– ಕೊನೆಗೂ ಈಡೇರಲಿಲ್ಲ ಮಾಮನಿ ಕನಸು
– ಐತಿಹಾಸಿಕ ಕಿತ್ತೂರು ಉತ್ಸವ ಮೇಲೆ ಸೂತಕದ ಛಾಯೆ
– ಐತಿಹಾಸಿಕ ಕಿತ್ತೂರು ಉತ್ಸವ ಮೇಲೆ ಸೂತಕದ ಛಾಯೆ
ಬೆಳಗಾವಿ: ಒಂದೂವರೆ ವರ್ಷದ ಅವಧಿಯಲ್ಲಿ ಬೆಳಗಾವಿಯ ಮೂವರು ಪ್ರಭಾವಿ ಬಿಜೆಪಿ (BJP) ನಾಯಕರ ಅಕಾಲಿಕವಾಗಿ ನಿಧನರಾಗಿದ್ದು ಚುನಾವಣೆ ವರ್ಷದಲ್ಲೇ ಬೆಳಗಾವಿ (Belagavi) ಜಿಲ್ಲಾ ಬಿಜೆಪಿಗೆ ದೊಡ್ಡ ಆಘಾತವೇ ಎದುರಾಗಿದ್ದು ಒಂದೆಡೆಯಾದರೆ ಇದೇ ಮೊದಲ ಬಾರಿಗೆ ರಾಜ್ಯಮಟ್ಟದ ಐತಿಹಾಸಿಕ ಕಿತ್ತೂರು ಉತ್ಸವ (Kittur Utsav) ದ ಮೇಲೆ ಸೂತಕದ ಛಾಯೆ ಬಿದ್ದಿದೆ.
Advertisement
ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಮೂವರು ಪ್ರಭಾವಿ ಬಿಜೆಪಿ ನಾಯಕರ ವಿಧಿವಶರಾಗಿದ್ದಾರೆ. ರಾಜಕೀಯವಾಗಿ ಉನ್ನತ ಸ್ಥಾನಕ್ಕೇರಿದ್ದ ದಿ. ಕೇಂದ್ರ ಸಚಿವ ಸುರೇಶ್ ಅಂಗಡಿ (Suresh Angadi), ಅರಣ್ಯ ಸಚಿವ ಉಮೇಶ್ ಕತ್ತಿ (Umesh Katti) ಬಳಿಕ ಈಗ ಡೆಪ್ಯೂಟಿ ಸ್ಪೀಕರ್ ಆನಂದ ಮಾಮನಿ (Anand Mamani) ಸಾವನ್ನಪ್ಪಿದ್ದಾರೆ. ಕೊರೊನಾ ಸೋಂಕಿ (Corona Virus) ಗೆ ತುತ್ತಾಗಿದ್ದ ಸುರೇಶ್ ಅಂಗಡಿ ಚಿಕಿತ್ಸೆ ಫಲಿಸದೇ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಒಂದೂವರೆ ತಿಂಗಳ ಹಿಂದೆಯಷ್ಟೇ ಬೆಂಗಳೂರಿನಲ್ಲಿ ಹೃದಯಾಘಾತದಿಂದ ಸಚಿವ ಉಮೇಶ್ ಕತ್ತಿ ಸಾವನ್ನಪ್ಪಿದರು. ಇದೀಗ ಲೀವರ್ (Liver Problem) ಸಮಸ್ಯೆಯಿಂದ ಬಳಲುತ್ತಿದ್ದ ಆನಂದ ಮಾಮನಿ ಕೂಡ ಚಿಕಿತ್ಸೆ ಫಲಿಸದೇ ನಿನ್ನೆ ನಿಧನರಾಗಿದ್ದಾರೆ. ಚುನಾವಣೆ ವರ್ಷ ಇದ್ದಂತಹ ಸಂದರ್ಭದಲ್ಲಿ ಮೂವರು ಬಿಜೆಪಿ ಪ್ರಭಾವಿ ನಾಯಕರು ಸಾವು ಬಿಜೆಪಿಗೆ ಬರಸಿಡಿಲು ಬಡಿದಂತಾಗಿದೆ.
