಡುಗೆ
ಹಾವೇರಿ ವೀರಭದ್ರಶ್ವರ ದೇವಸ್ಥಾನದ ಮುಂದೆ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗವಹಿಸಿ ಮನೆಗೆ ಹೋಗುತ್ತಿದ್ದ ಹೋರಿ ತಿವಿದು ಚಂದ್ರಶೇಖರ ಎಂಬ ವಯೋವೃದ್ದ ಸಾವನ್ನಪ್ಪಿದ್ದಾರೆ. ದೇವಿಹೊಸೂರು ಗ್ರಾಮದಲ್ಲಿ ಹೋರಿ ಹಬ್ಬದಲ್ಲಿ ಭಾಗವಹಿಸಿದ ಹೋರಿ ಮನೆಗೆ ನುಗ್ಗಿ ವಯೋವೃದ್ದ ಗನಿಸಾಬ್ ಬಂಕಾಪುರ ಎಂಬುವವರನ್ನು ತಿವಿದ ಪರಿಣಾಮ ಸಾವನ್ನಪ್ಪಿದ್ದಾರೆ. ತಿಳವಳ್ಳಿ ಗ್ರಾಮದಲ್ಲಿ ಹೋರಿ ಹಬ್ಬವನ್ನು ನೋಡಲು ಹೋದ ಯುವಕ ಭರತ್ ಬಲಿಯಾಗಿದ್ದಾನೆ.
ಗಾಯಗೊಂಡ ಜನರಿಗೆ ಹುಬ್ಬಳ್ಳಿಯ ಕಿಮ್ಸ್ ಹಾಗೂ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.ಇದನ್ನೂ ಓದಿ: ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ರಾಜೇಂದ್ರ ಸಿಂಗ್ ಬಾಬು