ದೀಪಾವಳಿ ಆಚರಣೆ ವೇಳೆ ಎರಡು ಗುಂಪಿನ ನಡುವೆ ಘರ್ಷಣೆ- ಒಂದೇ ಕುಟುಂಬದ ಮೂವರು ಬಲಿ

Public TV
1 Min Read
police jeep

ಅಮರಾವತಿ: ಆಂಧ್ರಪ್ರದೇಶದ (Adhra Pradesh) ಕಾಕಿನಾಡ (Kakinada) ಜಿಲ್ಲೆಯಲ್ಲಿ ಗುರುವಾರ ದೀಪಾವಳಿ ಆಚರಣೆ ವೇಳೆ ಎರಡು ಗುಂಪುಗಳ ನಡುವಿನ ಘರ್ಷಣೆಯಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ.

ಹತ್ಯೆಗೊಳಗಾದವರನ್ನು ಬತ್ತುಲ ರಮೇಶ್, ಬತ್ತುಲ ಚಿನ್ನಿ (ಮಗ), ಬತ್ತುಲ ರಾಜು (ಮೊಮ್ಮಗ) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ವಕ್ಫ್ ಆಸ್ತಿಯನ್ನು ರಾಷ್ಟ್ರೀಯ ಸಂಪತ್ತನ್ನಾಗಿ ಘೋಷಿಸಿ – ಪ್ರಧಾನಿ ಮೋದಿಗೆ ಯತ್ನಾಳ್ ಪತ್ರ

ಪ್ರಾಥಮಿಕ ತನಿಖೆಯಲ್ಲಿ ಹಳೇ ದ್ವೇಷಕ್ಕೆ ಹತ್ಯೆ ಮಾಡಿರುವುದಾಗಿ ತಿಳಿದುಬಂದಿದೆ. ಹತ್ಯೆಗೊಳಾದವರು ಈ ಹಿಂದೆ ಆರೋಪಿಗಳ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದರು. ಇದರಿಂದ ಸೇಡಿಗಾಗಿ ಕಾದಿದ್ದ ಆರೋಪಿಗಳು ದೀಪಾವಳಿ ಸಂದರ್ಭದಲ್ಲಿ ಘರ್ಷಣೆಗಿಳಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸಕ್ಕರೆ ನಾಡಿಗೂ ಕಾಲಿಟ್ಟ ವಕ್ಫ್‌ ವಿವಾದ – ಮಂಡ್ಯದಲ್ಲಿ ದೇವಸ್ಥಾನವೇ ವಕ್ಫ್ ಆಸ್ತಿ
ಘಟನೆ ಕುರಿತು ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿ ರಾಮಕೃಷ್ಣ ರಾವ್, ನಾವು ಘಟನೆಯನ್ನು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದೇವೆ. ಪ್ರಾಥಮಿಕ ಸಾಕ್ಷ್ಯಗಳು ಕುಟುಂಬಗಳ ನಡುವೆ ಹಿಂದಿನ ದ್ವೇಷ ಕಾರಣ ಎಂದು ತಿಳಿಸುತ್ತದೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕನ್ನಡ, ಕನ್ನಡಿಗರನ್ನು ನಿಂದಿಸುವವರ ವಿರುದ್ಧ ಕಠಿಣ ಕ್ರಮ – ಸಿಎಂ ಎಚ್ಚರಿಕೆ

Share This Article