Advertisement
Advertisement
ಡೆಪ್ಯೂಟಿ ಸ್ಪೀಕರ್ (Deputy Speaker) ಆಗಿದ್ದಾಗಲೇ ಅಂದು ತಂದೆ, ಇಂದು ಪುತ್ರ ಸಾವು: ಬೆಳಗಾವಿ ಜಿಲ್ಲೆಯ ಸವದತ್ತಿ ಕ್ಷೇತ್ರದ ಶಾಸಕ ಆನಂದ ಮಾಮನಿ ಅವರ ತಂದೆ ಚಂದ್ರಶೇಖರ ಮಾಮನಿ ಸಹ ಡೆಪ್ಯುಟಿ ಸ್ಪೀಕರ್ ಆಗಿದ್ದಾಗಲೇ ಮೃತಪಟ್ಟಿದ್ರು. 1995-1999 ಅವಧಿಯಲ್ಲಿ ಉಪಸಭಾಧ್ಯಕ್ಷ ಸ್ಥಾನ ನಿಭಾಯಿಸಿದ್ದಾಗ ಸಾವನ್ನಪ್ಪಿದ್ದರು. ಇದೀಗ ಅದೇ ಗತ್ತಿನಲ್ಲೇ ಉಪಸಭಾಧ್ಯಕ್ಷನ ಹುದ್ದೆ ನಿಭಾಯಿಸುತ್ತಿದ್ದ ಆನಂದ ಮಾಮನಿ ಕೂಡ ಉಪಸಭಾಧ್ಯಕ್ಷರಾಗಿದ್ದಾಗಲೇ ಕಾಕತಾಳೀಯ ಎಂಬಂತೆ ಇಹಲೋಕ ತ್ಯಜಿಸಿದ್ದಾರೆ. ಇದನ್ನೂ ಓದಿ: ಡೆಪ್ಯೂಟಿ ಸ್ಪೀಕರ್ ಆನಂದ ಮಾಮನಿ ವಿಧಿವಶ
Advertisement
ಕೊನೆಗೂ ಈಡೇರಲಿಲ್ಲ ಸಚಿವರಾಗಬೇಕೆಂಬ ಕನಸು: ಬೆಳಗಾವಿ ಜಿಲ್ಲೆಯ ಹಿರಿಯ ಲಿಂಗಾಯತ ಪಂಚಮಸಾಲಿ ನಾಯಕರಾಗಿದ್ದ ಆನಂದ ಮಾಮನಿ ಅವರು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದರು. ಬಿಎಸ್‍ವೈ ಸಿಎಂ ಆಗಿದ್ದಾಗಲೇ ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ಅವರಿಗೆ ಡೆಪ್ಯೂಟಿ ಸ್ಪೀಕರ್ ಹುದ್ದೆ ನೀಡಿ ಹಿಂದಿನ ಮುಖ್ಯಮಂತ್ರಿ ಬಿಎಸ್‍ವೈ ಸಮಾಧಾನಪಡಿಸಿದ್ದರು. ಇದೀಗ ಬಸವರಾಜ ಬೊಮ್ಮಾಯಿ (Basavaraj Bommai) ಸಿಎಂ ಆಗಿದ್ದಾಗಲೂ ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದ ಆನಂದ ಮಾಮನಿ ಮಂತ್ರಿ ಸ್ಥಾನ ಕೊಡದಿದ್ರೆ ಡೆಪ್ಯೂಟಿ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬಾರಿಯೂ ಆನಂದ ಮಾಮನಿ ಅವರನ್ನ ಸಿಎಂ ಬಸವರಾಜ ಬೊಮ್ಮಾಯಿ ಮನವೊಲಿಸಿದ್ದರು. ಇದನ್ನೂ ಓದಿ: ಶೀಘ್ರದಲ್ಲೇ ಜನಸೇವೆಗೆ ಬರುತ್ತೇನೆ- ವೀಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದ ಮಾಮನಿ!
ಐತಿಹಾಸಿಕ ಕಿತ್ತೂರು ಉತ್ಸವ ಮೇಲೆ ಸೂತಕದ ಛಾಯೆ: ಸವದತ್ತಿ ಬಿಜೆಪಿ ಶಾಸಕ, ಡೆಪ್ಯೂಟಿ ಸ್ಪೀಕರ್ ಆನಂದ ಮಾಮನಿ(56) ನಿಧನ ಹಿನ್ನೆಲೆ ಐತಿಹಾಸಿಕ ಕಿತ್ತೂರು ಉತ್ಸವ ಮೇಲೆ ಸೂತಕದ ಕರಿಛಾಯೆ ಬಿದ್ದಿದೆ. ಐತಿಹಾಸಿಕ ಕಿತ್ತೂರು ಉತ್ಸವ ರದ್ದಾಗುತ್ತಾ? ಮುಂದೂಡಲಾಗುತ್ತಾ? ಎಂಬ ರಾಜ್ಯ ಸರ್ಕಾರದ ನಿರ್ಧಾರಕ್ಕಾಗಿ ಬೆಳಗಾವಿ ಜಿಲ್ಲಾಡಳಿತ ಕಾಯುತ್ತಿದೆ. ಇದೇ ಮೊದಲ ಬಾರಿಗೆ ಇಂದಿನಿಂದ ಮೂರು ದಿನಗಳ ಕಾಲ ಐತಿಹಾಸಿಕ ಕಿತ್ತೂರು ಉತ್ಸವಕ್ಕೆ ರಾಜ್ಯ ಸರ್ಕಾರ ನಿರ್ಧಾರ ಮಾಡಿತ್ತು. ಅದರಂತೆ ಇಂದು ಸಂಜೆ ನಡೆಯುವ ಕಿತ್ತೂರು ಉತ್ಸವಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದರು. ಮೂರು ದಿನಗಳ ಕಾಲ ನಡೆಯುವ ಉತ್ಸವಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಬೆಳಗಾವಿ ಜಿಲ್ಲೆ ಸವದತ್ತಿ ಶಾಸಕ ಆನಂದ ಮಾಮನಿ ವಿಧಿವಶ ಹಿನ್ನೆಲೆ ಕಿತ್ತೂರು ಉತ್ಸವ ಆಚರಣೆ ಬಗ್ಗೆ ರಾಜ್ಯ ಸರ್ಕಾರದ ನಿರ್ಧಾರಕ್ಕಾಗಿ ಬೆಳಗಾವಿ ಜಿಲ್ಲಾಡಳಿತ ಕಾಯುತ್ತಿದೆ.
Live Tv
[brid partner=56869869 player=32851 video=960834 autoplay=true]
[brid partner=56869869 player=32851 video=960834 autoplay=true]