ವಿಜಯವಾಡ: ಆಂಧ್ರಪ್ರದೇಶ ರಸ್ತೆ ಸಾರಿಗೆ ಸಂಸ್ಥೆಯ ಬಸ್‍ನ ಬ್ರೇಕ್‍ಫೇಲ್ ಆಗಿ ಭೀಕರ ರಸ್ತೆ ಅಪಘಾತ ಸಂಭವಿಸಿ ಮೂವರು ಸಾವನ್ನಪ್ಪಿರುವ ಘಟನೆ ವಿಜಯವಾಡದಲ್ಲಿ ನಡೆದಿದೆ.
ವಿಜಯವಾಡ ನಗರದ ಅಜೀತ್ ನಗರ್ ಪ್ರಮುಖ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು, ಅಪಘಾತದ ವಿಡಿಯೋ ನೋಡುಗರ ಮೈಜುಂ ಎನ್ನಿಸುವಂತೆ ಮಾಡುತ್ತಿದೆ.
ಅಪಘಾತದಲ್ಲಿ ವಿಜಯನಗರ ನಿವಾಸಿಗಳಾದ ಕುರ್ಶಿದ್(32), ಅಶ್ರತ್(12) ಎಂಬವರು ಮೃತ ಪಟ್ಟಿದ್ದಾರೆ. ಘಟನೆಯಲ್ಲಿ ಇನ್ನೂ ಹಲವು ಜನರು ಗಾಯಗೊಂಡಿದ್ದು, ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಅಪಘಾತವಾದ ಬಸ್ ವಿಜಯನಗರದ ವ್ಯಾಂಬಾಯ್ ನಿಲ್ದಾಣದಿಂದ ಪಂಡಿತ್ ನೆಹರು ಬಸ್ ನಿಲ್ದಾಣ ಮಾರ್ಗವಾಗಿ ಪ್ರಯಾಣ ಆರಂಭಿಸಿತ್ತು. ಅಜೀತ್ ನಗರ ಫ್ಲೈ ಓವರ್ ಬಳಿ ಬಂದಾಗ ಬ್ರೇಕ್ ಫೇಲ್ ಆಗಿ ಆಟೋ, ಬೈಕ್ ಸೇರಿದಂತೆ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ನಂತರ ಫ್ಲೈಓವರ್‍ನ ವಿಭಜಕಕ್ಕೆ ಡಿಕ್ಕಿ ಹೊಡೆದು ನಿಂತಿದೆ.
It's terribly sad when a bus that has a failed brake runs amok. 3 killed in this horrific accident in #Vijayawada #CCTV pic.twitter.com/HruyCgGk0F
— Paul Oommen (@Paul_Oommen) October 27, 2017